IPL 2021: ದ್ವಿತೀಯಾರ್ಧದ ಐಪಿಎಲ್​​ಗೆ ಇಯಾನ್ ಮೋರ್ಗಾನ್ ಅನುಮಾನ! ಯಾರಾಗಲಿದ್ದಾರೆ ಕೆಕೆಆರ್​ ತಂಡದ ಸಾರಥಿ?

|

Updated on: May 29, 2021 | 8:17 PM

IPL 2021: ಇಯಾನ್ ಮೋರ್ಗಾನ್ ಅನುಪಸ್ಥಿತಿಯಲ್ಲಿ, ಕಾರ್ತಿಕ್ ನಾಯಕತ್ವದ ಪ್ರಬಲ ಸ್ಪರ್ಧಿ. ಆದರೆ ಕೆಕೆಆರ್ ಮ್ಯಾನೇಜ್‌ಮೆಂಟ್ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್‌ರನ್ನು ಸಹ ಒಂದು ಆಯ್ಕೆಯಾಗಿ ಹೊಂದಿದೆ.

IPL 2021: ದ್ವಿತೀಯಾರ್ಧದ ಐಪಿಎಲ್​​ಗೆ ಇಯಾನ್ ಮೋರ್ಗಾನ್ ಅನುಮಾನ! ಯಾರಾಗಲಿದ್ದಾರೆ ಕೆಕೆಆರ್​ ತಂಡದ ಸಾರಥಿ?
ಕೋಲ್ಕತಾ ನೈಟ್ ರೈಡರ್ಸ್ ತಂಡ
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2021) ನ ಉಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಎಲ್ಲಾ ತಂಡಗಳು ತಮ್ಮ ವಿದೇಶಿ ಮತ್ತು ಸ್ಥಳೀಯ ಆಟಗಾರರನ್ನು ಹೊಸ ದಿನಾಂಕಗಳು ಮತ್ತು ಸ್ಥಳಗಳ ಪ್ರಕಾರ ನಿರ್ವಹಿಸಲು ತಯಾರಿ ನಡೆಸುತ್ತಿವೆ. ಅಲ್ಲದೆ, ಕೆಲವು ದಿನಗಳ ಹಿಂದೆ, ಟಿ 20 ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಐಪಿಎಲ್‌ನಲ್ಲಿ ಆಡಲು ತನ್ನ ಆಟಗಾರರಿಗೆ ಅವಕಾಶ ನೀಡುವುದಿಲ್ಲ ಎಂಬ ನಿಲುವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತೆಗೆದುಕೊಂಡಿತು. ಈ ಮಾಹಿತಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ವ್ಯವಸ್ಥಾಪಕ ಆಶ್ಲೇ ಗೈಲ್ಸ್ ನೀಡಿದ್ದಾರೆ. ಏತನ್ಮಧ್ಯೆ, ಕೋಲ್ಕತಾ ನೈಟ್ ರೈಡರ್ಸ್ ನಾಯಕ ಇಯಾನ್ ಮೋರ್ಗಾನ್ ಇಂಗ್ಲೆಂಡ್ ಮೂಲದವರಾಗಿದ್ದು, ಕೆಕೆಆರ್ ಹೊಸ ನಾಯಕನನ್ನು ನೇಮಿಸಬೇಕಾಗುತ್ತದೆ.

ಐಪಿಎಲ್ 2020 ರ ಆರಂಭದಲ್ಲಿ, ಕೆಕೆಆರ್ ಆಡಳಿತವು ದಿನೇಶ್ ಕಾರ್ತಿಕ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ ಇಯೊನ್ ಮೋರ್ಗಾನ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿತು. ಆದರೆ ಈಗ ಮೋರ್ಗಾನ್ ಅಲಭ್ಯರಾಗುವ ಕಾರಣ, ನಾಯಕತ್ವವನ್ನು ದಿನೇಶ್ ಕಾರ್ತಿಕ್ ಅವರಿಗೆ ಮತ್ತೆ ನೀಡುವ ಸಾಧ್ಯತೆ ಇದೆ. ಕಾರ್ತಿಕ್ ಕೆಕೆಆರ್ ತಂಡದ ಅತ್ಯಂತ ಅನುಭವಿ ಆಟಗಾರನಾಗಿರುವುದರಿಂದ ಅವರಿಗೆ ನಾಯಕತ್ವ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾರ್ತಿಕ್ ನಾಯಕತ್ವದಲ್ಲಿ ಕೆಕೆಆರ್ 37 ಪಂದ್ಯಗಳಲ್ಲಿ 21 ರಲ್ಲಿ ಜಯಗಳಿಸಿದೆ.

ಪ್ಯಾಟ್ ಕಮ್ಮಿನ್ಸ್ ಕೂಡ ಒಂದು ಆಯ್ಕೆಯಾಗಿದೆ
ಇಯಾನ್ ಮೋರ್ಗಾನ್ ಅನುಪಸ್ಥಿತಿಯಲ್ಲಿ, ಕಾರ್ತಿಕ್ ನಾಯಕತ್ವದ ಪ್ರಬಲ ಸ್ಪರ್ಧಿ. ಆದರೆ ಕೆಕೆಆರ್ ಮ್ಯಾನೇಜ್‌ಮೆಂಟ್ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್‌ರನ್ನು ಸಹ ಒಂದು ಆಯ್ಕೆಯಾಗಿ ಹೊಂದಿದೆ. ಕಮ್ಮಿನ್ಸ್ ಆಸ್ಟ್ರೇಲಿಯಾದ ಟೆಸ್ಟ್ ಮತ್ತು ಏಕದಿನ ಉಪನಾಯಕನಾಗಿ ನಾಯಕತ್ವದ ಅನುಭವ ಹೊಂದಿದ್ದಾರೆ. ಅವರು
ಐಪಿಎಲ್ 2021 ಪಂದ್ಯಗಳಲ್ಲಿ ಕೆಲವು ಉತ್ತಮ ಪ್ರದರ್ಶನ ನೀಡಿರುವುದರಿಂದ ಉಳಿದ ಪಂದ್ಯಗಳಿಗೆ ನಾಯಕನಾಗಬಹುದು.

ಐಪಿಎಲ್ 2021 ಅನ್ನು ಆಯೋಜಿಸಲಾಗುತ್ತಿದೆ
ಐಪಿಎಲ್‌ನಲ್ಲಿ 31 ಪಂದ್ಯಗಳು ಉಳಿದಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಯುಎಇಯಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ, ಇಡೀ ಐಪಿಎಲ್ 2020 ಯುಎಇಯಲ್ಲಿ ಆಡಲ್ಪಟ್ಟಿತು. ಆದಾಗ್ಯೂ, ಈ ವರ್ಷ ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಾಯಿತು. ಆದರೆ, ಕೊರೊನಾದ ಎರಡನೇ ಅಲೆಯಿದಿಂದಾಗಿ ಐಪಿಎಲ್ ಅನ್ನು ಮೇ 4 ಕ್ಕೆ ಮುಂದೂಡಲಾಯಿತು. ಇಂದಿನ ಸಭೆಯಲ್ಲಿ ಭಾರತದ ಕೊರೊನಾ ಪರಿಸ್ಥಿತಿ ಸೇರಿದಂತೆ ಹವಾಮಾನ ವಿಷಯಗಳ ಬಗ್ಗೆ ಬಿಸಿಸಿಐ ಚರ್ಚಿಸಿತು. ಐಪಿಎಲ್‌ನ ಉಳಿದ 31 ಪಂದ್ಯಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ನಡೆಯಲಿವೆ. ಭಾರತದ ಮಳೆಯ ವಾತಾವರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.