
ಐಪಿಎಲ್ 14 ನೇ ಆವೃತ್ತಿಯ ಪಂದ್ಯ ಸಂಖ್ಯೆ 9 ರಲ್ಲಿ ಎರಡು ಹೆವಿವೇಯ್ಟ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಮುಂಬೈ ಇಂಡಿಯನ್ಸ್ ತಂಡವು ಇದುವರೆಗೆ 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಪ್ರಸ್ತುತ ಪಂದ್ಯಾವಳಿಯ ಹಾಲಿ ಚಾಂಪಿಯನ್ ಆಗಿದೆ. ಇತ್ತ ಹೈದರಾಬಾದ್ ತಂಡವು ಒಮ್ಮೆ ಐಪಿಎಲ್ ಗೆದ್ದಿದೆ. ಅಲ್ಲದೆ, ಎಸ್‌ಆರ್‌ಹೆಚ್ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಬಹಳ ಸ್ಥಿರವಾಗಿದೆ ಮತ್ತು ಐಪಿಎಲ್‌ನ ಕೊನೆಯ 5 ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಿದೆ. ಆದರೆ, ಐಪಿಎಲ್‌ನ 2021 ರ ಆವೃತ್ತಿಯಲ್ಲಿ, ‘ಆರೆಂಜ್ ಆರ್ಮಿ’ ಕಳಪೆ ಆರಂಭವನ್ನು ಪಡೆದಿದೆ.
ಟೂರ್ನಿಯಲ್ಲಿ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ, ಎಸ್‌ಆರ್‌ಹೆಚ್ ತಂಡ ಬೆನ್ನಟ್ಟಿದೆ, ಮತ್ತು ಎರಡೂ ಪಂದ್ಯಗಳಲ್ಲಿ ಅವರು ಗಡಿ ದಾಟಲು ವಿಫಲರಾಗಿದ್ದಾರೆ. ಜೊತೆಗೆ ಕನ್ನಡಿಗ ಮನೀಶ್ ಪಾಂಡೆ ಮಧ್ಯಮ ಕ್ರಮದಲ್ಲಿ ನಿಧಾನಗತಿಯ ಆಟದ ಆಪಾದನೆಯನ್ನು ಹೊತ್ತಿದ್ದಾರೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪುನರಾಗಮನ ಮಾಡುವ ಮೂಲಕ ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಹೆಜ್ಜೆ ಹಾಕಲಿದೆ.
ಹೆಡ್-ಟು-ಹೆಡ್ ದಾಖಲೆಗೆ ಸಂಬಂಧಿಸಿದಂತೆ, ಈ ಎರಡು ತಂಡಗಳು ಪರಸ್ಪರ ಆಡಿದ 16 ಪಂದ್ಯಗಳಲ್ಲಿ ಇಬ್ಬರೂ ತಲಾ 8 ಪಂದ್ಯಗಳನ್ನು ಗೆದ್ದಿದ್ದಾರೆ. 2021 ರ ಏಪ್ರಿಲ್ 17 ರಂದು 17 ನೇ ಬಾರಿಗೆ ಉಭಯ ತಂಡಗಳು ಪರಸ್ಪರ ಎದುರಾಗುತ್ತಿರುವಾಗ ಯಾರು ಮುನ್ನಡೆ ಸಾಧಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಪಿಚ್ ವರದಿ
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಈವರೆಗೆ ನಡೆದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಚೆನ್ನೈ ಪಿಚ್‌ನಲ್ಲಿ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ ಚೆಂಡು ನಿಧಾನಗತಿಯಲ್ಲಿ ವರ್ತಿಸುತ್ತದೆ. ಮತ್ತು ರನ್ ಸ್ಕೋರಿಂಗ್ ಸುಲಭವಲ್ಲ. ಟಾಸ್ ಗೆಲ್ಲುವುದು ಮತ್ತು ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ.
ಮುಂಬೈ ಇಂಡಿಯನ್ಸ್
ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ರಾಹುಲ್ ಚಹರ್, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್
ಸನ್‌ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ ತಂಡವು ತಮ್ಮ ಕೊನೆಯ ಪಂದ್ಯವನ್ನು ಕಳೆದುಕೊಂಡಿದ್ದರೂ ಸಹ, ಅವರು ತಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ.
ಪ್ಲೇಯಿಂಗ್ ಇಲೆವೆನ್: ವೃದ್ದಿಮನ್ ಸಹಾ, ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ಅಬ್ದುಲ್ ಸಮದ್, ವಿಜಯ್ ಶಂಕರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಶಹಬಾಜ್ ನದೀಮ್, ಟಿ ನಟರಾಜನ್
ಎಂಐ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯ ಯಾವಾಗ?
ಎಂಐ ಮತ್ತು ಎಸ್‌ಆರ್‌ಹೆಚ್ ನಡುವಿನ ಐಪಿಎಲ್ ಪಂದ್ಯ ಏಪ್ರಿಲ್ 17, 2021 ರಂದು ನಡೆಯಲಿದೆ.
ಎಂಐ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಭಾರತೀಯ ಸಮಯದಲ್ಲಿ ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ. ಇದಲ್ಲದೆ, ಲೈವ್ ನವೀಕರಣಗಳು ಮತ್ತು ಓವರ್-ಬೈ ಓವರ್ ವ್ಯಾಖ್ಯಾನಕ್ಕಾಗಿ ನೀವು ಟಿವಿ9 ಡಿಜಿಟಲ್ ಲೈವ್ ಬ್ಲಾಗ್ ವೀಕ್ಷಿಸಬಹುದು.