ಶೋಕಿ ಕಡಿಮೆ ಮಾಡಿ ಆಟದ ಕಡೆ ಗಮನ ಕೊಡು; ಹಾರ್ಲೆ ಬೈಕ್‌ ಏರಿ ಬಿಲ್ಡಪ್ ಕೊಟ್ಟ ಸೈನಿಗೆ ಟ್ರೋಲಿಗರಿಂದ ತರಾಟೆ

|

Updated on: May 31, 2021 | 6:02 PM

ಸೈನಿ ತನ್ನ ದುಬಾರಿ ಮೋಟಾರುಬೈಕ್ ಹಾರ್ಲೆ ಡೇವಿಡ್ಸನ್ ಮೇಲೆ ಶರ್ಟ್​ ಧರಿಸದೆ ಕುಳಿತಿರುವ ವಿಡಿಯೋ ಹಂಚಿಕೊಂಡು, ಹಾರ್ಲೆ ಡೇವಿಡ್ಸನ್‌ ಬೈಕ್‌ ಓಡಿಸಲು ಭಯ ಅನುಭವಿಸಬೇಕಾದರೆ ನನ್ನ ಜೊತೆಗೆ ಬನ್ನಿ ಎಂದು ಬರೆದುಕೊಂಡಿದ್ದಾರೆ.

ಶೋಕಿ ಕಡಿಮೆ ಮಾಡಿ ಆಟದ ಕಡೆ ಗಮನ ಕೊಡು; ಹಾರ್ಲೆ ಬೈಕ್‌ ಏರಿ ಬಿಲ್ಡಪ್ ಕೊಟ್ಟ ಸೈನಿಗೆ ಟ್ರೋಲಿಗರಿಂದ ತರಾಟೆ
ಹಾರ್ಲೆ ಬೈಕ್‌ ಏರಿ ಬಿಲ್ಡಪ್ ಕೊಟ್ಟ ಸೈನಿಗೆ ಟ್ರೋಲಿಗರಿಂದ ತರಾಟೆ
Follow us on

ಭಾರತದ ಯುವ ಬೌಲರ್ ನವದೀಪ್ ಸೈನಿ ಟೀಮ್ ಇಂಡಿಯಾದ ಭವಿಷ್ಯದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನೂ ಆಡಿದರು. ಹೀಗೆ ಟೀಂ ಇಂಡಿಯಾದಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸೈನಿ ಇಲ್ಲದ ಶೋಕಿ ಮಾಡಲು ಹೋಗಿ ಈಗ ನೆಟ್ಟಿಗರಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸೈನಿ ಏನೋ ಮಾಡಲು ಹೋಗಿ ಇನ್ನೇನನ್ನೋ ಮಾಡಿಕೊಂಡಿದ್ದಾರೆ. ಸೈನಿ ಅವರ ಈ ವಿಡಿಯೋ ಟ್ರೋಲಿಗರಿಗೆ ಒಳ್ಳೆಯ ಆಹಾರವಾಗಿ ಹೋಗಿದೆ.

ವೀಡಿಯೊದಲ್ಲಿ ಏನಿದೆ?
ಈ ವೀಡಿಯೊದಲ್ಲಿ, ಸೈನಿ ತನ್ನ ದುಬಾರಿ ಮೋಟಾರುಬೈಕ್ ಹಾರ್ಲೆ ಡೇವಿಡ್ಸನ್ ಮೇಲೆ ಶರ್ಟ್​ ಧರಿಸದೆ ಕುಳಿತಿರುವ ವಿಡಿಯೋ ಹಂಚಿಕೊಂಡು, ಹಾರ್ಲೆ ಡೇವಿಡ್ಸನ್‌ ಬೈಕ್‌ ಓಡಿಸಲು ಭಯ ಅನುಭವಿಸಬೇಕಾದರೆ ನನ್ನ ಜೊತೆಗೆ ಬನ್ನಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜೋರಾಗಿ ಎಕ್ಸಲರೇಟರ್ ಕೊಡುವ ಮೂಲಕ ಹಿಂಬದಿಯ ಚಕ್ರವನ್ನು ವೇಗವಾಗಿ ತಿರುಗಿಸಿ ನೆಲದಿಂದ ಧೂಳನ್ನು ಮೇಲೆಬ್ಬಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭಿಮಾನಿಗಳಿಂದ ಟ್ರೋಲ್
ಈ ವೀಡಿಯೊವನ್ನು ಸೈನಿ ಪೋಸ್ಟ್ ಮಾಡಿದ ತಕ್ಷಣ, ಅವರ ಅಭಿಮಾನಿಗಳು ಕಾಮೆಂಟ್ಗಳನ್ನು ಸುರಿಸುವ ಮೂಲಕ ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಅನೇಕರು ಸೈನಿಗೆ ಎಚ್ಚರಿಕೆಯಿಂದ ಬೈಕು ಸವಾರಿ ಮಾಡಲು ಹೇಳಿದ್ದಾರೆ. ಇನ್ನೂ ಕೆಲವರು ಆಟದ ಬಗ್ಗೆ ಹೆಚ್ಚು ಗಮನ ಹರಿಸಲು ಮತ್ತು ಶೌರ್ಯವನ್ನು ಸ್ವಲ್ಪ ಕಡಿಮೆ ಮಾಡಲು ಸಲಹೆ ನೀಡಿದ್ದಾರೆ.

ಸೈನಿ ಕ್ರಿಕೆಟ್ ಜೀವನ
ಸೈನಿ ಮೊದಲ ಬಾರಿಗೆ ಐಪಿಎಲ್ 2017 ರಲ್ಲಿ ದೆಹಲಿ ಡೇರ್‌ಡೆವಿಲ್ಸ್‌ನ ಭಾಗವಾದರು. ಆದರೆ ಅಲ್ಲಿ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಒಂದು ವರ್ಷದ ನಂತರ ಐಪಿಎಲ್ 2018 ರ ಹರಾಜಿನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಖರೀದಿಸಿತ್ತು. ನವದೀಪ್ ಸೈನಿ ಅಂದಿನಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ. ಆಸಕ್ತಿದಾಯಕ ವಿಷಯವೆಂದರೆ. ಐಪಿಎಲ್ 2017 ರಲ್ಲಿ ದೆಹಲಿ ಸೈನಿಯನ್ನು ಕೇವಲ 10 ಲಕ್ಷ ರೂಪಾಯಿಗಳಿಗೆ ತೆಗೆದುಕೊಂಡಿತು. ಆದರೆ ಒಂದು ವರ್ಷದ ನಂತರ ಆರ್‌ಸಿಬಿ ಅವರಿಗೆ ಮೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು. ರಣಜಿ ಟ್ರೋಫಿಯಲ್ಲಿ ನವದೀಪ್ ಸೈನಿ ಅವರ ಅದ್ಭುತ ಪ್ರದರ್ಶನದಿಂದಾಗಿ ಅವರಿಗೆ ಅಷ್ಟು ಹಣ ನೀಡಬೇಕಾಯಿತು. ಅವರು 2017-18ರಲ್ಲಿ ಎಂಟು ಪಂದ್ಯಗಳಲ್ಲಿ 34 ವಿಕೆಟ್ ಪಡೆದರು. ಇದರಿಂದಾಗಿ ದೆಹಲಿ ತಂಡ ಫೈನಲ್‌ಗೆ ತಲುಪಿತು.