ಭಾರೀ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಇಂಗ್ಲೆಂಡ್ (India vs England) ಮಹಿಳೆಯರ ನಡುವಣ ನಿರ್ಣಾಯಕ ಮೂರನೇ ಟಿ-20 ಪಂದ್ಯದದಲ್ಲಿ (3rd T20I) ಆಂಗ್ಲರು ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದ್ದಾರೆ. ಸೃತಿ ಮಂದಾನ (Smriti Mandhana) ಸ್ಫೋಟಕ ಆಟ ತಂಡಕ್ಕೆ ಯಾವುದೆ ಸಹಾಯ ಮಾಡಲಿಲ್ಲ. ಡೆನಿಯಲ್ ವ್ಯಾಟ್ (Danielle Wyatt) ಅವರ ಅಜೇಯ ಆಟದ ನೆರವಿನಿಂದ ಇಂಗ್ಲೆಂಡ್ 8 ವಿಕೆಟ್ಗಳ ಗೆಲುವು ಸಾಧಿಸಿ ಮೂರು ಟಿ-20 ಪಂದ್ಯಗಳಲ್ಲಿ 2-1 ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸರಣಿ ವಶಪಡಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಅಂದುಕೊಂಡಂತೆ ಉತ್ತಮ ಆರಂಭ ಪಡೆದುಕೊಂಡಿಲ್ಲ. ಮೊದಲ ಓವರ್ನಲ್ಲೇ ಶೆಫಾಲಿ ವರ್ಮಾ ಶೂನ್ಯಕ್ಕೆ ಔಟ್ ಆದರು. ಹರ್ಲೀನ್ ಡಿಯೋನಲ್ 6 ರನ್ಗೆ ನಿರ್ಗಮಿಸಿ. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು, ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್ಪ್ರತ್ ಕೌರ್.
13 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಈ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿತು. ಅದರಲ್ಲೂ ಮಂದಾನ ಬಿರುಸಿನ ಆಟಕ್ಕೆ ಮುಂದಾದರೆ ಕೌರ್ ಉತ್ತಮ ಸಾತ್ ನೀಡಿದರು. ಈ ಜೋಡಿ 68 ರನ್ಗಳ ಕಾಣಿಕೆ ನೀಡಿತು. 26 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಬಾರಿಸಿ ಕೌರ್ 36 ರನ್ಗೆ ಔಟ್ ಆದರು. ಇತ್ತ ಸ್ನೇ ರಾಣ ಕೇವಲ 4 ರನ್ಗೆ ಬ್ಯಾಟ್ ಕೆಳಗಿಟ್ಟರು.
ಇದರ ನಡುವೆ ಮಂದಾನ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಯತ್ನ ಪಟ್ಟರು. 51 ಎಸೆತಗಳನ್ನು ಎದುರಿಸಿದ ಮಂದಾನ 8 ಬೌಂಡರಿ, 2 ಸಿಕ್ಸರ್ನೊಂದಿಗೆ 70 ರನ್ ಬಾರಿಸಿದರು, ರಿಚಾ ಘೋಶ್ 20 ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 18.4 ಓವರ್ನಲ್ಲೇ ಕೇವಲ 2 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ ಭರ್ಜರಿ ಜಯ ಸಾಧಿಸಿತು. ಡೆನಿಯಲ್ ವ್ಯಾಟ್ ಬ್ಯಾಟಿಂಗ್ ಅಬ್ಬವನ್ನು ತಡೆಯಲು ಭಾರತೀಯ ಬೌಲರ್ಗಳು ವಿಫಲರಾದರು.
ವ್ಯಾಟ್ ಕೇವಲ 56 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 89 ರನ್ ಚಚ್ಚಿದರು. ಇವರಿಗೆ ಕೈಜೋಡಿಸಿದ ನತಾಲಿ ಸ್ಕಿವರ್ 36 ಎಸೆತಗಳಲ್ಲಿ 42 ರನ್ ಬಾರಿಸಿದರು. 8 ವಿಕೆಟ್ಗಳ ಅಮೋಘ ಗೆಲುವಿನೊಂದಿಗೆ ಇಂಗ್ಲೆಂಡ್ ಮಹಿಳಾ ತಂಡ 2-1 ಮುನ್ನಡೆ ಸಾಧಿಸಿ ಟಿ-20 ಸರಣಿ ವಶಪಡಿಸಿಕೊಂಡಿತು. ಡೆನಿಯಲ್ ವ್ಯಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಟೂರ್ನಿಯದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ನತಾಲಿ ಸ್ಕಿವರ್ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
(ENG beats IND by eight wickets to win the match and series)