IPL 2020: ಕೊಲ್ಕತ್ತಾ ಹಾಗೂ ಹೈದರಾಬಾದ್ ನಡುವಿನ ಸಮರ ಹೀಗಿತ್ತು, Photo ನೋಡಿ

|

Updated on: Sep 27, 2020 | 4:35 PM

ದುಬೈ: ಆಬುಧಾಬಿಯಲ್ಲಿ ನಡೆದ 11ನೇ ಐಪಿಎಲ್​ ಆವೃತ್ತಿಯ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್​ ಭರ್ಜರಿ ಜಯ ದಾಖಲಿಸಿದೆ. ಏಕಾಂಗಿ ಹೋರಾಟ ನಡೆಸುತ್ತಿದ್ದ ಪಾಂಡೆ ಜೊತೆಗೂಡಿದ ಸಾಹಾ ಉತ್ತಮ ಸಾತ್ ನೀಡಿದರು. ಆದರೆ ಕೊಲ್ಕತ್ತಾ ಕರಾರುವಕ್ಕಾದ ಬೌಲಿಂಗ್​ನಿಂದಾಗಿ ರನ್ ಗಳಿಸಲು ಈ ಜೋಡಿ ಪರದಾಡಿತು. ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಗಿಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದಲ್ಲದೆ ಅಜೇಯರಾಗಿ ಉಳಿದು ಭರ್ಜರಿ 70 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ […]

IPL 2020: ಕೊಲ್ಕತ್ತಾ ಹಾಗೂ ಹೈದರಾಬಾದ್ ನಡುವಿನ ಸಮರ ಹೀಗಿತ್ತು, Photo ನೋಡಿ
Follow us on

ದುಬೈ: ಆಬುಧಾಬಿಯಲ್ಲಿ ನಡೆದ 11ನೇ ಐಪಿಎಲ್​ ಆವೃತ್ತಿಯ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್​ ಭರ್ಜರಿ ಜಯ ದಾಖಲಿಸಿದೆ.


ಏಕಾಂಗಿ ಹೋರಾಟ ನಡೆಸುತ್ತಿದ್ದ ಪಾಂಡೆ ಜೊತೆಗೂಡಿದ ಸಾಹಾ ಉತ್ತಮ ಸಾತ್ ನೀಡಿದರು. ಆದರೆ ಕೊಲ್ಕತ್ತಾ ಕರಾರುವಕ್ಕಾದ ಬೌಲಿಂಗ್​ನಿಂದಾಗಿ ರನ್ ಗಳಿಸಲು ಈ ಜೋಡಿ ಪರದಾಡಿತು.


ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಗಿಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದಲ್ಲದೆ ಅಜೇಯರಾಗಿ ಉಳಿದು ಭರ್ಜರಿ 70 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ ಪ್ರಾರಂಭದಿಂದಲೂ ಉತ್ತಮ ಆಟವಾಡಿ ತಂಡಕ್ಕೆ ಆಸರೆಯಾದ ಗಿಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.


ಕಾರ್ತಿಕ್​ ಶೂನ್ಯಕ್ಕೆ ಔಟ್​ ಆದ ಬಳಿಕ ಮೈದಾನಕ್ಕಿಳಿದ ಮಾರ್ಗಾನ್ ಗಿಲ್ ಜೊತೆ ಸೇರಿ ಭರ್ಜರಿ ಆಟವಾಡಿ ಅಜೇಯರಾಗಿ ಉಳಿದರು.


ಕೊಲ್ಕತ್ತಾ ಪರ ಉತ್ತಮ ಬೌಲಿಂಗ್ ಮಾಡಿದ ರಸ್ಸೆಲ್​ ಡೆತ್ ಓವರ್​ಗಳಲ್ಲಿ ಹೈದ್ರಾಬಾದ್​ ದಾಂಡಿಗರು ರನ್​ ಗಳಿಸಲು ಪರದಾಡುವಂತೆ ಮಾಡಿದರು. ಆದರೆ ರಸ್ಸೆಲ್ ಬ್ಯಾಟ್ ಮಾಡುವ ಅವಕಾಶ ಸಿಗಲಿಲ್ಲ.


ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಉತ್ತಮ ಆಲ್​ರೌಂಡರ್​ ಆಗಿರುವ ಪ್ಯಾಟ್​ ಕಮಿನ್ಸ್ ನೆನ್ನೆಯ ಪಂದ್ಯದಲ್ಲಿ ಉತ್ತಮ ಸ್ಫೇಲ್ ಮಾಡಿದರು. ಹೈದ್ರಾಬಾದ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಕಮಿನ್ಸ್ ಬ್ಯಾರ್​ಸ್ಟೋವ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.


ನೆನ್ನೆ ಪಂದ್ಯದಲ್ಲಿ ಹೈದ್ರಾಬಾದ್​ ತಂಡ ಸೋಲು ಕಂಡಿದೆ. ಆದರೆ ಐಪಿಎಲ್​ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೊರುತ್ತಿರುವ ದಶೀದ್​ ಖಾನ್​ ನೆನ್ನೆಯ ಪಂದ್ಯದಲ್ಲೂ ಉತ್ತಮ ದಾಳಿ ನಡೆಸಿದರು. ಬೌಲಿಂಗ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್​ ಕಿತ್ತು ಸಂಭ್ರಮಿಸಿದರು.