ಅಬುಧಾಬಿಯಲ್ಲಿ ಕೊಲ್ಕತ್ತಾ ಹಾಗೂ ಮುಂಬೈ ನಡುವೆ ನಡೆದ ಈ ಆವೃತ್ತಿಯ 4ನೇ ಪಂದ್ಯದಲ್ಲಿ ಮುಂಬೈ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸಂಪೂರ್ಣ ವಿಫಲವಾಯಿತು.
ನೆನ್ನೆಯ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲುವುದಕ್ಕೆ ಪ್ರಮುಖ ಕಾರಣರಾದವರಲ್ಲಿ ಮುಂಬೈ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರ ಅವರ ಪಾತ್ರ ಪ್ರಮುಖವಾಗಿದೆ. ಕೊಲ್ಕತ್ತಾ ತಂಡದ ಪ್ರಮುಖ ಆಟಗಾರರ ವಿಕೆಟ್ ಪಡೆಯುವಲ್ಲಿ ಜಸ್ಪ್ರೀತ್ ಯಶಸ್ವಿಯಾದರು.
ಮುಂಬೈ ತಂಡ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಕೊಡುಗೆ ಅಪಾರವಾಗಿದ್ದು, ಈ ಇಬ್ಬರ ಜೊತೆಯಾಟ ಅತ್ಯುತ್ತಮವಾಗಿತ್ತು.
ಮೈದಾನದಲ್ಲಿ ರನ್ ಹೊಳೆ ಹರಿಸುತ್ತಿದ್ದ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜೊತೆಯಾಟವನ್ನು ಮೂರಿಯುವುದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ಗಳು ಕೆಲ ಕಾಲ ವಿಫಲವಾಗಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಬೇಡದ ರನ್ ಕದಿಯಲು ಹೋಗಿ ರನ್ ಔಟ್ಗೆ ಬಲಿಯಾದರು.
ಮುಂಬೈ ಒಡ್ಡಿದ ಭಾರಿ ಮೊತ್ತವನ್ನು ಚೇಸ್ ಮಾಡುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲೇ ಎಡವಿತು. ಹೀಗಾಗಿ ಕೊಲ್ಕತ್ತಾ ತಂಡದ ನಾಯಕ ದಿನೇಶ್ ಕಾರ್ತಿಕ್ ಸ್ವಲ್ಪ ಸಮಯ ಏಕಾಂಗಿ ಹೋರಾಟ ನೆಡೆಸಿ, ಪಂದ್ಯವನ್ನು ಗೆಲ್ಲಿಸದೆ ಪೆವಲಿಯನ್ ಸೇರಿಕೊಂಡರು.
ಮೈದಾನದಲ್ಲಿ ರನ್ ಮಳೆ ಹರಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಬೇಡದ ಹೊಡೆತಕ್ಕೆ ಕೈ ಹಾಕಲು ಹೋಗಿ ಹಿಟ್ ವಿಕೆಟ್ಗೆ ಬಲಿಯಾದರು
ಬೌಲಿಂಗ್ನಲ್ಲಿ ಅಷ್ಟೇನೂ ಮ್ಯಾಜಿಕ್ ಮಾಡದ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿದರು. ಡೆತ್ ಓವರ್ಗಳಲ್ಲಿ ಭರ್ಜರಿ ಬ್ಯಾಟ್ ಬೀಸಿದ ಕಮಿನ್ಸ್ ಬುಮ್ರಾ ಓವರ್ನಲ್ಲಿ ಭರ್ಜರಿ ನಾಲ್ಕು ಸಿಕ್ಸರ್ ಸಿಡಿಸಿದರು.
ನಾಯಕನ ಆಟವಾಡಿದ ರೋಹಿತ್ ಶರ್ಮಾ ಮುಂಬೈ ಭಾರಿ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್ಭಟದ ಇನ್ನಿಂಗ್ಸ್ ಕಟ್ಟಿದ ರೋಹಿತ್ ಸಿಕ್ಸರ್ಗಳ ಸುರಿಮಳೆಗೈದರು. ರೋಹಿತ್ ಈ ಆಟದಿಂದಾಗಿ ಮುಂಬೈ ಗೆಲುವಿನ ಖಾತೆ ತೆರೆಯಿತು.
(Photo courtesy: Indian Premier League Twitter)
Published On - 2:45 pm, Thu, 24 September 20