129 ರನ್​ಗಳ ಟಾರ್ಗೆಟ್; ಬೆನ್ನಟ್ಟಿದ ಎದುರಾಳಿ ತಂಡ 125 ರನ್​ಗಳಿಗೆ ಆಲ್​ಔಟ್ ಆದರೂ ಕೂಡ ಜಯ ಗಳಿಸಿತು! ಹೇಗೆ ಗೊತ್ತಾ?

ಮಾಲ್ಟಾ ತಂಡಕ್ಕೆ ಗೆಲ್ಲಲು 129 ರನ್‌ಗಳ ಅಗತ್ಯವಿತ್ತು. ಆದರೆ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು 125 ರನ್‌ಗಳಿಗೆ ಆಲೌಟ್ ಆದರು ಆದರೆ ತಂಡವನ್ನು ವಿಜಯಶಾಲಿ ಎಂದು ಘೋಷಿಸಲಾಯಿತು

129 ರನ್​ಗಳ ಟಾರ್ಗೆಟ್; ಬೆನ್ನಟ್ಟಿದ ಎದುರಾಳಿ ತಂಡ 125 ರನ್​ಗಳಿಗೆ ಆಲ್​ಔಟ್ ಆದರೂ ಕೂಡ ಜಯ ಗಳಿಸಿತು! ಹೇಗೆ ಗೊತ್ತಾ?
ಪ್ರತಿಯೊಬ್ಬ ಆಟಗಾರನು ತನ್ನ ದೇಶಕ್ಕಾಗಿ ಕ್ರಿಕೆಟ್ ಆಡಬೇಕೆಂಬ ಕನಸನ್ನು ಹೊಂದಿರುತ್ತಾನೆ. ಅದಕ್ಕಾಗಿ ಆತ ಕಷ್ಟಪಟ್ಟು ಅಭ್ಯಾಸ ಮಾಡುತ್ತಾನೆ. ಆದರೆ ಕೆಲವು ಆಟಗಾರರು ಒಂದು ದೇಶದಿಂದ ಅಲ್ಲ ಎರಡು ದೇಶಗಳಿಂದ ಕ್ರಿಕೆಟ್ ಆಡಿದವರು ಇದ್ದಾರೆ. ಇಂದು ನಾವು ನಿಮಗೆ ಎರಡು ದೇಶಗಳಿಗಾಗಿ ಕ್ರಿಕೆಟ್ ಆಡಿದ ಕೆಲವು ಆಟಗಾರರ ಬಗ್ಗೆ ಹೇಳಲಿದ್ದೇವೆ.
Follow us
TV9 Web
| Updated By: Skanda

