Vamika 6 Months: ವಿರುಷ್ಕಾ ದಂಪತಿ ಮಗಳು ವಮಿಕಾಗೆ ಆರು ತಿಂಗಳು ತುಂಬಿದ ಸಂಭ್ರಮ; ಫೋಟೋ ಶೇರ್ ಮಾಡಿಕೊಂಡ ಅನುಷ್ಕಾ ಶರ್ಮಾ

Virat Kohli - Anushka Sharma: ವಿರುಷ್ಕಾ ದಂಪತಿ ಮಗು ಹುಟ್ಟಿದ ಮೇಲೆ ಖಾಸಗಿತನಕ್ಕೆ ಮತ್ತಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮೀಡಿಯಾಗಳಿಗೆ, ಫೋಟೋಗ್ರಾಫರ್​ಗಳಿಗೆ ಆಕೆಯ ಫೋಟೋ ಕ್ಲಿಕ್ಕಿಸಲು ಬಿಡುತ್ತಿಲ್ಲ.

Vamika 6 Months: ವಿರುಷ್ಕಾ ದಂಪತಿ ಮಗಳು ವಮಿಕಾಗೆ ಆರು ತಿಂಗಳು ತುಂಬಿದ ಸಂಭ್ರಮ; ಫೋಟೋ ಶೇರ್ ಮಾಡಿಕೊಂಡ ಅನುಷ್ಕಾ ಶರ್ಮಾ
ಮಗಳನ್ನು ಎತ್ತಿಕೊಂಡಿರುವ ವಿರಾಟ್ ಕೊಹ್ಲಿ
Follow us
TV9 Web
| Updated By: Lakshmi Hegde

Updated on:Jul 12, 2021 | 12:33 PM

ಸೆಲೆಬ್ರಿಟಿ ಜೋಡಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್​ ಕೊಹ್ಲಿ(Virat Kohli ) ಮಗಳು ವಮಿಕಾ (Vamika) ಗೆ ಈಗ ಆರು ತಿಂಗಳು ತುಂಬಿದೆ. ಆರು ತಿಂಗಳಾದರೂ ಮಗುವಿನ ಮುಖದ ಫೋಟೋವನ್ನು ಅವರು ಹಂಚಿಕೊಂಡಿಲ್ಲ. ಇದೀಗ ಮಗುವಿಗೆ ಆರನೇ ತಿಂಗಳು ತುಂಬಿದ ಹೊತ್ತಲ್ಲಿ ಈ ಜೋಡಿ ಒಂದು ಸಣ್ಣ ಫ್ಯಾಮಿಲಿ ಪಿಕ್ನಿಕ್​ ಮಾಡಿದೆ. ಅದರ ಫೋಟೋವನ್ನು ಅನುಷ್ಕಾ ಶರ್ಮಾ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲೂ ಸಹ ಮಗುವಿನ ಮುಖದರ್ಶನ ಮಾಡಿಸಿಲ್ಲ. ವಿರಾಟ್​ ಕೊಹ್ಲಿ ಮಗುವನ್ನು ಎತ್ತಿಕೊಂಡಿರುವ ಫೋಟೋ ಇದ್ದರೂ, ಅದರಲ್ಲಿ ಮಗುವಿನ ಬೆನ್ನು ತೋರಿಸಲಾಗಿದೆ ಹೊರತು ಮುಖ ಕಾಣಿಸಿಲ್ಲ. ಹಾಗೇ ಇನ್ನೊಂದು ಫೋಟೋದಲ್ಲಿ ವಾಮಿಕಾ ತನ್ನ ಅಮ್ಮ ಅನುಷ್ಕಾ ಶರ್ಮಾರ ಹೊಟ್ಟೆಯ ಮೇಲೆ ಮಲಗಿರುವುದನ್ನು ನೋಡಬಹುದು.

ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಅನುಷ್ಕಾ ಶರ್ಮಾ, ಮಗಳ ಒಂದು ನಗುವಿಗೆ ನಮ್ಮ ಇಡೀ ಜಗತ್ತನ್ನೇ ಬದಲಿಸುವ ಶಕ್ತಿ ಇದೆ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಅಲ್ಲದೆ, ನಮಗೆ ಮೂವರಿಗೂ ಆರನೇ ತಿಂಗಳದ ಶುಭ ಹಾರೈಕೆಗಳು ಎಂದಿದ್ದಾರೆ. ಅಂದರೆ ವಮಿಕಾಗೆ ಆರು ತಿಂಗಳಾದ ಹೊತ್ತಲ್ಲೇ ನಮಗಿಬ್ಬರಿಗೂ ತಾಯಿ-ತಂದೆಯ ಸ್ಥಾನ ಸಿಕ್ಕು ಆರು ತಿಂಗಳಾಯಿತು ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

ವಿರುಷ್ಕಾ ದಂಪತಿ ಮಗು ಹುಟ್ಟಿದ ಮೇಲೆ ಖಾಸಗಿತನಕ್ಕೆ ಮತ್ತಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮೀಡಿಯಾಗಳಿಗೆ, ಫೋಟೋಗ್ರಾಫರ್​ಗಳಿಗೆ ಆಕೆಯ ಫೋಟೋ ಕ್ಲಿಕ್ಕಿಸಲು ಬಿಡುತ್ತಿಲ್ಲ. ನಾವು ಪಾಲಕರಾಗಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ..ನಮ್ಮ ಮಗಳ ಖಾಸಗಿತನ ರಕ್ಷಣೆ ನಮ್ಮ ಹೊಣೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ, ಸಹಕಾರ ಬೇಕು. ನಮಗೆ ಸಂಬಂಧಪಟ್ಟ ವಿಷಯಗಳನ್ನು ನಾವು ಖಂಡಿತ ಬಹಿರಂಗಪಡಿಸುತ್ತೇವೆ. ಆದರೆ ನಮ್ಮ ಮಗಳಿಗೆ ಸಂಬಂಧಪಟ್ಟ ವಿಷಯಗಳಿಂದ ಸ್ವಲ್ಪ ದೂರವೇ ಇರಿ. ನೀವಿದನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇವೆ ಎಂದು ಈ ಹಿಂದೆಯೇ ವಿರುಷ್ಕಾ ದಂಪತಿ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ.

ಹಾಗೇ, ವಮಿಕಾಳ ಫೋಟೋವನ್ನ ನಾವು ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಪೋಸ್ಟ್ ಮಾಡುವುದಿಲ್ಲ ಎಂಬುದನ್ನೂ ವಿರಾಟ್ ಕೊಹ್ಲಿ ಈಗಾಗಲೇ ವಿವರಿಸಿದ್ದಾರೆ. ಸದ್ಯ ನನ್ನ ಮಗಳಿಗೆ ಸೋಷಿಯಲ್​ ಮೀಡಿಯಾ ಅಂದರೆ ಏನೆಂದೇ ಗೊತ್ತಿಲ್ಲ. ಅವಳು ಸ್ವಲ್ಪ ಬೆಳೆದು ದೊಡ್ಡವಳಾಗಿ ಅದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ಆಗ ಆಕೆಯೇ ಆಯ್ಕೆ ಮಾಡಬೇಕು. ಅಲ್ಲಿಯವರೆಗೂ ನಾವು ಅವಳ ಫೋಟೋ ಹಾಕಲು ಇಷ್ಟಪಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಮಿಕಾ ಹುಟ್ಟಿದ್ದು ಜನವರಿ 11ರಂದು. ನಿನ್ನೆ ಜುಲೈ 11ಕ್ಕೆ ಆರು ತಿಂಗಳು ತುಂಬಿದೆ. ಆರನೇ ತಿಂಗಳ ಬರ್ತ್​ ಡೇ ಸಂಭ್ರಮದ ಕೇಕ್​ ಫೋಟೋವನ್ನೂ ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪುಟ್ಟ ಮಗಳ ಮೊದಲ ಪೋಸ್ಟ್​ನ್ನು ಅನುಷ್ಕಾ ಶರ್ಮಾ ಆಕೆಯ ಹೆಸರನ್ನು ಬಹಿರಂಗ ಪಡಿಸುವ ದಿನ ಹಾಕಿಕೊಂಡಿದ್ದರು.

ಇದನ್ನೂ ಓದಿ: ‘ನೀವು ಐಸಿಸಿ ಟ್ರೋಫಿ ಬಗ್ಗೆ ಮಾತಾಡ್ತೀರಿ, ಆದ್ರೆ ಕೊಹ್ಲಿ ಇನ್ನೂ IPL ಟ್ರೋಫಿಯನ್ನೇ ಗೆದ್ದಿಲ್ಲ’

Anushka Sharma Virat Kohli celebrate Vamika’s 6 month birthday

Published On - 12:06 pm, Mon, 12 July 21

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್