ಇಂದು ಕನ್ನಡನಾಡಿನ ಮತ್ತು ಕನ್ನಡಿಗರ ತಂಡಗಳ ನಡುವೆ ಹಣಾಹಣಿ

ಕ್ರಿಕೆಟ್ ಪ್ರೇಮಿಗಳಲ್ಲಿ ಇವತ್ತು ಒಂದು ಬಗೆಯ ಗೊಂದಲವಿದೆ. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆರ್ ಸಿ ಬಿ ಕನ್ನಡನಾಡಿನ ತಂಡವಾದರೂ ಅದರಲ್ಲಿ ಕೇವಲ ಇಬ್ಬರು ಕನ್ನಡಿಗರಿದ್ದಾರೆ. ಆದರೆ ಪಂಜಾಬ್ ತಂಡದಲ್ಲಿ ಐವರು ಆಟಗಾರರಿದ್ದಾರೆ ಮತ್ತು ಟೀಮಿನ ಹೆಡ್ ಕೋಚ್ ಅನಿಲ್ ಕುಂಬ್ಳೆ ಸಹ ಕನ್ನಡಿಗರೇ. ಯಾರನ್ನು ಬೆಂಬಲಿಸುವುದು ಅನ್ನೋದೇ ಕನ್ನಡದ ಕ್ರಿಕೆಟ್ ಅಭಿಮಾನಿಗಳಲ್ಲಿರುವ ಗೊಂದಲ. ಯಾರು ಗೆದ್ದರೂ ಓಕೆ […]

ಇಂದು ಕನ್ನಡನಾಡಿನ ಮತ್ತು ಕನ್ನಡಿಗರ ತಂಡಗಳ ನಡುವೆ ಹಣಾಹಣಿ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​

Updated on:Sep 24, 2020 | 6:45 PM

ಕ್ರಿಕೆಟ್ ಪ್ರೇಮಿಗಳಲ್ಲಿ ಇವತ್ತು ಒಂದು ಬಗೆಯ ಗೊಂದಲವಿದೆ. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆರ್ ಸಿ ಬಿ ಕನ್ನಡನಾಡಿನ ತಂಡವಾದರೂ ಅದರಲ್ಲಿ ಕೇವಲ ಇಬ್ಬರು ಕನ್ನಡಿಗರಿದ್ದಾರೆ. ಆದರೆ ಪಂಜಾಬ್ ತಂಡದಲ್ಲಿ ಐವರು ಆಟಗಾರರಿದ್ದಾರೆ ಮತ್ತು ಟೀಮಿನ ಹೆಡ್ ಕೋಚ್ ಅನಿಲ್ ಕುಂಬ್ಳೆ ಸಹ ಕನ್ನಡಿಗರೇ. ಯಾರನ್ನು ಬೆಂಬಲಿಸುವುದು ಅನ್ನೋದೇ ಕನ್ನಡದ ಕ್ರಿಕೆಟ್ ಅಭಿಮಾನಿಗಳಲ್ಲಿರುವ ಗೊಂದಲ. ಯಾರು ಗೆದ್ದರೂ ಓಕೆ ಅಂತ ಹೇಳುವುದು ಸುಲಭವಲ್ಲ, ಯಾಕೆಂದರೆ ಕ್ರಿಕೆಟ್ ಅಭಿಮಾನಿಗಳಲ್ಲೂ ನಿಷ್ಠೆ ಬಯಸುತ್ತದೆ. ನೀವು ಯಾರನ್ನು ಬೆಂಬಲಿಸುತ್ತೀರಿ ಅನ್ನೋದು ನಿಮ್ಮ ವಿವೇಚನೆ ಬಿಟ್ಟ ವಿಷಯ.

