‘ನೀವು ಐಸಿಸಿ ಟ್ರೋಫಿ ಬಗ್ಗೆ ಮಾತಾಡ್ತೀರಿ, ಆದ್ರೆ ಕೊಹ್ಲಿ ಇನ್ನೂ IPL ಟ್ರೋಫಿಯನ್ನೇ ಗೆದ್ದಿಲ್ಲ’
ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಭಾರತ ತಂಡ ಕೂದಲೆಳೆಯಲ್ಲಿ ಮೂರು ಐಸಿಸಿ ಟ್ರೋಫಿಯನ್ನು ಕಳೆದುಕೊಂಡಿದೆ. ಚಾಂಪಿಯನ್ಟ್ರೋಫಿ 2017, 2019 ವಿಶ್ವಕಪ್ ಮತ್ತು ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್.
ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ಐಸಿಸಿ (ICC) ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಸೋಲುಕಂಡ ಬಳಿಕ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಕಳೆದ ಕೆಲವು ಸಮಯದಿಂದ ಕೊಹ್ಲಿ ಬ್ಯಾಟ್ನಿಂದ ಶತಕವೂ ಬಂದಿಲ್ಲ, ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಕೂಡ ಆಡಿಲ್ಲ. ಇದರ ನಡುವೆ ಸೋಲಿನ ಹೊಡೆತದಿಂದಾಗಿ ಕೊಹ್ಲಿ ನಾಯಕತ್ವದ ಬಗ್ಗೆ ಜೋರಾಗಿಯೇ ಚರ್ಚೆ ನಡೆಯುತ್ತಿದೆ.
ಹೀಗಿರುವಾಗ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರು ಕೊಹ್ಲಿ ಮತ್ತು ಅವರ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. “ನನಗನಿಸುವ ಪ್ರಕಾರ ವಿರಾಟ್ ಕೊಹ್ಲಿ ನಂಬರ್ ಒನ್ ನಾಯಕ. ಅವರ ದಾಖಲಗಳೇ ಅವರ ಬಗ್ಗೆ ಹೇಳುತ್ತವೆ. ವಿಶ್ವದಲ್ಲಿ ನಂಬರ್ 1 ಬ್ಯಾಟ್ಸ್ಮನ್ ಎಂದರೆ ಅದು ಕೊಹ್ಲಿ. ಎಲ್ಲರು ಐಸಿಸಿ ಟ್ರೋಫಿ ಸೋತ ಬಗ್ಗೆ ಮಾತನಾಡುತ್ತಾರೆ. ಆದರೆ ಕೊಹ್ಲಿ ಇನ್ನೂ ಐಪಿಎಲ್ ಟ್ರೋಫಿಯನ್ನೇ ಗೆದ್ದಿಲ್ಲ. ಇದಕ್ಕೆ ಒಂದಿಷ್ಟು ಸಮಯ ಬೇಕು. ಮುಂದಿನ ದಿನಗಳಲ್ಲಿ ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಬರಲಿದೆ. ಫೈನಲ್ಗೆ ತಲುಪುವುದು ಅಷ್ಟೊಂದು ಸುಲಭವಲ್ಲ. ಕೆಲವು ಬಾರಿ ತಪ್ಪುಗಳಾಗುತ್ತದೆ” ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಭಾರತ ತಂಡ ಕೂದಲೆಳೆಯಲ್ಲಿ ಮೂರು ಐಸಿಸಿ ಟ್ರೋಫಿಯನ್ನು ಕಳೆದುಕೊಂಡಿದೆ. ಚಾಂಪಿಯನ್ಟ್ರೋಫಿ 2017, 2019 ವಿಶ್ವಕಪ್ ಮತ್ತು ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್. ಈ ಮೂರರಲ್ಲೂ ಭಾರತ ಗೆಲುವು ಸಾಧಿಸಿಬಹುದಿತ್ತು. ಆದರೆ, ಅಂತಿಮ ಹಂತದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಟ್ರೋಫಿ ಕೈಚೆಲ್ಲಿತು.
ಇನ್ನೂ ಐಪಿಎಲ್ ವಿಚಾರವಾಗಿಯೂ ಮಾತನಾಡಿರುವ ರೈನಾ, ಧೋನಿ ಐಪಿಎಲ್ 2022 ರಲ್ಲಿ ಕಣಕ್ಕಿಳಿಯುವುದಿಲ್ಲ ಎಂದಾದರೆ ನಾನುಕೂಡ ಆಡುವುದಿಲ್ಲ ಎಂದು ಹೇಳಿದ್ದಾರೆ.
“ನನ್ನಲ್ಲಿ ಕ್ರಿಕೆಟ್ ಆಡುವ ಶಕ್ತಿ ಇನ್ನೂ 4-5 ವರ್ಷಗಳಿವೆ. ಈ ವರ್ಷ ಐಪಿಎಲ್ ಆದ ಬಳಿಕ ಮುಂದಿನ ವರ್ಷ ಇನ್ನೆರಡು ತಂಡಗಳು ಸೇರ್ಪಡೆ ಆಗಲಿದೆ. ನಾನು ಐಪಿಎಲ್ ಆಡಿದರೆ ಅದು ಸಿಎಸ್ಕೆ ತಂಡಕ್ಕಾಗಿ ಮಾತ್ರ. ಧೋನಿ ಮುಂದಿನ ಸೀಸನ್ನಲ್ಲಿ ಆಡಲ್ಲ ಎಂದಾದರೆ ನಾನುಕೂಡ ಕಣಕ್ಕಿಳಿಯುವುದಿಲ್ಲ. 2008 ರಿಂದ ಸಿಎಸ್ಕೆ ತಂಡದಲ್ಲಿ ನಾವಿಬ್ಬರು ಒಟ್ಟಿಗೆ ಆಡುತ್ತಿದ್ದೇವೆ. ಈ ವರ್ಷ ನಾವು ಕಪ್ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ಗೆದ್ದರೆ ಮುಂದಿನ ವರ್ಷಕೂಡ ಧೋನಿಯನ್ನು ಆಡಲು ಮನವೊಲಿಸುತ್ತೇನೆ” ಎಂದು ರೈನಾ ಹೇಳಿದ್ದಾರೆ.
(VIDEO) IND vs SL: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಆಟ: ಟೀಮ್ ಇಂಡಿಯಾಕ್ಕೆ ಹೊಸ ಓಪನರ್ ಫಿಕ್ಸ್
EURO 2020 Final: ರೋಚಕ ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದು 53 ವರ್ಷಗಳ ಬಳಿಕ ಯುರೋ ಕಪ್ ಗೆದ್ದ ಇಟಲಿ