(VIDEO) IND vs SL: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಆಟ: ಟೀಮ್ ಇಂಡಿಯಾಕ್ಕೆ ಹೊಸ ಓಪನರ್ ಫಿಕ್ಸ್
ಪೃಥ್ವಿ ಶಾ ಒಟ್ಟು ಎಷ್ಟು ರನ್ ಕಲೆಹಾಕಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ, ಬ್ಯಾಟ್ ಮೇಲೆತ್ತಿ ಸಂಭ್ರಮಿಸುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಭಾರತ ಕ್ರಿಕೆಟ್ ತಂಡ ಲಂಕಾನ್ನರ ನಾಡಿಗೆ ತೆರಳಿದ್ದು ಏಕದಿನ ಮತ್ತು ಟಿ-20 ಸರಣಿ ಆಡಲು ಕಾತುರದಲ್ಲಿದೆ. ಟೀಮ್ ಇಂಡಿಯಾದ ಖಾಯಂ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ತಂಡವನ್ನು ಈ ಬಾರಿ ಮುನ್ನಡೆಸುತ್ತಿದ್ದಾರೆ. ಜುಲೈ 18 ರಿಂದ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯ ಕೂಡ ಆರಂಭವಾಗಲಿದೆ. ಇದಕ್ಕೂ ಮುನ್ನ ಭಾರತೀಯ ಯುವ ಪಡೆ ಅಭ್ಯಾಸ ಪಂದ್ಯವನ್ನು ಆಡುತ್ತಿದೆ.
ಹೌದು, ಲಂಕಾ ವಿರುದ್ಧದ ಸರಣಿಗೆ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಬಿಸಿಸಿಐ ಯುವ ಪಡೆಯನ್ನು ಅಗ್ನಿ ಪರೀಕ್ಷೆಗೆ ಇಳಿಸಿದೆ. ಮೊದಲ ಏಕದಿನ ಪಂದ್ಯಕ್ಕು ಮುನ್ನ ಧವನ್ ಪಡೆ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಇದಕ್ಕಾಗಿ ತಮ್ಮದೇ ತಂಡವನ್ನು ಎರಡು ಭಾಗಗಳನ್ನಾಗಿ ಮಾಡಿದೆ.
ನಿನ್ನೆ ನಡೆದ ಎರಡನೇ ಇನ್ಟ್ರಾ ಸ್ಕ್ಯಾಡ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಓಪನರ್ ಆಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಭಾರತದ ಪ್ರಮುಖ ಸ್ಟಾರ್ ಬೌಲರ್ಗಳ ಬೌಲಿಂಗ್ ಅನ್ನು ಧೂಳಿಪಟ ಮಾಡಿಬಿಟ್ಟಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ ಅಧಿಕೃತ ಯೂಟ್ಯೂಬ್ ಖಾತೆ ಭುವನೇಶ್ವರ್ ಕುಮಾರ್ ಮತ್ತು ಶಿಖರ್ ಧವನ್ ತಂಡದ ಅಭ್ಯಾಸದ ಪಂದ್ಯದ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಯಜುವೇಂದ್ರ ಚಹಾಲ್, ಭುವನೇಶ್ವರ್, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಜಯದೇವ್ ಉನಾದ್ಕಟ್ ಸೇರಿದಂತೆ ಬಹುತೇಕ ಎಲ್ಲ ಬೌಲರ್ಗಳ ಓವರ್ನಲ್ಲಿ ಶಾ ಚೆಂಡನ್ನು ಎಲ್ಲ ಮೂಲೆಗೆ ಅಟ್ಟಿ ಬೌಂಡರಿ-ಸಿಕ್ಸರ್ ಚಚ್ಚಿದ್ದಾರೆ.
ಪೃಥ್ವಿ ಶಾ ಒಟ್ಟು ಎಷ್ಟು ರನ್ ಕಲೆಹಾಕಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ, ಬ್ಯಾಟ್ ಮೇಲೆತ್ತಿ ಸಂಭ್ರಮಿಸುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಶ್ರೀಲಂಕಾ ವಿರುದ್ಧ ಭಾರತ ತಂಡ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಸೇರಿವೆ. ಮೊದಲ ಏಕದಿನ ಪಂದ್ಯ ಜುಲೈ 18 ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 20 ಹಾಗೂ ಅಂತಿಮ ಮೂರನೇ ಏಕದಿನ ಜುಲೈ 23ಕ್ಕೆ ನಿಗದಿ ಮಾಡಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಏಕದಿನ ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.
ಇನ್ನೂ ಜುಲೈ 25 ರಂದು ಮೊದಲ ಟಿ-20 ಪಂದ್ಯ ನಡೆಯಲಿದ್ದು, ಜುಲೈ 27ಕ್ಕೆ ಎರಡನೇ ಹಾಗೂ ಜುಲೈ 29 ರಂದು ಮೂರನೇ ಟಿ-20 ಪಂದ್ಯ ಆಯೋಜಿಸಲಾಗಿದೆ. ಇದು ಸಂಜೆ 7 ಗಂಟೆಗೆ ಶುರುವಾಗಲಿದೆ. ಎಲ್ಲಾ ಏಕದಿನ ಹಾಗೂ ಟಿ-20 ಪಂದ್ಯ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ.
ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣ, ಇಶಾನ್ ಕಿಶನ್ (ವಿಕೆಟ್ ಕೀಪರ್). ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಜುವೇಂದ್ರ ಚಹಾಲ್, ರಾಹುಲ್ ಚಹಾರ್, ಕೆ. ಗೌತಮ್, ಕ್ರುನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪ- ನಾಯಕ), ದೀಪಕ್ ಚಹಾರ್, ನವ್ದೀಪ್ ಸೈನಿ, ಚೇತನ್ ಸಕರಿಯ.
129 ರನ್ಗಳ ಟಾರ್ಗೆಟ್; ಬೆನ್ನಟ್ಟಿದ ಎದುರಾಳಿ ತಂಡ 125 ರನ್ಗಳಿಗೆ ಆಲ್ಔಟ್ ಆದರೂ ಕೂಡ ಜಯ ಗಳಿಸಿತು! ಹೇಗೆ ಗೊತ್ತಾ?
ಅದ್ಭುತ ಫೀಲ್ಡಿಂಗ್ ಎದುರು ಮಂಕಾದ ಎದುರಾಳಿ! ಇಂಗ್ಲೆಂಡ್ ವಿರುದ್ಧ 2ನೇ ಟಿ-20 ಪಂದ್ಯ ಗೆದ್ದ ಭಾರತದ ವನಿತೆಯರ ತಂಡ