ಮೊದಲ ಗೇಮ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸಾಧಿಸಿದ ಜಯ ಬೆಂಗಳೂರಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹೊಸ ಪ್ರತಿಭೆ ದೇವದತ್ ಪಡಿಕ್ಕಲ್ ಮತ್ತು ಟೀಮಿನ ಬ್ಯಾಟಿಂಗ್ ಆಧಾರಸ್ತಂಭಗಳಲಲ್ಲೊಬ್ಬರಾಗಿರುವ ಎಬಿ ಡಿ ವಿಲಿಯರ್ಸ್ ತಾವು ಉತ್ತಮ ಸ್ಪರ್ಶದಲ್ಲಿರುವುದನ್ನು ಆ ಪಂದ್ಯದಲ್ಲಿ ಸಾಬೀತು ಮಾಡಿದರು. ಆದರೆ ಕ್ರಿಕೆಟ್ ‘ಗ್ರೇಟ್ ಲೆವೆಲ್ಲರ್’ ಅಂತಲೂ ಕರೆಸಿಕೊಳ್ಳುತ್ತದೆ. ಒಂದು ಮ್ಯಾಚ್​ನಲ್ಲಿ ಉತ್ತಮವಾಗಿ ಆಡುವ ಒಬ್ಬ ಬ್ಯಾಟ್ಸ್​ಮನ್ ಮುಂದಿನ ಪಂದ್ಯದಲ್ಲಿ ಕೆಟ್ಟದಾಗಿ ವಿಫಲನಾಗುತ್ತಾನೆ. ಬೌಲರ್​ಗಳ ವಿಷಯದಲ್ಲೂ ಇದು ಅಷ್ಟೇ ಸತ್ಯ.

ಇದನ್ನೂ ಓದಿ: IPL 2020: RCB vs KXIP Live Score

ನಾಯಕ ವಿರಾಟ್ ಕೊಹ್ಲಿ ಹೈದರಾಬಾದ್ ವಿರುದ್ಧ ಫೇಲಾಗಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರಲಿಕ್ಕೂ ಸಾಕು. ಪ್ರಾಯಶಃ ಲಾಕ್​ಡೌನ್​ನ ಜಡತ್ವದಿಂದ ಅವರಿನ್ನೂ ಹೊರಬಂದಂತಿಲ್ಲ. ಅವರೊಮ್ಮೆ ಟಚ್ ಕಂಡುಕೊಂಡರೆ ಎದುರಾಳಿಗಳ ರಕ್ತದೊತ್ತಡ ಹೆಚ್ಚಾಗತೊಡಗುತ್ತದೆ. 

ಬೆಂಗಳೂರು ಟೀಮಿನಲ್ಲಿ ಒಂದರೆಡು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಫೇಲಾದ ವಿಕೆಟ್​ಕೀಪರ್ಬ್ಯಾಟ್ಸ್​ಮನ್ ಜೊಷುವಾ ಫಿಲಿಪ್ ಅವರ ಸ್ಥಾನದಲ್ಲಿ ಪಾರ್ಥೀವ್ ಪಟೇಲ್ ಬರಬಹುದು. ಹಾಗೆಯೇ, ಹೈದರಾಬಾದ್ ವಿರುದ್ಧ ಕೇವಲ ಒಂದು ಓವರ್ ಮಾತ್ರ ಬೌಲ್ ಮಾಡಿದ ಆಫ್​ಸ್ಪಿನ್ನರ್ ವಾಷಿಂಗ್​ಟನ್ ಸುಂದರ್ ಸ್ಥಾನಕ್ಕೆ ಆಲ್​ರೌಂಡರ್ ಮೊಯೀನ್ ಅಲಿ ಬರುವ ಸಾಧ್ಯತೆಯಿದೆ.

