ಇವತ್ತಿನ ಪಂದ್ಯ ರೋಹಿತ್-ಕೊಹ್ಲಿ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಕಾಳಗವೂ ಹೌದು

ತಲಾ ಎರಡೆರಡು ಪಾಯಿಂಟ್​ಗಳೊಂದಿಗೆ ಕ್ರಮವಾಗಿ 4 ಮತ್ತು 7 ನೇ ಸ್ಥಾನದಲ್ಲಿರುವ ಕಳೆದ ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಇದುವೆರೆಗೆ ಚಾಂಪಿಯನ್​ಶಿಪ್ ಗೆದ್ದಿರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂಡಿಯನ್ ಪ್ರಿಮೀಯರ್ ಲೀಗ್​ನ ಹೈವೊಲ್ಟೇಜ್ ಪಂದ್ಯ ಇಂದು ದುಬೈ ಇಂಟರ್​ಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನೇತೃದ್ವದ ಪಡೆಗಳು ಟಿವಿ ವೀಕ್ಷಕರಿಗೆ ಭಾರಿ ಪ್ರಮಾಣದ ಮನರಂಜನೆ ನೀಡಲಿರುವುದು ನಿಶ್ಚಿತ. [yop_poll id=”1″] ಈ ಎರಡು ಟೀಮುಗಳ ನಡವಿನ ಹಣಾಹಣಿಯನ್ನು ನೋಡಿದ್ದೇಯಾದಲ್ಲಿ ಮುಂಬೈ […]

ಇವತ್ತಿನ ಪಂದ್ಯ ರೋಹಿತ್-ಕೊಹ್ಲಿ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಕಾಳಗವೂ ಹೌದು
Arun Belly

| Edited By: sadhu srinath

Sep 28, 2020 | 6:52 PM

ತಲಾ ಎರಡೆರಡು ಪಾಯಿಂಟ್​ಗಳೊಂದಿಗೆ ಕ್ರಮವಾಗಿ 4 ಮತ್ತು 7 ನೇ ಸ್ಥಾನದಲ್ಲಿರುವ ಕಳೆದ ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಇದುವೆರೆಗೆ ಚಾಂಪಿಯನ್​ಶಿಪ್ ಗೆದ್ದಿರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂಡಿಯನ್ ಪ್ರಿಮೀಯರ್ ಲೀಗ್​ನ ಹೈವೊಲ್ಟೇಜ್ ಪಂದ್ಯ ಇಂದು ದುಬೈ ಇಂಟರ್​ಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನೇತೃದ್ವದ ಪಡೆಗಳು ಟಿವಿ ವೀಕ್ಷಕರಿಗೆ ಭಾರಿ ಪ್ರಮಾಣದ ಮನರಂಜನೆ ನೀಡಲಿರುವುದು ನಿಶ್ಚಿತ. [yop_poll id=”1″]

ಈ ಎರಡು ಟೀಮುಗಳ ನಡವಿನ ಹಣಾಹಣಿಯನ್ನು ನೋಡಿದ್ದೇಯಾದಲ್ಲಿ ಮುಂಬೈ ಪ್ರಾಬಲ್ಯ ಮೆರೆದಿದೆ. ಇದುವರೆಗೆ ಆಡಿರುವ 25 ಪಂದ್ಯಗಳಲ್ಲಿ ಮುಂಬೈ 16 ಬಾರಿ ಜಯ ಸಾಧಿಸಿದ್ದರೆ, ಬೆಂಗಳೂರು ಕೇವಲ 9 ಸಲ ಮಾತ್ರ ಗೆದ್ದಿದೆ. ಕಳೆದ 5 ಪಂದ್ಯಗಳ ಫಲಿತಾಂಶವನ್ನು ಗಮನಿಸಿದಾಗ್ಯೂ ಮುಂಬೈನ ಮೇಲುಗಾರಿಕೆ ನಿಚ್ಚಳವಾಗಿ ಗೊತ್ತಾಗುತ್ತದೆ. ಆ ಮ್ಯಾಚ್​ಗಳ ಪೈಕಿ 4ರಲ್ಲಿ ಭಾರತದ ವಾಣಿಜ್ಯ ರಾಜಧಾನಿ ಜಯಭೇರಿ ಬಾರಿಸಿದೆ. ಆದರೆ ಮುಂಬೈನ ಮೇಲುಗೈ ಹೊರತಾಗಿಯೂ ಈ ತಂಡಗಳ ನಡುವಿನ ಸೆಣಸಾಟ ಮೈನವಿರೇಳಿಸುತ್ತದೆ.

