ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತದ ಮಹಿಳಾ ತಂಡ; ಗೆಲುವಿನ ಬಳಿಕ ವಿವಾದ ಹುಟ್ಟಿಸಿದ ಅದೊಂದು ರನ್​ಔಟ್

ಆನ್-ಫೀಲ್ಡ್ ಅಂಪೈರ್ ಈ ರನ್ ಔಟ್ ಅನ್ನು ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ಮೂರನೇ ಅಂಪೈರ್ ನೈಟ್ ಕ್ರೀಸ್‌ಗೆ ಮರಳಿದ್ದಾರೆಯೇ ಎಂದು ಪರಿಶೀಲಿಸಿದರು.

ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತದ ಮಹಿಳಾ ತಂಡ; ಗೆಲುವಿನ ಬಳಿಕ ವಿವಾದ ಹುಟ್ಟಿಸಿದ ಅದೊಂದು ರನ್​ಔಟ್
ವಿವಾದಾತ್ಮಕ ರನ್​ಔಟ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 12, 2021 | 4:58 PM

ಭಾನುವಾರ ಆಡಿದ ಎರಡನೇ ಟಿ 20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ, ಭಾರತೀಯ ಆಟಗಾರರು ಅತ್ಯುತ್ತಮ ಫೀಲ್ಡಿಂಗ್ ಮಾಡಿದರು. ಇದರ ಫಲವೆ ನಾಯಕಿ ಹೀದರ್ ನೈಟ್ ರನ್ ಔಟ್ ಸೇರಿದಂತೆ ನಾಲ್ಕು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ರನ್ ಔಟ್ ಮಾಡಿದರು. ಇದು ಪಂದ್ಯದ ಹಾದಿಯನ್ನು ಬದಲಾಯಿಸಿತು. ಆದರೆ ಈಗ ಈ ರನ್ ಔಟ್ ಬಗ್ಗೆ ವಿವಾದ ಎದ್ದಿದೆ. ನೈಟ್ ಮತ್ತು ಟಮ್ಮಿ ಬ್ಯೂಮಾಂಟ್ ಅವರೊಂದಿಗೆ ಉತ್ತಮ ಜೊತೆಯಾಟ ಏರ್ಪಟ್ಟು ಪಂದ್ಯವನ್ನು ಭಾರತದ ಹಿಡಿತದಿಂದ ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಈ ರನ್ ಔಟ್ ಸಂಭವಿಸಿತು.

ಇಂಗ್ಲೆಂಡ್‌ಗೆ 42 ಎಸೆತಗಳಲ್ಲಿ 44 ರನ್‌ಗಳ ಅಗತ್ಯವಿತ್ತು. ರನ್ ಔಟ್ ನಂತರ, ಆತಿಥೇಯರಾದ ಬ್ಯೂಮಾಂಟ್ ಮತ್ತು ನೈಟ್ ಸತತ ಎಸೆತಗಳಲ್ಲಿ ಔಟಾದರು. ನಾನ್ ಸ್ಟ್ರೈಕ್​ರನಲ್ಲಿ ನಿಂತಿದ್ದ ನೈಟ್ ರನ್ ಔಟ್ ಆಗಿದ್ದರು. ಬೌಲರ್ ದೀಪ್ತಿ ಶರ್ಮಾ ಅವರ ಎಸೆತವನ್ನು ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಶಾಟ್ ನೆರವಾಗಿ ಬಾರಿಸಿದರು. ಇದರ ಫಲವಾಗಿ ಚೆಂಡು ಬೌಲರ್ ದೀಪ್ತಿಯ ಬೂಟುಗಳಿಗೆ ತಾಗಿ ಸ್ಟಂಪ್‌ಗೆ ಬಡಿಯಿತು. ಈ ಸಮಯದಲ್ಲಿ ಬೌಲರ್ ದೀಪ್ತಿ ತಮ್ಮ ಅಜಾಗರೂಕತೆಯಿಂದ ಬ್ಯಾಟ್ಸ್‌ಮನ್‌ ಕ್ರಿಸ್ ತಲುಪುವುದಕ್ಕೆ ಅಡಚಣೆವುಂಟಾಯಿತು.

