ಕೊನೇ ಓವರ್ವರೆಗೂ ರಣರೋಚಕತೆಯಿಂದ ಕೂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಸತತ ನಾಲ್ಕನೇ ಗೆಲುವಿನ ನಾಗಾಲೋಟದಲ್ಲಿದ್ದ ಡೆಲ್ಲಿಗೆ, ಅಂಬಾನಿ ಹುಡುಗರು ಕಡಿವಾಣ ಹಾಕಿದ್ದಾರೆ.
42 ರನ್ ಗಳಿಸಿದ್ದ ಐಯ್ಯರ್, ಕೃನಾಲ್ ಪಾಂಡ್ಯಾ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸೋಕೆ ಹೋಗಿ ವಿಕೆಟ್ ಒಪ್ಪಿಸಿದರು.
ಈ ಸೀಸನ್ನಲ್ಲಿ ಡೆಲ್ಲಿ ಪರ ಮೊದಲ ಪಂದ್ಯವಾಡಿದ ಅಜಿಂಕ್ಯಾ ರಹಾನೆ, ಕೃನಾಲ್ ಪಾಂಡ್ಯಾ ಎಲ್ಬಿ ಬಲೆಗೆ ಬಿದ್ದರು.
ಡೀಸೆಂಟ್ ಬ್ಯಾಟಿಂಗ್ ಮಾಡಿದ ಶಿಖರ್ ಧವನ್, 52 ಎಸೆತಗಳಲ್ಲಿ 69 ರನ್ ಬಾರಿಸಿದ್ರು. ಇದ್ರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು.
ಮುಂಬೈಗೆ 163 ರನ್ ಗುರಿ ತಲುಪೋದು ಸಲಭವಾಗಿರಲಿಲ್ಲ. ಆರಂಭದಲ್ಲೇ 5 ರನ್ ಗಳಿಸಿದ್ದ ರೋಹಿತ್ ಶರ್ಮಾ ಔಟಾಗಿ ನಿರಾಸೆ ಮೂಡಿಸಿದರು.
ಆದ್ರೆ ಕ್ವಿಂಟನ್ ಡಿಕಾಕ್ 53, ಸೂರ್ಯಕುಮಾರ್ ಯಾದವ್ 53 ರನ್ ಗಳಿಸೋದ್ರೊಂದಿಗೆ ತಂಡದ ಗೆಲುವನ್ನ ಖಚಿತಪಡಿಸಿದರು.
ಎರಡನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಅಗ್ರಸ್ಥಾನಕ್ಕೇರಿದ್ರೆ, ಡೆಲ್ಲಿ ಎರಡನೇ ಸ್ಥಾನಕ್ಕೇ ಕುಸಿಯಿತು.
ಮುಂಬೈ ವಿರುದ್ಧವೂ ಎರಡು ವಿಕೆಟ್ ಪಡೆದ ಕಗಿಸೋ ರಬಾಡ, ಟೂರ್ನಿಯಲ್ಲಿ 17 ವಿಕೆಟ್ ಪಡೆಯುವುದರ ಜೊತೆಗೆ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
Published On - 5:05 pm, Mon, 12 October 20