ಈ ಬಾರಿಯ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ಆರ್ಸಿಬಿ ಮೇಲಿನ ಕನ್ನಡಿಗರ ಅಭಿಮಾನ, ಕಿಂಗ್ಸ್ ಇಲೆವೆನ್ ಪಂಜಾಬ್ ಮೇಲೂ ಇದೆ. ಪ್ರೀತಿ ಜಿಂಟಾ ಒಡೆತನದ ತಂಡವನ್ನ, ಈ ಬಾರಿ ಕಿಂಗ್ಸ್ ಇಲೆವೆನ್ ಕರ್ನಾಟಕ ಅಂದ್ರು ತಪ್ಪಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಆರು ಮಂದಿ ಕನ್ನಡಿಗರಿದ್ದಾರೆ. ಹಾಗಾದ್ರೆ, ಪಂಜಾಬ್ ತಂಡದಲ್ಲಿರೋ ಕನ್ನಡಿಗರು ಯಾಱರು ಅನ್ನೋದನ್ನ ನೋಡಿ.
ನಂಬರ್ 1: ಅನಿಲ್ ಕುಂಬ್ಳೆ, ಕೋಚ್..
ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಪಂಜಾಬ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಬ್ಳೆ ಕೋಚ್ ಆಗ್ತಿದ್ದಂತೆ, ಪಂಜಾಬ್ ತಂಡದಲ್ಲಿ ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ಮಣೆಹಾಕಿದ್ದಾರೆ.
ನಂಬರ್ 2: ಕೆ.ರಾಹುಲ್, ನಾಯಕ..
ಟೀಮ್ ಇಂಡಿಯಾ ಕ್ರಿಕೆಟಿಗ ಕನ್ನಡಿಗ ಕೆ.ಎಲ್.ರಾಹುಲ್, ಈ ಬಾರಿ ಪಂಜಾಬ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ರನ್ ಮಳೆಯನ್ನ ಹರಿಸಿದ್ದ ರಾಹುಲ್, ಈ ಬಾರಿ ಪಂಜಾಬ್ಗೆ ಚಾಂಪಿಯನ್ ಪಟ್ಟ ತಂದುಕೊಡೋದಕ್ಕೆ ಕಾತರರಾಗಿದ್ದಾರೆ.
ನಂಬರ್ 3: ಮಯಾಂಕ್ ಅಗರ್ವಾಲ್, ಬ್ಯಾಟ್ಸ್ಮನ್
ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್, ಸೀಸನ್ 12ರಲ್ಲೇ ಪಂಜಾಬ್ ತಂಡವನ್ನ ಸೇರಿಕೊಂಡಿದ್ರು. 13ನೇ ಆವೃತ್ತಿಯಲ್ಲೂ ಮಯಾಂಕ್ ಪಂಜಾಬ್ ಪರ ಆರ್ಭಟಿಸಲು ರೆಡಿಯಾಗಿದ್ದಾರೆ.
ನಂಬರ್ 4: ಕರುಣ್ ನಾಯರ್, ಬ್ಯಾಟ್ಸ್ಮನ್
vo : ಕರ್ನಾಟಕ ತಂಡದ ಕ್ಯಾಪ್ಟನ್ ಕರುಣ್ ನಾಯರ್ ಕೂಡ, 12ನೇ ಆವೃತ್ತಿಯಲ್ಲೇ ಪಂಜಾಬ್ ಕ್ಯಾಂಪ್ ಸೇರ್ಪಡೆಗೊಂಡಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋ ಕರುಣ್, ಈ ಬಾರಿ ಕೋಚ್ ಕುಂಬ್ಳೆ ಮಾರ್ಗದರ್ಶನದಲ್ಲಿ ಬೊಂಬಾಟ್ ಪ್ರದರ್ಶನ ನೀಡೋದಕ್ಕೆ ಸಜ್ಜಾಗಿದ್ದಾರೆ.
ನಂಬರ್ 5: ಕೆ.ಗೌತಮ್, ಆಲ್ರೌಂಡರ್..
ರಾಜಸ್ಥಾನ ರಾಯಲ್ಸ್ನಲ್ಲಿದ್ದ ಕನ್ನಡಿಗ ಕೆ.ಗೌತಮ್ನನ್ನು ಕೋಚ್ ಅನಿಲ್ ಕುಂಬ್ಳೆ, ಪಂಜಾಬ್ ತಂಡಕ್ಕೆ ಕರೆ ತಂದಿದ್ದಾರೆ. ಕಳೆದೆರೆಡು ಸೀಸನ್ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಗೌತಮ್, ಪಂಜಾಬ್ ಪರ ಗೇಮ್ ಚೇಂಜರ್ ಆಗೋ ಸೂಚನೆ ನೀಡಿದ್ದಾರೆ.
ನಂಬರ್ 6: ಜೆ.ಸುಚಿತ್, ಸ್ಪಿನ್ನರ್..
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸ್ಪಿನ್ನರ್ ಜೆ.ಸುಚಿತ್ನನ್ನೂ ಕುಂಬ್ಳೆ, ಪಂಜಾಬ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್ ಆಗಿರೋ ಸಿಚಿತ್, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸೋ ತಾಕತ್ತನ್ನ ಹೊಂದಿದ್ದಾರೆ.
ಒಟ್ನಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ತಂಡದಲ್ಲಿ ಕನ್ನಡಗರೇ ಕಿಂಗ್ ಆಗಿದ್ದಾರೆ. ಹಾಗೇ ಕರ್ನಾಟಕದ ಅಭಿಮಾನಿಗಳು ಸಹ ಪಂಜಾಬ್ ಕನ್ನಡಿಗರ ಮೇಲೂ ಒಂದು ಕಣ್ಣಿಟ್ಟಿದ್ದಾರೆ.
Published On - 12:48 pm, Wed, 16 September 20