VIDEO: ಒಂದೇ ಓವರ್​ನಲ್ಲಿ ಸತತ 5 ಬೌಂಡರಿ: 17 ವರ್ಷದ ಶೆಫಾಲಿ ಸ್ಫೋಟಕ ಆಟಕ್ಕೆ ಸುಸ್ತಾದ ಇಂಗ್ಲೆಂಡ್

| Updated By: Vinay Bhat

Updated on: Jul 12, 2021 | 1:46 PM

ಅರ್ಧಶತಕದ ಅಂಚಿನಲ್ಲಿ ಎಡವಿದ ಶೆಫಾಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 38 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಬಾರಿಸಿ 48 ರನ್ ಗಳಿಸಿ ಶೆಫಾಲಿ ಔಟ್ ಆದರು.

VIDEO: ಒಂದೇ ಓವರ್​ನಲ್ಲಿ ಸತತ 5 ಬೌಂಡರಿ: 17 ವರ್ಷದ ಶೆಫಾಲಿ ಸ್ಫೋಟಕ ಆಟಕ್ಕೆ ಸುಸ್ತಾದ ಇಂಗ್ಲೆಂಡ್
Shafali Verma
Follow us on

ಇಂಗ್ಲೆಂಡ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ಇಂಗ್ಲೆಂಡ್ ವನಿತೆಯರ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ 8 ರನ್​ಗಳ ರೋಚಕ ಗೆಲುವು ಪಡೆದುಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ಪ್ರಮುಖ ಹೈಲೇಟ್ 17 ವರ್ಷದ ಶೆಫಾಲಿ ವರ್ಮಾ ಅವರ ಸ್ಫೋಟಕ ಆಟ. ಮನಬಂದಂತೆ ಬ್ಯಾಟ್ ಬೀಸಿದ ಇವರು ಇಂಗ್ಲೆಂಡ್ ಬೌಲರ್​ಗಳ ಮೈಚಳಿ ಬಿಡಿಸಿದ್ದು ಸುಳ್ಳಲ್ಲ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಬಿರುಸಿಟ ಆಟದ ಮೊರೆಹೋಯಿತು. ಅದರಲ್ಲೂ ಶೆಫಾಲಿ ವರ್ಮಾ ಆಕ್ರಮಣ ಆಟಕ್ಕೆ ಮುಂದಾದರು. 3ನೇ ಓವರ್​ನಲ್ಲಿ ಬೌಂಡರಿ-ಸಿಕ್ಸರ್ ಬಾರಿಸಿ, 4ನೇ ಓವರ್​ನಲ್ಲೂ ತನ್ನ ಸ್ಫೋಟಕ ಆಟ ಮುಂದುವರೆಸಿದರು.

4ನೇ ಓವರ್​ನ ಬ್ರಂಟ್ ಬೌಲಿಂಗ್​ನಲ್ಲಿ ಮೊದಲ ಎಸೆತವನ್ನು ಸ್ಮೃತಿ ಮಂದಾನ ಸಿಂಗಲ್ ರನ್ ತೆಗೆದರು. ಮುಂದಿನ ಐದು ಎಸೆತವನ್ನು ಎದುರಿಸಿದ ಶೆಫಾಲಿ ಐದೂ ಎಸೆತದಲ್ಲಿ ಚೆಂಡನ್ನು ಬೌಂಡರಿ ಅಟ್ಟಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಇವರು ಮೊದಲ ವಿಕೆಟ್​ಗೆ 70 ರನ್​ಗಳ ಜೊತೆಯಾಟ ಆಡಿದರು.

ಆದರೆ, ಅರ್ಧಶತಕದ ಅಂಚಿನಲ್ಲಿ ಎಡವಿದ ಶೆಫಾಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 38 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಬಾರಿಸಿ 48 ರನ್ ಗಳಿಸಿ ಶೆಫಾಲಿ ಔಟ್ ಆದರು. ಮಂದಾನ 20 ರನ್ ಗಳಿಸಿದರೆ, ನಾಯಕಿ ಹರ್ಮನ್​ಪ್ರೀತ್ ಕೌರ್ 31 ಹಾಗೂ ದೀಪ್ತಿ ಶರ್ಮಾ ಅಜೇಯ 24 ರನ್ ಗಳಿಸಿದರು. ಭಾರತ ವನಿತಾ ತಂಡ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ಟಮ್ಮಿ ಬ್ಯೂಮಾಂಟ್(59) ಹಾಗೂ ನಾಯಕಿ ಹೀದರ್ ನೈಟ್(30) ಜೊತೆಯಾಗಿ 75 ರನ್​ಗಳ ಕಾಣಿಕೆ ನೀಡಿ ತಂಡವನ್ನು ಗೆಲುವಿನ ಹತ್ತಿರ ತಂದರು. ಆದರೆ, ಇವರಿಬ್ಬರ ನಿರ್ಗಮನದ ಬಳಿಕ ದಿಢೀರ್ ಕುಸಿತ ಕಂಡ ಇಂಗ್ಲೆಂಡ್ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 140 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲುಂಡಿತು.

ಭಾರತ 8 ರನ್​ಗಳ ಗೆಲುವಿನೊಂದಿಗೆ ಸರಣಿ ಸಮಬಲ ಸಾಧಿಸಿದೆ. ಅಂತಿಮ ನಿರ್ಣಾಯಕ ಪಂದ್ಯ ಜುಲೈ 14 ರಂದು ನಡೆಯಲಿದೆ.

IPL 2022 Mega Auction: RCB ತನ್ನಲ್ಲೇ ಉಳಿಸಿಕೊಳ್ಳುವ 4 ಆಟಗಾರರು ಇವರೇ ನೋಡಿ

Vamika 6 Months: ವಿರುಷ್ಕಾ ದಂಪತಿ ಮಗಳು ವಮಿಕಾಗೆ ಆರು ತಿಂಗಳು ತುಂಬಿದ ಸಂಭ್ರಮ; ಫೋಟೋ ಶೇರ್ ಮಾಡಿಕೊಂಡ ಅನುಷ್ಕಾ ಶರ್ಮಾ