ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಐಪಿಎಲ್ 2020 ರ ಮೊದಲ ಪಂದ್ಯ ಸೆಪ್ಟೆಂಬರ್ 19 ರಂದು ಈ ಎರಡು ತಂಡಗಳ ನಡುವೆ ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಸಂಪೂರ್ಣ ತಂಡವು ದುಬೈನ ಐಸಿಸಿ ಅಕಾಡೆಮಿಯಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದು ಇಡೀ ತಂಡವು ತಮ್ಮ ತರಬೇತಿಯೊಂದಿಗೆ ಅಭ್ಯಾಸ ಪಂದ್ಯಗಳಲ್ಲಿ ತೊಡಗಿಸಿಕೊಂಡಿದೆ.
ಸಿಎಸ್‌ಕೆಗೆ ಸಮಾಧಾನಕರ ಸುದ್ದಿ ಏನೆಂದರೆ, ತಂಡದ ವೇಗಿ ಬೌಲರ್ ದೀಪಕ್ ಚಹರ್ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ತಮ್ಮ ಕ್ವಾರಂಟೈನ್ ಆವಧಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಈಗ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
ಈ ಎರಡು ವ್ಯಕ್ತಿಗಳು ಸಿಎಸ್‌ಕೆ ಯಶಸ್ಸಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಅಭ್ಯಾಸ ಪಂದ್ಯಗಳ ವೇಳೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ನಾಯಕ ಎಂ.ಎಸ್ ಧೋನಿ ಸುದೀರ್ಘ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಹಿರಿಯ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಸಿಎಸ್‌ಕೆಗೆ ಬಹಳ ಮುಖ್ಯವಾಗಿದ್ದು, ಪಂದ್ಯಾವಳಿ ಪ್ರಾರಂಭವಾಗುವ ಮೊದಲು ವ್ಯಾಟ್ಸನ್ ಅಭ್ಯಾಸ ಪಂದ್ಯವೊಂದರಲ್ಲಿ ಫಾರ್ಮ್ಗೆ ವಾಪಾಸ್ಸಾಗಲು ಪ್ರಯತ್ನಿಸುತ್ತಿದ್ದಾರೆ.
ತರಬೇತಿ ಮತ್ತು ಅಭ್ಯಾಸ ಮಾತ್ರವಲ್ಲದೆ ಸಿಎಸ್‌ಕೆ ಆಟಗಾರರು ವಿವಿಧ ರೀತಿಯ ಫೋಟೋ ಶೂಟ್ಗಳಲ್ಲೂ ನಿರತರಾಗಿದ್ದಾರೆ. ಚಿತ್ರೀಕರಣದ ವೇಳೆ ತಂಡದ ನಾಯಕ ಧೋನಿ ಅವರೊಂದಿಗೆ ರವೀಂದ್ರ ಜಡೇಜಾ ಮತ್ತು ಕೇದಾರ್ ಜಾಧವ್ ಪೋಸ್ ಕೊಟ್ಟಿದ್ದು ಹೀಗೆ.
ಎಂ.ಎಸ್.ಧೋನಿ ತಮ್ಮ ವಿಶೇಷ ಶೈಲಿಯಲ್ಲಿ ಮೈದಾನದ ಒಳಗೆ ಮತ್ತು ಹೊರಗೆ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ.
(Photo courtesy: Chennai Super Kings Twitter)
Published On - 3:56 pm, Mon, 14 September 20