AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಪಡಿಕ್ಕಲ್ ಪದಾರ್ಪಣೆ ಅನುಮಾನ: ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸುತ್ತಿರುವ ಹೊಸ ಓಪನರ್

ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ಅವರು ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ...

IND vs SL: ಪಡಿಕ್ಕಲ್ ಪದಾರ್ಪಣೆ ಅನುಮಾನ: ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸುತ್ತಿರುವ ಹೊಸ ಓಪನರ್
India vs Sri lanka
TV9 Web
| Edited By: |

Updated on:Jul 15, 2021 | 10:34 AM

Share

ಭಾರತ ಕ್ರಿಕೆಟ್ ತಂಡ ಶ್ರೀಲಂಕಾ (India vs Sri lanka) ವಿರುದ್ಧದ ಸರಣಿಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಪ್ರಮುಖ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್ ಧವನ್ (Shikhar Dhawan) ತಂಡವನ್ನು ಮುನ್ನಡೆಸುತ್ತಿದ್ದು, ಭುವನೇಶ್ವರ್ ಕುಮಾರ್​ಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ಧವನ್, ಭುವಿ ಮತ್ತು ಹಾರ್ದಿಕ್ ಬಿಟ್ಟು ಉಳಿದೆಲ್ಲ ಆಟಗಾರರು ಹೊಸಬರೆ ಆಗಿದ್ದಾರೆ. ಸಾಕಷ್ಟು ಯುವ ಆಟಗಾರರೇ ಕೂಡಿರುವುದರಿಂದ ಈ ಟೂರ್ನಿ ಭಾರತಕ್ಕೆ ಅಗ್ನಿಪರೀಕ್ಷೆಯಾಗುವುದು ಕಂಡಿತ. ಹೀಗಾಗಿ ತನ್ನದೆ ತಂಡಕಟ್ಟಿಕೊಂಡು ಭಾರತ (Team India) ಅಭ್ಯಾಸ ಪಂದ್ಯವನ್ನು ಆಡುತ್ತಿದೆ.

ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಜುಲೈ 18 ರಂದು ಭಾರತ ಲಂಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ನಿತೀಶ್ ರಾಣ, ವರುಣ್ ಚಕ್ರವರ್ತಿ, ಕೃಷ್ಣಪ್ಪ ಗೌತಮ್ ಮತ್ತು ಚೇತನ್ ಸಕರಿಯ ಅವರಿಗೆ ಇದು ಚೊಚ್ಚಲ ಅಂತರರಾಷ್ಟ್ರೀಯ ಸರಣಿ. ಹೀಗಾಗಿ ಯಾರು ಪದಾರ್ಪಣೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ಅವರು ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಟೀಮ್ ಇಂಡಿಯಾದ ಮತ್ತೊಬ್ಬ ಆರಂಭಿಕ ಆಟಗಾರ ಪೃಥ್ವಿ ಶಾ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತರುವ ಕಾರಣ ಪಡಿಕ್ಕಲ್ ಪದಾರ್ಪಣೆ ಅನುಮಾನು. ಐಪಿಎಲ್​ನಿಂದಲೂ ಶಾ ಅತ್ಯುತ್ತಮ ಫಾರ್ಮ್​ನಲ್ಲಿದ್ದು ಆಡಿದ ಕೇವಲ 8 ಪಂದ್ಯಗಳಲ್ಲಿ 300 ರನ್ ಬಾರಿಸಿದ್ದರು.

ಶ್ರೀಲಂಕಾ ಕ್ರಿಕೆಟ್ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಭಾರತದ ಅಭ್ಯಾಸ ಪಂದ್ಯದ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಪೃಥ್ವಿ ಶಾ ಭುವನೇಶ್ವರ್ ಕುಮಾರ್, ಚಹಾಲ್, ಕುಲ್ದೀಪ್ ಯಾದವ್ ಬೌಲಿಂಗ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿರುವುದು ಸೆರೆಯಾಗಿದೆ. ಅದರಲ್ಲೂ ಸ್ಪಿನ್ ಬೌಲಿಂಗ್​ನಲ್ಲಿ ಮುಂದೆ ಬಂದು ಚೆಂಡನ್ನು ಸಿಕ್ಸರ್​ಗೆ ಅಟ್ಟುತ್ತಿದ್ದು, ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ. ಹೀಗಾಗಿ ಧವನ್ ಜೊತೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಶ್ರೀಲಂಕಾ ವಿರುದ್ಧ ಭಾರತ ತಂಡ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಸೇರಿವೆ. ಮೊದಲ ಏಕದಿನ ಪಂದ್ಯ ಜುಲೈ 18 ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 20 ಹಾಗೂ ಅಂತಿಮ ಮೂರನೇ ಏಕದಿನ ಜುಲೈ 23ಕ್ಕೆ ನಿಗದಿ ಮಾಡಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಏಕದಿನ ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.

ಇನ್ನೂ ಜುಲೈ 25 ರಂದು ಮೊದಲ ಟಿ-20 ಪಂದ್ಯ ನಡೆಯಲಿದ್ದು, ಜುಲೈ 27ಕ್ಕೆ ಎರಡನೇ ಹಾಗೂ ಜುಲೈ 29 ರಂದು ಮೂರನೇ ಟಿ-20 ಪಂದ್ಯ ಆಯೋಜಿಸಲಾಗಿದೆ. ಇದು ಸಂಜೆ 7 ಗಂಟೆಗೆ ಶುರುವಾಗಲಿದೆ. ಎಲ್ಲಾ ಏಕದಿನ ಹಾಗೂ ಟಿ-20 ಪಂದ್ಯ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ.

ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣ, ಇಶಾನ್ ಕಿಶನ್ (ವಿಕೆಟ್ ಕೀಪರ್). ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಜುವೇಂದ್ರ ಚಹಾಲ್, ರಾಹುಲ್ ಚಹಾರ್, ಕೆ. ಗೌತಮ್, ಕ್ರುನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪ- ನಾಯಕ), ದೀಪಕ್ ಚಹಾರ್, ನವ್​ದೀಪ್ ಸೈನಿ, ಚೇತನ್ ಸಕರಿಯ.

India vs England: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್

Tokyo Olympics: ಒಲಂಪಿಕ್ಸ್​ ಪದಕ ವಿತರಣೆ ಸಮಾರಂಭದಲ್ಲಿ ಮಹತ್ವದ ಬದಲಾವಣೆ.. ಏನದು?

Published On - 10:33 am, Thu, 15 July 21