ಇವತ್ತಿನ ಪಂದ್ಯದಲ್ಲೂ ಪಡಿಕ್ಕಲ್ ಮತ್ತು ಆರನ್ ಫಿಂಚ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪಟೇಲ್ ಸಹ ಎಡಗೈ ಓಪನರ್ ಆಗಿರುವರಾದರೂ, ಪಡಿಕ್ಕಲ್ ಉತ್ತಮ ಫಾರ್ಮ್​ನಲ್ಲಿರುವುದರಿಂದ ಬದಲಾವಣೆ ಅನಾವಶ್ಯಕ. ಆಲ್​ರೌಂಡರ್ ಶಿವಂ ದುಬೆ ಸ್ಥಾನ ಉಳಿಸಿಕೊಳ್ಳಬಹುದು. ವೇಗದ ಬೌಲಿಂಗ್ ವಿಭಾಗವನ್ನು ಮತ್ತೊಮ್ಮೆ ಡೇಲ್ ಸ್ಟೀನ್, ಉಮೇಶ್ ಯಾದವ್, ಮತ್ತು ನವದೀಪ್ ಸೈನಿ ನಿಭಾಯಿಸಬಹುದು. ಹೈದರಾಬಾದ್ ವಿರುದ್ಧ ಮ್ಯಾಚ್ವಿನ್ನಿಂಗ್ ಬೌಲಿಂಗ್ ಪ್ರದರ್ಶನ ನೀಡಿದ 30 ವರ್ಷ ವಯಸ್ಸಿನ ಯುಜ್ವೇಂದ್ರ ಚಹಲ್ ಉತ್ತಮ ಲಯದಲ್ಲಿದ್ದಾರೆ. 

ಮರಳುಗಾಡಿನ ಮೈದಾನಗಳಲ್ಲಿ ಇಬ್ಬನಿ ನಿರ್ಣಾಯಕ ಪಾತ್ರವಹಿಸುತ್ತಿರುವುದರಿಂದ ಟಾಸ್ ಗೆದ್ದ ಟೀಮು ಮೊದಲು ಫೀಲ್ಡ್ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿವೆ. ಇವತ್ತು ಸಹ ಅದೇ ಆಗಲಿದೆ.

ಅತ್ತ, ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್​ಗೆ ಮೊದಲ ಪಂದ್ಯದ ಸೋಲು ಸ್ವಲ್ಪ ಧೃತಿಗೆಡಿಸಿರಬಹುದು. ವಾಸ್ತವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಆ ಪಂದ್ಯವನ್ನು ಪಂಜಾಬ್ ಗೆದ್ದಿತ್ತು. ಆನ್​ಫೀಲ್ಡ್ ಅಂಪೈರ್ ನಿತಿನ್ ಮೆನನ್ ಎಸಗಿದ ಪ್ರಮಾದದಿಂದ ಸೋಲಬೇಕಾಗಿ ಬಂತು. ಆರಂಭ ಆಟಗಾರ ಮಾಯಾಂಕ್ ಅಗರವಾಲ್ ಅವರ ಅಪ್ರತಿಮ ಬ್ಯಾಟಿಂಗ್ ಪ್ರದರ್ಶನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು.

ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ರಾಹುಲ್ ಯಾವುದೇ ಬ್ಯಾಟ್ಸ್​ಮನ್​ಗಿಂತ ಕಮ್ಮಿಯಿಲ್ಲ. ಅವರ ಬತ್ತಳಿಕೆಯಲ್ಲಿ ಎಲ್ಲ ಹೊಡೆತಗಳಿವೆ, ಹಾಗೂ ಸರ್ವ ಬಗೆಯ ಬೌಲಿಂಗನ್ನು ನಿರ್ದಯತೆಯಿಂದ ಚಚ್ಚಬಲ್ಲರು. ಮೊದಲ ಪಂದ್ಯದಲಿ ಬೆಂಚ್ ಕಾಯಿಸಿದ ಕ್ರಿಸ್ ಗೇಲ್ ಇವತ್ತಿನ ಪಂದ್ಯಕ್ಕೆ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಸ್ಥಾನದಲ್ಲಿ ಬರಬಹುದು. ಒಂದು ಪಕ್ಷ ಗೇಲ್ ಆಡಿದರೆ, ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಸರ್ಫ್ರಾಜ್ ಖಾನ್ ಮತ್ತ್ತು ಗ್ಲೆನ್ ಮ್ಯಾಕ್ಸ್​ವೆಲ್ ಬಿಗ್ ಹಿಟ್ಟರ್​ಗಳು. ಮ್ಯಾಚಿನ ದಿಕ್ಕು ಬದಲಿಸುವ ಕ್ಷಮತೆ ಇಬ್ಬರಲ್ಲೂ ಇದೆ. 

