IPL 2021: ಮುಂಬೈನಲ್ಲಿ ಕೊರೊನಾ ಸ್ಪೋಟ! ಐಪಿಎಲ್​ ಪಂದ್ಯಾವಳಿಗಳ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

|

Updated on: Apr 05, 2021 | 11:43 AM

IPL 2021: ಏಪ್ರಿಲ್ 10 ರಿಂದ 25 ರ ನಡುವೆ ಮುಂಬೈನಲ್ಲಿ ಕೇವಲ ಹತ್ತು ಪಂದ್ಯಗಳನ್ನು ಆಯೋಜಿಸಲಿದ್ದು, ಬಯೋ-ಬಬಲ್ ಒಳಗೆ ಚಿಂತೆ ಮಾಡಲು ಏನೂ ಇರುವುದಿಲ್ಲ.

IPL 2021: ಮುಂಬೈನಲ್ಲಿ ಕೊರೊನಾ ಸ್ಪೋಟ! ಐಪಿಎಲ್​ ಪಂದ್ಯಾವಳಿಗಳ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ
Follow us on

ಐಪಿಎಲ್ 2021 ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಐಪಿಎಲ್ ಆಡಳಿತ ಮಂಡಳಿಯೂ ಸಹ ಅದಕ್ಕೆ ಬೇಕಾದ ತಯಾರಿಗಳನ್ನು ನಡೆಸುತ್ತಿದೆ. ಆದರೆ ಮುಂಬೈನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ ಈಗ ಐಪಿಎಲ್​ ಪಂದ್ಯಾವಳಿಗಳ ಮೇಲೆ ಕರಿಛಾಯೇ ಮೂಡಿದೆ. ಈಗಾಗಲೇ ಸಾಕಷ್ಟು ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದ್ಯಾವುದು ಸಾಲಾದೆಂಬಂತೆ ಈಗ ಮೊದಲ ಪಂದ್ಯಾವಳಿ ನಡೆಯುವ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗಳಿಗೆ ಕೊರೊನಾ ವಕ್ಕರಿಸಿರುವುದು ಆತಂಕ ಹೆಚ್ಚಿಸಿದೆ. ಹೀಗಾಗಿ ಬಿಸಿಸಿಐ ಮುಂಬೈನಲ್ಲಿ ನಡೆಯಲಿರುವ ಪಂದ್ಯಗಳನ್ನ ಬೇರೆಡೆಗೆ ಸ್ಥಳಾಂತರಿಸಲಿದೆ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಈಗ ಅಂತಹ ಊಹಾಪೋಹಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೆರೆ ಎಳಿದಿದ್ದಾರೆ. ಈ ಬಗ್ಗೆ ಮಾತಾನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂಬೈನಲ್ಲಿ ಐಪಿಎಲ್ 2021 ಪಂದ್ಯಗಳು ನಡೆಯಲಿವೆ ಎಂದು ಘೋಷಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಮತ್ತು ಭರವಸೆ ಸಿಕ್ಕಿದೆ
ಒಮ್ಮೆ ನೀವು ಬಯೋಬಬಲ್​ನಲ್ಲಿದ್ದರೆ ಏನೂ ತೊಂದರೆ ಆಗುವುದಿಲ್ಲ. ಕಳೆದ ಆವೃತ್ತಿಯಲ್ಲಿ ಯುಎಇಯಲ್ಲಿಯೂ ಸಹ ಈವೆಂಟ್​ ನಡೆಸುವಾಗ ಇಂತಹ ಕೆಲವು ಘಟನೆಗಳು ನಡೆದಿವೆ ಆದರೆ ಪಂದ್ಯಾವಳಿ ಯಾವುದೇ ತೊಂದರೆ ಇಲ್ಲದೆ ಜರುಗಿತು. ಮುಂಬೈನಲ್ಲಿ ಪಂದ್ಯಗಳನ್ನು ನಡೆಸಲು ನಮಗೆ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಮತ್ತು ಭರವಸೆ ಸಿಕ್ಕಿದೆ. ಏಪ್ರಿಲ್ 10 ರಿಂದ 25 ರ ನಡುವೆ ಮುಂಬೈನಲ್ಲಿ ಕೇವಲ ಹತ್ತು ಪಂದ್ಯಗಳನ್ನು ಆಯೋಜಿಸಲಿದ್ದು, ಬಯೋ-ಬಬಲ್ ಒಳಗೆ ಚಿಂತೆ ಮಾಡಲು ಏನೂ ಇರುವುದಿಲ್ಲ. ನಾವು ಉತ್ತಮ ಸುರಕ್ಷಿತ ಸೆಟಪ್‌ನಲ್ಲಿದ್ದೇವೆ ಮತ್ತು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸುರಕ್ಷಿತವಾಗಿರುತ್ತಾರೆ ಎಂದು ಬಿಸಿಸಿಐ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.