ಮೂರನೇ ಅಂಪೈರ್ ನಿರ್ದಾರ ಆನ್-ಫೀಲ್ಡ್ ಅಂಪೈರ್ ಈ ರನ್ ಔಟ್ ಅನ್ನು ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ಮೂರನೇ ಅಂಪೈರ್ ನೈಟ್ ಕ್ರೀಸ್‌ಗೆ ಮರಳಿದ್ದಾರೆಯೇ ಎಂದು ಪರಿಶೀಲಿಸಿದರು. ಇಂಗ್ಲೆಂಡ್ ಆಟಗಾರ್ತಿ ನೈಟ್​ಗೆ, ದೀಪ್ತಿ ಯಾವ ರೀತಿಯ ಅಡಚನೆಯನ್ನುಂಟು ಮಾಡಿದ್ದಾರೆ ಎಂಬುದನ್ನು ಸಹ ಪರೀಕ್ಷಿಸಲಾಯಿತು. ಮತ್ತೊಂದೆಡೆ, ಪ್ರಸಾರ ತಂಡದ ಮಾರ್ಕ್ ಬುಚೆರ್, ಬೌಲರ್ ಬ್ಯಾಟ್ಸ್‌ಮನ್‌ನನ್ನು ಹಿಂತಿರುಗದಂತೆ ತಡೆದಿದ್ದಾರೆಯೇ? ಎಂದು ಪ್ರಶ್ನಿಸಿದರು. ಜೊತೆಗೆ ಇದು ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲ ಎಂಬುದನ್ನು ಸಹ ಹೇಳಿದ್ದಾರೆ. ಈ ಪರಿಸ್ಥಿತಿಯಲ್ಲಿ ಈ ಔಟನ್ನು ನೈಟ್​ಔಟ್ ಎಂದು ಪರಿಗಣಿಸಬೇಕೆಂದು ತಮ್ಮ ಅಭಿಪ್ರಾಯ ಹೊರಹಾಕಿದರು.

ನಿಯಮ ಹೇಳುವುದೇನು? ಈ ಸಂದರ್ಭದಲ್ಲಿ, ಆಟದ ಕಾನೂನು 41.5 ರ ಪ್ರಕಾರ, ಸ್ಟ್ರೈಕರ್ ಚೆಂಡನ್ನು ಆಡಿದ ನಂತರ ಯಾವುದೇ ಫೀಲ್ಡರ್ ಬ್ಯಾಟ್ಸ್‌ಮನ್‌ನನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸುವುದು ತಪ್ಪು. ಇದನ್ನು ಇಬ್ಬರು ಅಂಪೈರ್‌ಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸಲಾಗುತ್ತದೆ.

ಪಂದ್ಯದ ಮಾಹಿತಿ ಹೀಗಿದೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ ಕೇವಲ 140 ರನ್ ಗಳಿಸಲು ಸಾಧ್ಯವಾಯಿತು. ಭಾರತದ ಸ್ಪಿನ್ ಜೋಡಿ, ಪೂನಮ್ ಯಾದವ್ ಮತ್ತು ದೀಪ್ತಿ ಶರ್ಮಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮೂಲಕ ತಂಡದ ಗೆಲುವನ್ನು ಸ್ಕ್ರಿಪ್ಟ್ ಮಾಡಿದರು. ಇದು ಭಾರತವನ್ನು ಸರಣಿಯನ್ನು 1-1ರಲ್ಲಿ ಸಮಗೊಳಿಸಲು ನೆರವಾಯಿತು. ಪೂನಮ್ ನಾಲ್ಕು ಓವರ್‌ಗಳಲ್ಲಿ 17 ರನ್‌ಗಳಿಗೆ ಎರಡು ವಿಕೆಟ್ ಪಡೆದರೆ, ದೀಪ್ತಿ ನಾಲ್ಕು ಓವರ್‌ಗಳಲ್ಲಿ 18 ರನ್‌ಗಳಿಗೆ ಒಂದು ವಿಕೆಟ್ ಪಡೆದರು.