ಇದನ್ನೂ ಓದಿ: IPL 2020: RCB vs MI Live Score

ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕರಾಗಿರುವ ಕೊಹ್ಲಿ ಮತ್ತು ಶರ್ಮ ತಮ್ಮ ಟೀಮುಗಳ ಬ್ಯಾಟಿಂಗ್ ಆಧಾರಸ್ತಂಭಗಳು ಕೂಡ ಆಗಿರುವುದರಿಂದ ಇವತ್ತಿನ ಸೆಣಸಾಟಕ್ಕೆ ವೈಯಕ್ತಿಕ ಪ್ರತಿಷ್ಠೆಯ ಲೇಪ ಕೂಡ ಇದೆ. ಮುಂಬೈ ನಾಯಕ ಈ ಸೀಸನ್​ನಲ್ಲಿ ಉತ್ತಮ ಸ್ಪರ್ಶದಲ್ಲಿರವುದನ್ನು ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಸಾಬೀತು ಮಾಡಿದ್ದರೆ ಕೊಹ್ಲಿ ಎರಡೂ ಪಂದ್ಯಗಳಲ್ಲಿ ಫೇಲಾದರು. ಆದರೆ ಕೊಹ್ಲಿಯ ಸಾಮರ್ಥ್ಯ ಗೊತ್ತಿರುವವರು ಅವರ ಫಾರ್ಮ್ ಬಗ್ಗೆ ಯೋಚನೆ ಮಾಡುವುದಿಲ್ಲ. ಅವರಿಂದ ಒಂದು ಉತ್ತಮ ಇನ್ನಿಂಗ್ಸ್ ಬಂದರೆ ಸಾಕು, ಇಡೀ ಸನ್ನಿವೇಶವೇ ಬದಲಾಗುತ್ತದೆ. ಅದು ರೋಹಿತ್​ಗೂ ಗೊತ್ತಿರುವುದರಿಂದ ಕೊಹ್ಲಿಯನ್ನು ಬೇಗ ಔಟ್ ಮಾಡುವುದು ಅವರ ಆದ್ಯತೆಯಾಗಿರಲಿದೆ.

ಹಾಗೆ ನೋಡಿದರೆ, ಕೊಹ್ಲಿ, ಮುಂಬೈ ವಿರುದ್ಧ ಆಡುವಾಗಲೆಲ್ಲ ವಿಜೃಂಭಿಸುತ್ತಾರೆ. ಇದಕ್ಕೆ ಸಾಕ್ಷಿಯೆಂದರೆ ಅವರು ಗಳಿಸಿರುವ 683 ರನ್​ಗಳು. ಮುಂಬೈ ಪರ ಕೈರನ್ ಪೊಲ್ಲಾರ್ಡ್ (475) ಅತಿ ಹೆಚ್ಚು ರನ್ ಗಳಿಸಿದ್ದಾರೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, ಮುಂಬೈನ ಯಾವುದೇ ಬ್ಯಾಟ್ಸ್​ಮನ್ ಇದುವರೆಗೆ ಬೆಂಗಳೂರು ವಿರುದ್ಧ ಶತಕ ಬಾರಿಸಿಲ್ಲ. ರೋಹಿತ್ 2018 ಐಪಿಎಲ್​ನಲ್ಲಿ ಬಾರಿಸಿದ 94 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಬೌಲರ್​ಗಳ ಸಾಧನೆ ನೋಡುವುದಾದರೆ, 12 ವಿಕೆಟ್​ ಪಡೆದಿರುವ ವಿನಯ್ ಕುಮಾರ್ ಬೆಂಗಳೂರು ಪರ ದಾಖಲೆ ಹೊಂದಿದ್ದರೆ, ಮೊದಲು ಮುಂಬೈ ಪರ ಆಡುತ್ತಿದ್ದ ಹರ್ಭಜನ್ ಸಿಂಗ್ 22 ವಿಕೆಟ್ ಪಡೆದಿದ್ದಾರೆ.

