EURO 2020 Final: ರೋಚಕ ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು 53 ವರ್ಷಗಳ ಬಳಿಕ ಯುರೋ ಕಪ್ ಗೆದ್ದ ಇಟಲಿ

ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಇಟಲಿಯ ಲಿಯೊನಾರ್ಡೊ ಬೊನುಸಿ ಗೋಲ್ ಬಾರಿಸಿ ಫಲಿತಾಂಶವನ್ನು 1-1ರಿಂದ ಸಮಗೊಳಿಸಿ ಟೈ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

EURO 2020 Final: ರೋಚಕ ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು 53 ವರ್ಷಗಳ ಬಳಿಕ ಯುರೋ ಕಪ್ ಗೆದ್ದ ಇಟಲಿ
EURO 2020 Final
Follow us
TV9 Web
| Updated By: Vinay Bhat

Updated on: Jul 12, 2021 | 11:02 AM

ಇಂಗ್ಲೆಂಡ್​ನ ವೆಂಬ್ಲಿ ಕ್ರೀಡಂಗಣದಲ್ಲಿ ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (UEFA) ಯುರೋ 2020 ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಅದ್ಭುತ ಪ್ರದರ್ಶನ ತೋರಿದ ಇಟಲಿ ತಂಡ 3-2 ಅಂತರದಿಂದ ಇಂಗ್ಲೆಂಡ್ ಅನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶೇಷ ಎಂದರೆ 1968ರ ಬಳಿಕ ಇಟಲಿ ಇದೇ ಮೊದಲ ಬಾರಿಗೆ ಯುರೋಪಿಯನ್ ಚಾಂಪಿಯನ್​ಷಿಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಪ್ರಶಸ್ತಿ ಸುತ್ತಿನ ಪಂದ್ಯದ ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು. ಆದರೆ ಇಲ್ಲಿಯೂ ಫಲಿತಾಂಶ ಹೊರ ಬಾರದ ಕಾರಣ ಪೆನಾಲ್ಟಿ ಶೂಟೌಟ್‌ ಮಾಡಬೇಕಾಯಿತು. ಈ ವೇಳೆ ಗೋಲ್‌ ಕೀಪರ್‌ ಜಿಯಾನ್ಲುಯಿಗಿ ಡೊನರುಮಾ, ಇಂಗ್ಲೆಂಡ್‌ ತಂಡದ ಎರಡು ಪೆನಾಲ್ಟಿ ಗೋಲ್‌ಗಳನ್ನು ಸೇವ್‌ ಮಾಡುವ ಮೂಲಕ ಇಟಲಿಗೆ ಐತಿಹಾಸಿಕ ಜಯ ತಂದಿತ್ತರು.

ಪಂದ್ಯ ಶುರುವಾದ 2ನೇ ನಿಮಿಷದಲ್ಲೇ ಇಂಗ್ಲೆಂಡ್‌ನ ಲೂಕ್ ಶಾ ಮೊದಲನೇ ಗೋಲ್‌ ಬಾರಿಸಿದರು. ಅದಾಗಿ ಪ್ರಥಮಾರ್ಧದಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲ್ ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಇಟಲಿಯ ಲಿಯೊನಾರ್ಡೊ ಬೊನುಸಿ ಗೋಲ್ ಬಾರಿಸಿ ಫಲಿತಾಂಶವನ್ನು 1-1ರಿಂದ ಸಮಗೊಳಿಸಿ ಟೈ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಸಂದರ್ಭ ವಿಜೇತರನ್ನು ಘೋಷಿಸುವುದಕ್ಕಾಗಿ ಪೆನಾಲ್ಟಿ ಶೂಟೌಟ್ ನಡೆಸಲಾಯಿತು. ಇದರಲ್ಲಿ ಇಟಲಿ 3 ಗೋಲ್ ದಾಖಲಿಸಿದರೆ, ಇಂಗ್ಲೆಂಡ್ 2 ಗೋಲ್ ಬಾರಿಸಿತು. ಇಂಗ್ಲೆಂಡ್‌ ತಂಡದ ಪರ ಪೆನಾಲ್ಟಿ ಶೂಟೌಟ್‌ನಲ್ಲಿ ಹ್ಯಾರಿ ಕೇನ್‌, ಮಗ್ಯೂರಿ ಮಾತ್ರ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಆದರೆ, ರ್ಯಾಷ್‌ಪರ್ಡ್‌, ಜೆ ಸ್ಯಾಂಚೊ ಹಾಗೂ ಬಿ ಸಾಕಾ ಗೋಲು ಗಳಿಸುವಲ್ಲಿ ವಿಫಲರಾದರು.

ಇಟಲಿ ಪರ, ಬೆಲೊಟ್ಟಿ ಹಾಗೂ ಜೊರ್ಗಿನ್ಹೋ ಗೋಲು ಗಳಿಸುವಲ್ಲಿ ವಿಫಲರಾದರೂ ಬೆನಾರ್ಡಿ, ಬೆನುಸ್ಸಿ ಹಾಗೂ ಬೆನಾರ್ಡಿಸ್ಕೀ ಅವರು ಗಳಿಸಿದ ಮೂರು ಗೋಲುಗಳಿಂದ ಇಟಲಿ ಗೆದ್ದು ಸಂಭ್ರಮಿಸಿತು. ಈ ಮೂಲಕ ಬರೋಬ್ಬರಿ 53 ವರ್ಷಗಳ ಬಳಿಕ ಇಟಲಿ ಯೂರೋ ಕಪ್‌ ತನ್ನದಾಗಿಸಿತು.

(VIDEO) IND vs SL: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಆಟ: ಟೀಮ್ ಇಂಡಿಯಾಕ್ಕೆ ಹೊಸ ಓಪನರ್ ಫಿಕ್ಸ್

129 ರನ್​ಗಳ ಟಾರ್ಗೆಟ್; ಬೆನ್ನಟ್ಟಿದ ಎದುರಾಳಿ ತಂಡ 125 ರನ್​ಗಳಿಗೆ ಆಲ್​ಔಟ್ ಆದರೂ ಕೂಡ ಜಯ ಗಳಿಸಿತು! ಹೇಗೆ ಗೊತ್ತಾ?

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