Updated on: Jul 12, 2021 | 8:13 AM

129 ರನ್‌ಗಳನ್ನು ಬೆನ್ನಟ್ಟಿದ ತಂಡವನ್ನು 125 ರನ್‌ಗಳಿಗೆ ಆಲ್​ಔಟ್ ಮಾಡಲಾಯಿತು. ಆದರೆ ಸೋತ ತಂಡವನ್ನು ವಿಜೇತ ತಂಡ ಘೋಷಿಸಲಾಯಿತು. ಗುರಿಗಿಂತ ಕಡಿಮೆ ರನ್ ಗಳಿಸಿ, ಇಡೀ ತಂಡವು ಆಲ್ ಔಟ್ ಆದ ನಂತರವೂ ಆ ತಂಡ ಗೆದ್ದಾಗ ನಮಗೆಲ್ಲರಿಗೂ ಆಶ್ಚರ್ಯವಾಗುವುದು ಸಹಜ. ಅಂತಹ ವಿಚಿತ್ರ ಘಟನೆಯೊಂದು ಮಾಲ್ಟಾ ಮತ್ತು ಬೆಲ್ಜಿಯಂ ನಡುವಿನ ನಾಲ್ಕನೇ ಟಿ 20 ಪಂದ್ಯದ ವೇಳೆ ಇದು ಸಂಭವಿಸಿದೆ. ಮಾಲ್ಟಾ ತಂಡಕ್ಕೆ ಗೆಲ್ಲಲು 129 ರನ್‌ಗಳ ಅಗತ್ಯವಿತ್ತು. ಆದರೆ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು 125 ರನ್‌ಗಳಿಗೆ ಆಲೌಟ್ ಆದರು ಆದರೆ ತಂಡವನ್ನು ವಿಜಯಶಾಲಿ ಎಂದು ಘೋಷಿಸಲಾಯಿತು ಮತ್ತು ಬೆಲ್ಜಿಯಂ ಸೋಲನ್ನು ಎದುರಿಸಬೇಕಾಯಿತು. ಮಾಲ್ಟಾ ತಂಡಕ್ಕೆ ಐದು ಪೆನಾಲ್ಟಿ ರನ್​ಗಳು ಸಿಕ್ಕಿದ್ದರಿಂದ ಅವರು ಜಯ ಗಳಿಸಬೇಕಾಯ್ತು. ಪಂದ್ಯದ ಅಧಿಕಾರಿಯೊಬ್ಬರೊಂದಿಗೆ ಬೆಲ್ಜಿಯಂ ತಂಡದ ಆಟಗಾರ ಅನುಚಿತವಾಗಿ ನಡೆದುಕೊಂಡ ಆರೋಪದಡಿಯಲ್ಲಿ ಬೆಲ್ಜಿಯಂ ತಂಡಕ್ಕೆ 5 ರನ್​ಗಳ ಪೆನಾಲ್ಟಿ ಹಾಕಲಾಯಿತು. ಹೀಗಾಗಿ ಮಾಲ್ಟಾ ಪೆನಾಲ್ಟಿ ಯಿಂದ ಐದು ರನ್ ಗಳಿಸಿ ಜಯಗಳಿಸಿತು. ಆದರೆ, ಈ ನಿರ್ಧಾರದ ಬಗ್ಗೆ ಸಾಕಷ್ಟು ವಿವಾದಗಳು ಕೇಳಿಬಂದಿವೆ.

ಮಾಹಿತಿಯ ಪ್ರಕಾರ, ಬೆಲ್ಜಿಯಂ ತಂಡದ ಆಟಗಾರ ಶಹರ್ಯಾರ್ ಬಟ್ ಪಂದ್ಯಕ್ಕೆ ಸಂಬಂಧಿಸಿದ ಅಧಿಕಾರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಬಟ್ ಯಾವಾಗ ಕೆಟ್ಟದಾಗಿ ವರ್ತಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಅಥವಾ ಮಾಲ್ಟಾ ತಂಡ ಬ್ಯಾಟಿಂಗ್ ಮಾಡುವ ಸಮಯದಲ್ಲಿ ಕೆಟ್ಟದಾಗಿ ವರ್ತಿಸಿದ್ದಾರೆಯೇ?ಎಂಬುದು ಕೂಡ ಇನ್ನೂ ಏನೂ ಸ್ಪಷ್ಟವಾಗಿಲ್ಲ. ಆದರೆ ಬಟ್ ಅವರ ದುರವರ್ತನೆಯಿಂದಾಗಿ ಅವರ ತಂಡಕ್ಕೆ ಐದು ರನ್ ದಂಡ ವಿಧಿಸಲಾಯಿತು. ಈ ನಿರ್ಧಾರವನ್ನು ಶಿಸ್ತು ಕ್ರಮದಡಿಯಲ್ಲಿ ತೆಗೆದುಕೊಳ್ಳಲಾಗಿದೆ.