ಕಳೆದ 48 ಗಂಟೆಗಳಲ್ಲಿ, ವಿವಿಧ ಆಟಗಾರರು, ಐಪಿಎಲ್ 2021 ಗೆ ಸಂಪರ್ಕ ಹೊಂದಿದ ಕಾರ್ಮಿಕರು ಮುಂಬೈನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ವಾಂಖೆಡೆದಲ್ಲಿನ ಗ್ರೌಂಡ್ಸ್‌ಮನ್ ಕೊರೊನಾಗೆ ತುತ್ತಾಗಿದ್ದಾರೆ. ಅಕ್ಷರ್ ಪಟೇಲ್ (ಡಿಸಿ), ದೇವದತ್ ಪಡಿಕ್ಕಲ್ (ಆರ್‌ಸಿಬಿ) ಮುಂಬೈನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಜೊತೆಗೆ ಸಿಎಸ್ಕೆ ತಂಡದ ಸಿಬ್ಬಂದಿಯ ಒಬ್ಬ ಸದಸ್ಯ ಧನಾತ್ಮಕವಾಗಿ ಕಂಡುಬಂದಿದ್ದಾರೆ. ಆದರೆ ಗಂಗೂಲಿ ಮತ್ತು ಇತರ ಬಿಸಿಸಿಐ ಅಧಿಕಾರಿಗಳು ಮುಂಬಯಿಯಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಪಂದ್ಯಗಳನ್ನು ನಡೆಸಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಹೈದರಾಬಾದ್‌ಗೆ ಸ್ಥಳಾಂತರಿಸಬಹುದೆಂದು ಮಾತುಕತೆ ಇತ್ತು
ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಶೀಘ್ರ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈ 9000 ಕ್ಕೂ ಹೆಚ್ಚು ಜನರನ್ನು ವೈರಸ್ ಆವರಿಸಿದೆ ಎಂದು ವರದಿಯಾಗಿದೆ. ಪಂದ್ಯಗಳನ್ನು ಹೈದರಾಬಾದ್‌ಗೆ ಸ್ಥಳಾಂತರಿಸಬಹುದೆಂದು ಮಾತುಕತೆ ಇತ್ತು. ಆದರೆ ಭಾರತದ ಮಾಜಿ ನಾಯಕ ಅದನ್ನು ಅಲ್ಲಗಳೆದಿದ್ದಾರೆ. ಮುಂಬೈನಲ್ಲಿ ತಮ್ಮ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿರುವ ನಾಲ್ಕು ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ – ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಜೊತೆಗೆ ಪ್ರತ್ಯೇಕವಾಗಿ ಪಂಚತಾರಾ ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಭಾನುವಾರ ಸಭೆ ಸೇರಿದ ಮಹಾರಾಷ್ಟ್ರ ಕ್ಯಾಬಿನೆಟ್ ಸಂಪೂರ್ಣ ಲಾಕ್ ಡೌನ್ ವಿಧಿಸುವುದರ ವಿರುದ್ಧ ನಿರ್ಧರ ತೆಗೆದುಕೊಂಡಿದೆ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಏರಿಕೆಯ ಮಧ್ಯೆ ಮುಂದಿನ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಸಂಜೆ 7 ರವರೆಗೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ಕಟ್ಟುನಿಟ್ಟಾದ ಲಾಕ್ ಡೌನ್ ಸೇರಿದಂತೆ ಹೊಸ ನಿರ್ಬಂಧಗಳನ್ನು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದೆ.

ಇದನ್ನೂ ಓದಿ:IPL 2021: ಆರ್​ಸಿಬಿ ಚಾಂಪಿಯನ್​ ಕನಸಿಗೆ ಅವರ ನಿರ್ಧಾರಗಳೇ ಮುಳುವಾಗ್ತಿದೆ.. ಐಪಿಎಲ್​ನಲ್ಲಿ ರೋಹಿತ್​ ಮಾಡಿದ ಸಾಧನೆ ಕೊಹ್ಲಿಯಿಂದ ಆಗಲಿಲ್ಲವೇಕೆ?

Published On - 11:43 am, Mon, 5 April 21