IPL 2020: ರಾಜಸ್ಥಾನದ ಗೆಲುವಿನ ಓಟಕ್ಕೆ ಕೊಲ್ಕತ್ತಾ ಬ್ರೇಕ್​ ಹಾಕಿದ ಕ್ಷಣಗಳು..

|

Updated on: Oct 01, 2020 | 4:08 PM

ಸತತ ಎರಡು ಪಂದ್ಯಗಳನ್ನ ಗೆದ್ದು ರಾಜರಂತೆ ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್​ಗೆ, ಕೊಲ್ಕತ್ತಾ ನೈಟ್ ರೈಡರ್ಸ್ ಮುಟ್ಟಿ ನೋಡಿಕೊಳ್ಳುವಂತ ಶಾಕ್ ನೀಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗೇ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ ನಂಬರ್ 1 ಸ್ಥಾನವನ್ನ ಅಲಂಕರಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ 47 ರನ್​ಗಳ […]

IPL 2020: ರಾಜಸ್ಥಾನದ ಗೆಲುವಿನ ಓಟಕ್ಕೆ ಕೊಲ್ಕತ್ತಾ ಬ್ರೇಕ್​ ಹಾಕಿದ ಕ್ಷಣಗಳು..
Follow us on

ಸತತ ಎರಡು ಪಂದ್ಯಗಳನ್ನ ಗೆದ್ದು ರಾಜರಂತೆ ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್​ಗೆ, ಕೊಲ್ಕತ್ತಾ ನೈಟ್ ರೈಡರ್ಸ್ ಮುಟ್ಟಿ ನೋಡಿಕೊಳ್ಳುವಂತ ಶಾಕ್ ನೀಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿದೆ.


ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗೇ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ ನಂಬರ್ 1 ಸ್ಥಾನವನ್ನ ಅಲಂಕರಿಸಿದೆ.


ರಾಜಸ್ಥಾನ ರಾಯಲ್ಸ್ ವಿರುದ್ಧ 47 ರನ್​ಗಳ ಗೆಲುವು ಸಾಧಿಸಿದ ಕೊಲ್ಕತ್ತಾ ತಂಡ, ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಜಿಗಿತ ಕಂಡಿದೆ. 3 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನ ಗೆದ್ದಿರೋ ಕೊಲ್ಕತ್ತಾ 4 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.


ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅತ್ಯದ್ಭುತ ಬೌಲಿಂಗ್ ಮಾಡಿದ್ದ ಶಿವಂ ಮಾವಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡ್ರು. 4 ಓವರ್​ಗಳಲ್ಲಿ 20 ರನ್ ನೀಡಿದ ಶಿವಂ ಮಾವಿ, ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ವಿಕೆಟ್ ಪಡೆದ್ರು.


ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಟನ್ನಿಂಗ್ ಕ್ಯಾಚ್ ಹಿಡಿದಿದ್ದಾರೆ. ಟಾಮ್ ಕರ್ರನ್ ಮಾಡಿದ 18ನೇ ಓವರ್​ನಲ್ಲಿ ಪ್ಯಾಟ್ ಕಮ್ಮಿನ್ಸ್, ಭರ್ಜರಿಯಾಗಿಯೇ ಬಾರಿಸಿದ್ರು. ಗಾಳಿಯಲ್ಲಿ ತೇಲಿ ಬಂದ ಚೆಂಡನ್ನ ಸಂಜು, ಡೈವ್ ಹೊಡೆದು ಹಿಡಿದ್ರು.

ನಿನ್ನೆಯ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಐಸಿಸಿಯ ಕೊವಿಡ್ 19 ಮಾರ್ಗಸೂಚಿಯನ್ನ ಉಲ್ಲಂಘನೆ ಮಾಡಿದ್ರು. ಕೊರೊನಾದಿಂದಾಗಿ ಯಾವ ಆಟಗಾರರು ಚೆಂಡಿಗೆ ಎಂಜಲನ್ನ ಹಂಚುವಂತಿಲ್ಲ. ಆದ್ರೆ, ಸುನಿಲ್ ನರೈನ್ ಕ್ಯಾಚ್ ಬಿಟ್ಟು ಉತ್ತಪ್ಪ, ಚೆಂಡಿಗೆ ಎಂಜಲು ಹಚ್ಚಿದ್ರು.


ಸಂಜು ಸ್ಯಾಮ್ಸನ್ ಈ ವರ್ಷ ಸ್ಥಿರ ಪ್ರದರ್ಶನ ನೀಡಿದ್ರೆ, ಎಲ್ಲಾ ಫಾರ್ಮೆಟ್​ನಲ್ಲೂ ಭಾರತ ತಂಡವನ್ನ ಪ್ರತಿನಿಧಿಸುತ್ತಾರೆ ಎಂದು ಕೋಚ್ ಶೇನ್ ವಾರ್ನ್ ಹೇಳಿದ್ದಾರೆ. ಹಾಗೇ ಸಂಜು ವಿಶೇಷ ಪ್ರತಿಭೆ ಎಂದು ಗುಣಗಾನ ಮಾಡಿದ್ದಾರೆ.

Published On - 4:00 pm, Thu, 1 October 20