ಬೆಲ್ಜಿಯಂ ಆಟಗಾರರು ವಿಜಯದ ಸಂಭ್ರಮದಲ್ಲಿ ನಿರತ ರನ್ಗಳನ್ನು ಬೆನ್ನಟ್ಟಿದ ಮಾಲ್ಟಾ ತಂಡವನ್ನು ಕೊನೆಯ ಓವರ್ನಲ್ಲಿ 125 ರನ್ಗಳಿಗೆ ಆಲ್​ಔಟ್ ಮಾಡಲಾಯಿತು. ಕೊನೆಯ ಓವರ್‌ನಲ್ಲಿ ಮಾಲ್ಟಾ ಗೆಲುವಿಗೆ ಐದು ರನ್‌ಗಳ ಅಗತ್ಯವಿತ್ತು. ಆದರೆ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಲಾಯಿತು ಮತ್ತು ನಂತರ ಅಶೋಕ್ ಬಿಷ್ಣೋಯ್ ಎರಡನೇ ಎಸೆತದಲ್ಲಿ ಔಟ್ ಆದರು. ಈ ರೀತಿಯಾಗಿ ತಂಡವು ಗುರಿ ತಲುಪುವ ಮುಂಚೆಯೇ ಸರ್ವಪತನಗೊಂಡಿತು. ಬಳಿಕ ಬೆಲ್ಜಿಯಂ ಆಟಗಾರರು ಮೈದಾನದಲ್ಲೇ ಸಂಭ್ರಮಾಚರಣೆಯನ್ನು ಪ್ರಾರಂಭಿಸಿದರು. ಆದರೆ ಕೆಲವು ನಿಮಿಷಗಳ ನಂತರ, ಎಂಸಿಸಿ ಕಾನೂನು 16.7 ರ ಅಡಿಯಲ್ಲಿ ಮಾಲ್ಟಾ ತಂಡವನ್ನು ವಿಜೇತರೆಂದು ಘೋಷಿಸಲಾಯಿತು. ಈ ನಿಯಮದಡಿಯಲ್ಲಿ ಮಾಲ್ಟಾ ಐದು ರನ್ ಗಳಿಸಿತು.

ನಿಯಮ ಹೇಳುವುದೇನು? ಪಂದ್ಯದ ಅಧಿಕಾರಿಗಳು ಕೊನೆಯ ಓವರ್‌ಗೆ ಮೊದಲು ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರ ಫೀಲ್ಡ್ ಅಂಪೈರ್‌ಗಳು ಮತ್ತು ಬೆಲ್ಜಿಯಂ ಆಟಗಾರರ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಅಂಪೈರ್‌ಗಳು ರನ್‌ಗಳನ್ನು ಹೆಚ್ಚಿಸಲು ಸ್ಕೋರರ್‌ಗಳಿಗೆ ಸೂಚಿಸಿರಲಿಲ್ಲ ಅಥವಾ ಮೈದಾನದಲ್ಲಿ ಪೆನಾಲ್ಟಿ ರನ್‌ಗಳ ಕುರಿತು ಮಾತುಕತೆ ನಡೆದಿದೆ ಎಂದು ಪ್ರಸಾರಕರು ಹೇಳಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯದ ನಂತರ ಫಲಿತಾಂಶ ಬಂದಾಗ, ಈ ರೀತಿಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂಬ ವಿವಾದಗಳು ಎದ್ದಿವೆ. ಎಂಸಿಸಿಯ ನಿಯಮ 42 ರ ಪ್ರಕಾರ, ಪೆನಾಲ್ಟಿ ರನ್ಗಳನ್ನು ನೀಡಿದರೆ, ಅದು ತಕ್ಷಣವೇ ಸ್ಕೋರ್​ಬೋರ್ಡ್​ನಲ್ಲಿ ಅಪ್​ಡೆಟ್ ಆಗಬೇಕು ಮತ್ತು ರನ್ ಅನ್ನು ಹೆಚ್ಚಿಸಲು ಸ್ಕೋರರ್​ಗೆ ಹೇಳಬೇಕು. ಈ ರೀತಿಯ ನಿಯಾಮಾನುಸಾರವಾಗಿ ಕ್ರಮ ಜರುಗಿರದಿದ್ದರೆ ಈ ನಿರ್ಧಾರವನ್ನು ತಡೆಹಿಡಿಯಲಾಗುತ್ತದೆ. ಇದೀಗ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಐಸಿಸಿ ಕೂಡ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್