ಗೇಲ್ ಆಡಿದರೆ ಎದುರಾಳಿ ಮತ್ತು ಉಳದೆಲ್ಲರ ದೃಷ್ಟಿ ಅವರ ಮೇಲಿರುತ್ತದೆ. ಟಿ20 ಕ್ರಿಕೆಟ್​ನಲ್ಲಿ ಅವರು ಇದುವರೆಗೆ ಬಾರಿಸಿರುವ ಶತಕಗಳ ಸಂಖ್ಯೆ 22. ಎರಡನೇ ಸ್ಥಾನದಲ್ಲಿರುವ ಬ್ರೆಂಡನ್ ಮೆಕಲ್ಲಮ್​ಗಿಂತ (7) 15 ಶತಕಗಳು ಜಾಸ್ತಿ. ಗೇಲ್ಎದುರಾಳಿ ಬಾಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ಯಾಟ್ಸ್​ಮನ್, ಅದು ಕೊಹ್ಲಿಗೂ ಚೆನ್ನಾಗಿ ಗೊತ್ತು. ಗೇಲ್​ರನ್ನು ಕಟ್ಟಿ ಹಾಕಿದರೆ ಮುಕ್ಕಾಲು ಪಂದ್ಯ ಗೆದ್ದಂತೆಯೇ. ಉತ್ತಮ ಫಾರ್ಮ್​ನಲ್ಲಿರುವ ಅಗರ್​ವಾಲ್ ಗೇಲ್ ಜೊತೆ ಇನ್ನಿಂಗ್ಸ್ ಆರಂಭಿಸಿದರೆ ರೈಟ್-ಲೆಫ್ಟ್ ಕಾಂಬಿನೇಶನ್ ಕೊಹ್ಲಿಯ ಬೌಲರ್​ಗಳಿಗೆ ಸಮಸ್ಯೆ ಉಂಟು ಮಾಡುವುದು ನಿಶ್ಚಿತ.

ವೇಗದ ಬೌಲರ್ ಮೊಹಮ್ಮದ್ ಶಮಿ ಪಂಜಾಬ್​ಗೆ ಬ್ರೇಕ್ಥ್ರೂಗಳನ್ನು ಒದಗಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಅವರನ್ನು ಮಾರಕ ಬೌನ್ಸರ್​ಗಳನ್ನು ಎಸೆಯುವದರಲ್ಲಿ ವಿಶ್ವದಲ್ಲೇ ಅತ್ಯುತ್ತಮ ಎಂದು ಸುನಿಲ್ ಗವಾಸ್ಕರ್ ಬಣ್ಣಿಸಿದ್ದಾರೆ. ಅವರೊಂದಿಗೆ ಶೆಲ್ಡನ್ ಕಾಟ್ರೆಲ್ ಮತ್ತು ಕ್ರಿಸ್ ಜೊರ್ಡನ್ ವೇಗದ ಬೌಲಿಂಗ್ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ. ಕನ್ನಡಿಗ ಕೃಷ್ಣಪ್ಪ ಗೌತಮ್ ಡೆಲ್ಲಿ ವಿರುದ್ಧ ಬ್ಯಾಟಿಂಗ್​ನಲ್ಲಿ ಮಿಂಚಿದರಾದರೂ ತಾನೆಸದ 4 ಓವರ್​ಗಳಲ್ಲಿ ವಿಕೆಟ್ ಪಡೆಯದೆ 39 ರನ್ ನೀಡಿ ದುಬಾರಿಯೆನಿಸಿದರು. ರವಿ ಬಿಷ್ಣೊಯಿ ಹಾಗೂ ಇವತ್ತು ಆಡಬಹುದಾದ ದೀಪಕ್ ಹೂಡಾ, ಗೌತಮ್ ಅವರ ಜೊತೆಗಾರರಾಗಲಿದ್ದಾರೆ.

ಒಟ್ಟಿನಲ್ಲಿ ಕನ್ನಡನಾಡಿನ ಮತ್ತು ಕನ್ನಡಿಗರ ಟೀಮುಗಳ ನಡುವಿನ ಇವತ್ತಿನ ಪಂದ್ಯ ರೋಚಕವಾಗಿರಲಿದೆ.

Published On - 5:06 pm, Thu, 24 September 20

ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