AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Euro 2020: ಫೈನಲ್​ನಲ್ಲಿ ಸೋತ ಇಂಗ್ಲೆಂಡ್, ಕೋಪಗೊಂಡ ಬೆಂಬಲಿಗರಿಂದ ಇಟಲಿ ತಂಡದ ಅಭಿಮಾನಿಗಳ ಮೇಲೆ ಮನಬಂದಂತೆ ಹಲ್ಲೆ! ವಿಡಿಯೋ ನೋಡಿ

Euro 2020: ಕ್ರೀಡಾಂಗಣದ ಒಳಗಿನಿಂದ ಹೊರಬರುತ್ತಿರುವ ಇಟಾಲಿಯನ್ ಅಭಿಮಾನಿಗಳನ್ನು ಇಂಗ್ಲೆಂಡ್ ಬೆಂಬಲಿಗರು ಹೊಂಚುಹಾಕಿ ಹಿಡಿದು, ಮನಬಂದಂತೆ ಹೊಡೆಯುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

Euro 2020: ಫೈನಲ್​ನಲ್ಲಿ ಸೋತ ಇಂಗ್ಲೆಂಡ್, ಕೋಪಗೊಂಡ ಬೆಂಬಲಿಗರಿಂದ ಇಟಲಿ ತಂಡದ ಅಭಿಮಾನಿಗಳ ಮೇಲೆ  ಮನಬಂದಂತೆ ಹಲ್ಲೆ! ವಿಡಿಯೋ ನೋಡಿ
ಇಟಲಿ ತಂಡದ ಅಭಿಮಾನಿಗಳ ಮೇಲೆ ಮನಬಂದಂತೆ ಹಲ್ಲೆ
TV9 Web
| Edited By: |

Updated on: Jul 12, 2021 | 3:56 PM

Share

ಯುರೋಪಿಯನ್ ಚಾಂಪಿಯನ್‌ಶಿಪ್‌ನ (ಯುರೋ 2020) ಫೈನಲ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ, ಇಂಗ್ಲೆಂಡ್ ತಂಡವು ಎಲ್ಲರ ಹೃದಯ ಗೆದ್ದಿತ್ತು. ಫೈನಲ್‌ನಲ್ಲಿ ಅವರ ಅದ್ಭುತ ಆಟದ ಫಲಿತಾಂಶದಿಂದ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ತಲುಪಿತು. ಆದರೆ, ಯುರೋ 2020 ರ ಅಂತಿಮ ಪಂದ್ಯದ ಸಮಯದಲ್ಲಿ ಮತ್ತು ಪಂದ್ಯ ಮುಗಿದ ನಂತರ ಇಂಗ್ಲೆಂಡ್ ತಂಡದ ಅಭಿಮಾನಿಗಳ ಗೂಂಡಾಗಿರಿ ತುಂಬಾ ಮುಜುಗರವನ್ನುಂಟು ಮಾಡಿತು. ಇದು ಇಂಗ್ಲೆಂಡ್‌ನ ಘನೆತೆಗೆ ಒಂದು ರೀತಿಯ ದಕ್ಕೆಯನ್ನುಂಟುಮಾಡಿತು. ವಾಸ್ತವವಾಗಿ, ಒಂದು ಕಡೆ, ಇಂಗ್ಲೆಂಡ್ ತನ್ನ ಆಟದಿಂದ ಎಲ್ಲರ ಹೃದಯ ಗೆದ್ದರೆ, ಮತ್ತೊಂದೆಡೆ, ಆ ತಂಡದ ಅಭಿಮಾನಿಗಳು ನಿರಂತರವಾಗಿ ಸಣ್ಣಪುಟ್ಟ ಕೃತ್ಯಗಳನ್ನು ಮಾಡುತ್ತಿರುವುದು ಕಂಡುಬಂತು.

ಈ ಅಂಧ ಅಭಿಮಾನಿಗಳು ಇಂಗ್ಲೆಂಡ್‌ ತಂಡ ಪೆನಾಲ್ಟಿ ಶೂಟ್​ಔಟ್ ಮಿಸ್‌ ಮಾಡಿದಾಗಲೆಲ್ಲ ಆಟಗಾರರನ್ನು ನಿಂದಿಸಿದರು. ಹೀಗಾಗಿ ಫುಟ್ಬಾಲ್ ಅಭಿಮಾನಿಗಳು ಮಾಡಿದ ಜನಾಂಗೀಯ ಟೀಕೆಗಳನ್ನು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಖಂಡಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ, ಇಂತಹ ಅಸಹ್ಯಕರ ವರ್ತನೆಗೆ ಕಾರಣರಾದವರು ತಮ್ಮ ಬಗ್ಗೆ ನಾಚಿಕೆಪಡಬೇಕು ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನಾಂಗೀಯ ನಿಂದನೆ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಮಾರ್ಕಸ್ ರಾಶ್‌ಫೋರ್ಡ್ ಗೋಲ್ ಪೋಸ್ಟ್ ಹೊಡೆದರೆ, ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ ಅವರ ಪೆನಾಲ್ಟಿಗಳನ್ನು ಇಟಲಿಯ ಗೋಲ್‌ಕೀಪರ್ ತಡೆದರು. ಇದಕ್ಕಾಗಿ ಮೂವರು ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ಜನಾಂಗೀಯ ನಿಂದನೆಯನ್ನು ಎದುರಿಸಿದ್ದಾರೆ. ಲಂಡನ್ ಪೊಲೀಸರು ಕೂಡ ಇದನ್ನು ಖಂಡಿಸಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್‌ನ ಅಭಿಮಾನಿಗಳು ಇಟಲಿಯ ರಾಷ್ಟ್ರಗೀತೆಯನ್ನು ಹಾಡುತ್ತಿರುವುದು ಕಂಡುಬಂತು. ಆದರೆ, ಫೈನಲ್‌ನಲ್ಲಿ ಸೋಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಇಟಲಿಯ ಬೆಂಬಲಿಗರೊಂದಿಗೆ ಜಗಳಕ್ಕಿಳಿದು ಮನಬಂದಂತೆ ತಳಿಸಿದ್ದಾರೆ.

ಯುರೋ 2020 ಫೈನಲ್ ನಂತರ ಇಂಗ್ಲೆಂಡ್ ಅಭಿಮಾನಿಗಳ ಗೂಂಡಾಗಿರಿ ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಪಂದ್ಯ ಮುಗಿದ ನಂತರ, ಇಂಗ್ಲೆಂಡ್‌ನ ಅಭಿಮಾನಿಗಳಿಂದ ಸಾಕಷ್ಟು ಗೂಂಡಾಗಿರಿ ನಡೆದಿದೆ. ಇದರ ವೀಡಿಯೊ ಕೂಡ ಹೆಚ್ಚು ವೈರಲ್ ಆಗುತ್ತಿದೆ. ಕ್ರೀಡಾಂಗಣದ ಒಳಗಿನಿಂದ ಹೊರಬರುತ್ತಿರುವ ಇಟಾಲಿಯನ್ ಅಭಿಮಾನಿಗಳನ್ನು ಇಂಗ್ಲೆಂಡ್ ಬೆಂಬಲಿಗರು ಹೊಂಚುಹಾಕಿ ಹಿಡಿದು, ಮನಬಂದಂತೆ ಹೊಡೆಯುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಅವರುಗಳನ್ನು ಪ್ರಾಣಿಗಳಂತೆ ತುಳಿಯುತ್ತಿರುವುದು ಕಂಡುಬರುತ್ತದೆ. ಇಂಗ್ಲೆಂಡ್ ಬೆಂಬಲಿಗರ ಹೆಚ್ಚಿನ ಗುಂಪನ್ನು ನೋಡಿದ ಇಟಾಲಿಯನ್ ಅಭಿಮಾನಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ದಿಕ್ಕಪಾಲಾಗಿ ಓಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಇಂಗ್ಲೆಂಡ್‌ ತಂಡಕ್ಕೆ ಅಗೌರವ ತರುವ ಕೆಲಸವನ್ನು ಅಭಿಮಾನಿಗಳು ಮಾಡಿದರು! ಯುರೋ 2020 ರ ಅಂತಿಮ ಪಂದ್ಯದ ನಂತರ, ಈ ವೀಡಿಯೊ ಮುಜುಗರವನ್ನುಂಟುಮಾಡುವುದಲ್ಲದೆ, ಇದು ವಿಶ್ವದಾದ್ಯಂತ ಇಂಗ್ಲೆಂಡ್‌ನ ಚಿತ್ರಣವನ್ನು ಕೆಡಿಸಲಿದೆ. ಮೊದಲ ಬಾರಿಗೆ ಪಂದ್ಯಾವಳಿಯ ಫೈನಲ್ ತಲುಪಿದ ಇಂಗ್ಲೆಂಡ್, ಪೆನಾಲ್ಟಿ ಶೂಟ್- ಔಟ್‌ನಲ್ಲಿ ಇಟಲಿ ತಂಡದ ವಿರುದ್ಧ 3-2 ಗೋಲುಗಳಿಂದ ಸೋಲನುಭವಿಸಿತು. ಈ ಪಂದ್ಯಾವಳಿಯಲ್ಲಿ ಇಟಲಿ ಚಾಂಪಿಯನ್ ಆಗಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಅವರು ಈ ಪ್ರಶಸ್ತಿಯನ್ನು 1968 ರಲ್ಲಿ ಮೊದಲ ಬಾರಿಗೆ ಗೆದ್ದರು.