IPL 2021: ಕೊಹ್ಲಿ ಕೆಟ್ಟ ನಾಯಕ! ವಿರಾಟ್​ಗಿಂತ ರೋಹಿತ್​ಗೆ​ ಉತ್ತಮ ನಾಯಕನಾಗುವ ಸಾಮರ್ಥ್ಯವಿದೆ: ಪಾರ್ಥಿವ್ ಪಟೇಲ್

|

Updated on: Apr 03, 2021 | 11:53 AM

IPL 2021: ಉಳಿದ ಎಲ್ಲಾ ತಂಡಗಳು ಮೊದಲು ಎಲ್ಲಿ ಆಡುತ್ತಿದ್ದೇವೆ, ಯಾವ ತಂಡವನ್ನು ಆಡಿಸುತ್ತಿದ್ದೇವೆ, ಬೆಸ್ಟ್ ಪ್ಲೇಯಿಂಗ್ ಇಲವೆನ್ ಯಾವುದು ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಾರೆ.

IPL 2021: ಕೊಹ್ಲಿ ಕೆಟ್ಟ ನಾಯಕ! ವಿರಾಟ್​ಗಿಂತ ರೋಹಿತ್​ಗೆ​ ಉತ್ತಮ ನಾಯಕನಾಗುವ ಸಾಮರ್ಥ್ಯವಿದೆ: ಪಾರ್ಥಿವ್ ಪಟೇಲ್
ಪಾರ್ಥಿವ್ ಪಟೇಲ್
Follow us on

ವಿಶ್ವದ ಅತ್ಯಂತ ಜನಪ್ರಿಯ ಟಿ 20 ಪಂದ್ಯಾವಳಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ತನ್ನ ಕ್ಯಾಬಿನೆಟ್‌ನಲ್ಲಿ ಮತ್ತೊಂದು ಐಪಿಎಲ್ ಟ್ರೋಫಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ, ರೋಹಿತ್ ಶರ್ಮಾ ನೇತೃತ್ವದ ಈ ತಂಡವು ಈವರೆಗೆ ಐಪಿಎಲ್‌ನ 13 ಆವೃತ್ತಿಗಳಲ್ಲಿ ಐದರಲ್ಲಿ ಪ್ರಶಸ್ತಿ ಗೆದ್ದಿದೆ. ಮತ್ತೊಮ್ಮೆ, ಈ ತಂಡವು ಚಾಂಪಿಯನ್ ಆಗಲು ಸ್ಪರ್ಧಿಗಳಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಮಾಜಿ ಆರ್​ಸಿಬಿ ಆಟಗಾರನನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡಿರುವುದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರ್​ಸಿಬಿ ವಿರುದ್ಧದ ಪಂದ್ಯಗಳಲ್ಲಿ ಹೆಚ್ಚು ನೆರವಾಗುವ ನಿರೀಕ್ಷೆ ಇದೆ.

ಮುಂಬೈ ಇಂಡಿಯನ್ಸ್ ದೃಷ್ಟಿಕೋನವೇ ಬೇರೆ
ಐಪಿಎಲ್ 14ನೇ ಆವೃತ್ತಿಯ ಬಗ್ಗೆ ಮಾತಾನಾಡಿರುವ ಪಾರ್ಥಿವ್ ಪಟೇಲ್ ತಾನು ಸೇರಿರುವ ಹೊಸ ತಂಡದ ಬಗ್ಗೆ ಕೊಂಚ ಹೊಗಳಿಯೇ ಮಾತಾನಾಡಿದ್ದಾರೆ. ತಾನು ಮುಂದೆ ಎಲ್ಲಿ ಆಡುತ್ತಿದ್ದೇನೆ ಅನ್ನೋದರ ಬಗ್ಗೆ ಮುಂಬೈ ಇಂಡಿಯನ್ಸ್‌ ಯೋಚಿಸುತ್ತದೆ ಎಂದು ನನಗನ್ನಿಸುತ್ತಿಲ್ಲ. ಉಳಿದ ಎಲ್ಲಾ ತಂಡಗಳು ಮೊದಲು ಎಲ್ಲಿ ಆಡುತ್ತಿದ್ದೇವೆ, ಯಾವ ತಂಡವನ್ನು ಆಡಿಸುತ್ತಿದ್ದೇವೆ, ಬೆಸ್ಟ್ ಪ್ಲೇಯಿಂಗ್ ಇಲವೆನ್ ಯಾವುದು ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಮುಂಬೈ ಈ ಸಂಗತಿಗಳ ಬಗ್ಗೆ ಯೋಚಿಸುತ್ತದೆ ಎಂದು ನನಗನ್ನಿಸುತ್ತಿಲ್ಲ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.

ತಂಡವು ಚೆನ್ನೈನಲ್ಲಿ ಆಡುತ್ತಿದ್ದರೆ, ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶವನ್ನು ನೀಡಬೇಕಾಗಿದೆ ಎಂದು ನೀವು ಭಾವಿಸಬಹುದು. ಆದರೆ ಮುಂಬೈ ಇಂಡಿಯನ್ಸ್ ದೃಷ್ಟಿಕೋನದಲ್ಲಿ ಅವರು ತಮ್ಮ ಪ್ಲೇಯಿಂಗ್ ಇಲವೆನ್ ಬಗ್ಗೆ ಜಾಸ್ತಿ ಯೋಚಿಸುತ್ತಾರೆ ಎಂದು ನನಗನ್ನಿಸುವುದಿಲ್ಲ. ಅದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಕೂಡ ಈಗ ಬೌಲಿಂಗ್ ಆರಂಭಿಸಿದ್ದಾರೆ. ಕೀರನ್ ಪೊಲಾರ್ಡ್ ಅವರ ನಿಧಾನಗತಿಯ ಬೌಲಿಂಗ್ ಚೆನ್ನೈ ಪಿಚ್‌ನಲ್ಲಿ ಸಹಕಾರಿಯಾಗಿದೆ.

ವಿರಾಟ್ ಗಿಂತ ರೋಹಿತ್ ಉತ್ತಮ ನಾಯಕ
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ರಾಹುಲ್ ಚಹರ್ ಅವರನ್ನೂ ಸ್ಪಿನ್ನರ್ ಆಗಿ ತಂಡ ಹೊಂದಿದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ. ತದನಂತರ ಅವರನ್ನು ಹೊರತುಪಡಿಸಿ, ಕ್ರುನಾಲ್ ಪಾಂಡ್ಯ ಸ್ಪಿನ್ ಬೌಲಿಂಗ್ ಆಯ್ಕೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಾರ್ಥಿವ್ ಪಟೇಲ್ ಆರ್ಸಿಬಿಯ ತಂಡದ ಭಾಗವಾಗಿದ್ದರು. ಆದರೆ, ಒಂದು ಪಂದ್ಯದಲ್ಲೂ ಅವರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ನಂತರ ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

ಆದರೆ, ವಿರಾಟ್ ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುವಾಗ, ಪಾರ್ಥಿವ್ ಅವರ ಬಗ್ಗೆ ಬಹಳ ಗಂಭೀರವಾದ ಪ್ರತಿಕ್ರಿಯೆಯನ್ನು ನೀಡಿದರು. ವಿರಾಟ್ ಕೊಹ್ಲಿ ಕೆಟ್ಟ ನಾಯಕ ಎಂದು ಪಾರ್ಥಿವ್ ಹೇಳಿದ್ದಾರೆ, ಉತ್ತಮ ನಿರ್ಧಾರಗಳು, ಆಟದ ಬಗ್ಗೆ ಉತ್ತಮ ತಿಳುವಳಿಕೆ, ಒತ್ತಡದಲ್ಲಿ ಆರಾಮವಾಗಿರುವುದು ಉತ್ತಮ, ಆಗ ರೋಹಿತ್ ಶರ್ಮಾ ಕೊಹ್ಲಿಗಿಂತ ಉತ್ತಮ ನಾಯಕ ಎಂದಿದ್ದಾರೆ. ಪಾರ್ಥಿವ್ ಪಟೇಲ್ ಐಪಿಎಲ್‌ನಲ್ಲಿ ಆರು ತಂಡಗಳಿಗೆ 139 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 120.78 ಸ್ಟ್ರೈಕ್ ದರದಲ್ಲಿ 2848 ರನ್ ಗಳಿಸಿದ್ದಾರೆ.

ಇದನ್ನೂ ಓದಿ:IPL 2021: ಐಪಿಎಲ್​ ಆರಂಭಕ್ಕೂ ಮುನ್ನ ಕೊರೊನಾಘಾತ.. ವಾಂಖೆಡೆ ಸ್ಟೇಡಿಯಂನ 8 ಸಿಬ್ಬಂದಿಗಳಿಗೆ ಕೊರೊನಾ ಧೃಡ!