ಅಹಮದಾಬಾದ್: ಭಾ ರತ ಮತ್ತು ಇಂಗ್ಲೆಂಡ್ ನಡುವಿನ ಪ್ರಸ್ತುತ ಟಿ 20 ಸರಣಿಯಲ್ಲಿ, ಪಂದ್ಯ ನಡೆಯುವ ಸಮಯದಲ್ಲಿ ಈ ಚಿತ್ರವೊಂದು ಖಂಡಿತವಾಗಿಯೂ ನಿಮ್ಮ ಗಮನವನ್ನು ಸೆಳೆದೆ ಸೆಳೆದಿರುತ್ತದೆ. ಫೀಲ್ಡಿಂಗ್ ಸಮಯದಲ್ಲಿ ಆಗಾಗ್ಗೆ ತಲೆಯ ಮೇಲೆ ಎರಡು ಕ್ಯಾಪ್ಗಳನ್ನು ಹಾಕಿಕೊಂಡಿರುವ ಇಂಗ್ಲೆಂಡ್ ನಾಯಕ ಇಯೊನ್ ಮೋರ್ಗಾನ್ ಅವರ ಈ ನಡೆ ನಿಮ್ಮಲ್ಲಿ ಕುತೂಹಲ ಮೂಡಿಸದೆ ಇರದು. ಇಯೊನ್ ಮೋರ್ಗಾನ್ ಅವರು ತಮ್ಮ ತಲೆಯ ಮೇಲೆ ಎರಡೆರಡು ಕ್ಯಾಪ್ ತೋಡುವುದಕ್ಕೆ ಇಲ್ಲಿದೆ ನಿಜವಾದ ಕಾರಣ.
ಕೊರೊನಾ ಮಹಾಮಾರಿ ಕಾರಣ
ಎಲ್ಲಾ ಆಟಗಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲ್ಲು ಹಾಗೂ ಕ್ಯಾಚ್ ಹಿಡಿಯುವಾಗ ಸೂರ್ಯನ ಬೆಳಕು ಅಥವಾ ಲೈಟ್ ಬೆಳಕು ಕಣ್ಣಿಗೆ ತೊಂದರೆ ನೀಡಬಾರದೆಂದು ತಮ್ಮ ತಲೆಯ ಮೇಲೆ ಕ್ಯಾಪ್ ಧರಿಸಿ ಮೈದಾನಕ್ಕಿಳಿಯುತ್ತಾರೆ. ಆದರೆ ಇಂಗ್ಲೆಂಡ್ ತಂಡದ ನಾಯಕನ ತಲೆಯ ಮೇಲೆ ಎರಡು ಕ್ಯಾಪ್ಗಳನ್ನು ಎಷ್ಟೋ ಪ್ರೇಕ್ಷಕರು ತಮ್ಮಲ್ಲಿಯೇ ಹಲವು ಪ್ರಶ್ನೆಗಳನ್ನು ಹುಟ್ಟಿಸಿಕೊಂಡಿರುತ್ತಾರೆ. ವಾಸ್ತವವಾಗಿ ಇಯೊನ್ ಮೋರ್ಗಾನ್ ಅವರು ತಮ್ಮ ತಲೆಯ ಮೇಲೆ ಎರಡೆರಡು ಕ್ಯಾಪ್ ತೋಡುವುದಕ್ಕೆ ಕಾರಣವೆಂದರೆ, ಅದು ಕೊರೊನಾ ಮಹಾಮಾರಿಯೇ ಆಗಿದೆ.
ಮೋರ್ಗನ್ ಎರಡು ಕ್ಯಾಪ್ ಧರಿಸಲು ಇದು ಕಾರಣವಾಗಿದೆ
ವಾಸ್ತವವಾಗಿ ಕೋವಿಡ್ -19 ಕಾರಣದಿಂದಾಗಿ, ಕ್ರಿಕೆಟ್ ಪ್ರಪಂಚದ ಕೆಲವು ನಿಯಮಗಳು ಸಹ ಬದಲಾಗಿವೆ. ಈಗ ಆಟಗಾರರು ತಮ್ಮ ಯಾವುದೇ ವಸ್ತುಗಳನ್ನು ಅಂಪೈರ್‌ಗೆ ನೀಡುವಂತಿಲ್ಲ ಎಂಬ ನಿಯಮವೂ ಇದರಲ್ಲಿದೆ. ಹೀಗಾಗಿ ಮೋರ್ಗನ್ ಎರಡು ಕ್ಯಾಪ್ ಧರಿಸಲು ಇದು ಕಾರಣವಾಗಿದೆ. ಕೋವಿಡ್ -19 ಬರುವ ಮೊದಲು, ಆಟಗಾರರು ಬೌಲಿಂಗ್ ಮಾಡುವ ವೇಳೆ ಅಂಪೈರ್‌ಗಳ ಬಳಿ ತಾವು ಹಾಕಿಕೊಳ್ಳುತ್ತಿದ್ದ ಕ್ಯಾಪ್ ನೀಡುತ್ತಿದ್ದರು. ಆದರೆ ಈಗ ಅವರು ಹಾಗೆ ಮಾಡಲು ಸಾಧ್ಯವಿಲ್ಲ. ಐಸಿಸಿ ಪ್ರೋಟೋಕಾಲ್ ಅಡಿಯಲ್ಲಿ, ಈಗ ಆಟಗಾರರು ತಮ್ಮ ಯಾವುದೇ ವಸ್ತುಗಳನ್ನು ಅಂಪೈರ್‌ಗೆ ನೀಡುವಂತಿಲ್ಲ.
ಹೀಗಾಗಿ ಇಂಗ್ಲೆಂಡ್ ತಂಡದ ಬೌಲರ್ಗಳು ತಮ್ಮ ಓವರ್‌ಗಳನ್ನು ಎಸೆಯಲು ಬಂದಾಗಲೆಲ್ಲಾ ಕ್ಯಾಪ್ಟನ್ ಮೋರ್ಗನ್ ಬಳಿ ತಮ್ಮ ಕ್ಯಾಪನ್ನು ನೀಡಿ ಬೌಲಿಂಗ್ ಮಾಡಲು ಆರಂಭಿಸುತ್ತಾರೆ. ಓವರ್ ಮುಗಿಸಿದ ನಂತರ, ಆ ಆಟಗಾರ ಮೊರ್ಗಾನ್‌ನಿಂದ ಕ್ಯಾಪ್ ಅನ್ನು ಹಿಂತೆಗೆದುಕೊಳ್ಳುತ್ತಾನೆ. ನಂತರ ಮತ್ತೊಬ್ಬ ಬೌಲರ್ ಬೌಲಿಂಗ್ಗೆ ಇಳಿದಾಗ ಆತನ ಕ್ಯಾಪ್ ಅನ್ನು ಇಂಗ್ಲೆಂಡ್ ನಾಯಕನಿಗೆ ನೀಡುತ್ತಾನೆ. ಈ ಕಾರಣದಿಂದಾಗಿ ಇಯೊನ್ ಮೋರ್ಗಾನ್ ಅವರು ತಮ್ಮ ತಲೆಯ ಮೇಲೆ ಎರಡೆರಡು ಕ್ಯಾಪ್ ತೋಡುವುದು ಕಂಡು ಬರುತ್ತದೆ. ಇತರ ತಂಡಗಳ ನಾಯಕರು ಹಾಗೆ ಕಾಣದಿದ್ದರೂ, ಮೋರ್ಗನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಈ ಕೆಲಸವನ್ನು ಮಾಡಿದ್ದಾರೆ. ಐಪಿಎಲ್ ತಂಡದ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿರುವ ಇಯಾನ್ ಮೋರ್ಗಾನ್ ಕೂಡ ದುಬೈನಲ್ಲಿ ನಡೆದ ಐಪಿಎಲ್ ನ 13 ನೇ ಆವೃತ್ತಿಯಲ್ಲಿ ಎರಡು ಕ್ಯಾಪ್ಗಳೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.