ಇವೆರಡು ತಂಡಗಳ ನಡುವೆ ಪಂದ್ಯವೊಂದರಲ್ಲಿ ಗಳಿಸಿದ ಗರಿಷ್ಠ ಮೊತ್ತ (235/1) ಬೆಂಗಳೂರಿನ ಹೆಸರಲ್ಲಿದೆ. ಮುಂಬೈನ ಗರಿಷ್ಠ ಸ್ಕೋರ್ 213/6. ಅತ್ಯುತ್ತಮ ಬೌಲಿಂಗ್ ಸಾಧನೆ ಬೆಂಗಳೂರು ಪರ ಸ್ಯಾಮುವೆಲ್ ಬದ್ರಿ (4/9) ಮತ್ತು ಮುಂಬೈ ಪರ ದಿಲ್ಹಾರಾ ಫರ್ನ್ಯಾಂಡೊ (4/18).

ನಿಸ್ಸಂದೇಹವಾಗಿ ಬೆಂಗಳೂರು, ವೇಗದ ಬೌಲರ್​ಗಳ ವೈಫಲ್ಯದಿಂದ ಕಂಗೆಟ್ಟಿದೆ. ಡೇಲ್ ಸ್ಟೀನ್ ತಮ್ಮ ಖ್ಯಾತಿಗೆ ತಕ್ಕ ಬೌಲಿಂಗ್ ಮಾಡುತ್ತಿಲ್ಲ. ಉಮೇಶ್ ಯಾದವ್ ಮೊದಲಿನ ಎರಡು ಪಂದ್ಯಗಳಲ್ಲೂ ವಿಫಲರಾದರು. ಇವರಿಬ್ಬರು ಇವತ್ತಿನ ಪಂದ್ಯದಲ್ಲಿ ಆಡುವುದು ಅನುಮಾನ. ಯಾದವ್ ಜಾಗಕ್ಕೆ ಮೊಹಮ್ಮದ್ ಸಿರಾಜ್, ಮತ್ತು ಸ್ಟೀನ್ ಸ್ಥಾನದಲ್ಲಿ ಕ್ರಿಸ್ ಮೊರಿಸ್ ಬರಬಹುದು. ಆಲ್​ರೌಂಡರ್ ಶಿವಮ್ ದುಬೆ ಸಹ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ಜಾಗಕ್ಕೆ ಮೋಯಿನ್ ಅಲಿಯನ್ನು ಆಡಿಸುವ ನಿರೀಕ್ಷೆಯಿದೆ. ಬ್ಯಾಟಿಂಗ್ ಲೈನ್​ಅಪ್​ನಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕಿಲ್ಲ.

ಅತ್ತ ರೋಹಿತ್, ತಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕಲ್ಲ. ಬಿರುಸಿನ ಹೊಡೆತಗಳನ್ನಾಡುವ ಯುವ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಷನ್, ಓವರ್​ಸೀಸ್ ಆಟಗಾರ ಕ್ವಿಂಟನ್ ಡಿ ಕಾಕ್ ಚೆನ್ನಾಗಿ ಆಡುತ್ತಿರುವುದರಿಂದ ಇವತ್ತು ಸಹ ಬೆಂಚ್ ಕಾಯಿಸಬೇಕಾಗಬಹುದು. ಸೌರಭ್ ತಿವಾರಿ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಕಾಂಟ್ರಿಬ್ಯೂಷನ್​ಗಳನ್ನು ನೀಡುತ್ತಿದ್ದಾರೆ. ಬೌಲಿಂಗ್ ಯುನಿಟ್​ನಲ್ಲೂ ಉಲ್ಲೇಖಿಸುವಂಥ ಸಮಸ್ಯೆಗಳು ಕಾಣುತ್ತಿಲ್ಲ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada