IPL 2021: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಪೋಸ್ಟ್‌ಪೇಯ್ಡ್ ಸಿಮ್‌ಕಾರ್ಡ್‌ಗಳಂತೆ ಮೊದಮೊದಲು ಬಿಲ್ ಪಾವತಿಸಬೇಕಿಲ್ಲ; ಪ್ರಗ್ಯಾನ್ ಓಝಾ

|

Updated on: Apr 16, 2021 | 5:34 PM

IPL 2021: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪೋಸ್ಟ್‌ಪೇಯ್ಡ್ ಸಿಮ್‌ಕಾರ್ಡ್‌ಗಳಂತೆ. ಈ ಅನುಭವಿಗಳು ಬಿಲ್ ಪಾವತಿಸದೆ ತಮ್ಮನ್ನು ಸ್ವಲ್ಪ ಮುಂದೆ ತಳ್ಳಬಹುದು.

IPL 2021: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಪೋಸ್ಟ್‌ಪೇಯ್ಡ್ ಸಿಮ್‌ಕಾರ್ಡ್‌ಗಳಂತೆ ಮೊದಮೊದಲು ಬಿಲ್ ಪಾವತಿಸಬೇಕಿಲ್ಲ; ಪ್ರಗ್ಯಾನ್ ಓಝಾ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
Follow us on

ಇಂಡಿಯನ್ ಪ್ರೀಮಿಯರ್ ಲೀಗ್‌ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯ ತೇಜಸ್ಸಿನಿಂದ ಜಗತ್ತನ್ನು ಬೆರಗುಗೊಳಿಸುವ ದೊಡ್ಡ ಅವಕಾಶವಾಗಿದೆ. ಐಪಿಎಲ್‌ನ ಪ್ರಸಕ್ತ 14 ನೇ ಆವೃತ್ತಿಯೂ ಇದೇ ರೀತಿ ಇದೆ, ಯುವ ಭಾರತೀಯ ಕ್ರಿಕೆಟಿಗರು ಸೇರಿದಂತೆ ವಿಶ್ವದಾದ್ಯಂತದ ಭಾರತೀಯ ಕ್ರಿಕೆಟಿಗರು ಭವಿಷ್ಯದ ಚಿನ್ನದ ಬಾಗಿಲನ್ನು ತಟ್ಟಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯಾಣದಲ್ಲಿ, ಪ್ರಸ್ತುತ ಅನುಭವಿ ಆಟಗಾರರಿಗೂ ಇದು ಅಷ್ಟೇ ಮುಖ್ಯವಾಗುತ್ತದೆ. ಯುವ ಮತ್ತು ಅನುಭವಿ ಆಟಗಾರರ ಈ ಸಿನರ್ಜಿಯನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಅನುಭವಿ ಸ್ಪಿನ್ನರ್​ ಪ್ರಜ್ಞಾನ್ ಓಜಾ ಮೋಜಿನ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್​ರ ಮೊದಲ ಪಂದ್ಯದ ಶತಕದ ಇನ್ನಿಂಗ್ಸ್ ಬಗ್ಗೆ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಮಾತನಾಡಿದ್ದು ಸಂಜು ಸ್ಯಾಮ್ಸನ್ ಒಬ್ಬ ಅದ್ಭುತ ಆಟಗಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಸಂಜು ಸ್ಯಾಮ್ಸನ್ ಇನ್ನೂ ಸಹ ಕಿರಿಯ ಆಟಗಾರನಾಗಿರುವುದರಿಂದ ಮುಂಬರುವ ಪಂದ್ಯಗಳಲ್ಲಿಯೂ ಸಹ ಸ್ಥಿರವಾಗಿ ಉತ್ತಮ ಪ್ರದರ್ಶನವನ್ನು ನೀಡಿ ಪೈಪೋಟಿಯಲ್ಲಿ ಮೇಲುಗೈ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪೋಸ್ಟ್‌ಪೇಯ್ಡ್ ಸಿಮ್‌ಕಾರ್ಡ್‌ಗಳಂತೆ
ಪ್ರಗ್ಯಾನ್ ಓಝಾ ಭಾರತದ ಪ್ರಸ್ತುತ ತಂಡದ ಬಗ್ಗೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪೋಸ್ಟ್‌ಪೇಯ್ಡ್ ಸಿಮ್‌ಕಾರ್ಡ್‌ಗಳಂತೆ. ಈ ಅನುಭವಿಗಳು ಬಿಲ್ ಪಾವತಿಸದೆ ತಮ್ಮನ್ನು ಸ್ವಲ್ಪ ಮುಂದೆ ತಳ್ಳಬಹುದು. ಆದರೆ ಕೆಲವು ಯುವ ಕ್ರಿಕೆಟಿಗರು ಸಿಮ್‌ಕಾರ್ಡ್‌ಗಳಂತೆ. ಅವರು ನಿರ್ದಿಷ್ಟ ಸಮಯದೊಳಗೆ ತಮ್ಮನ್ನು ಪುನರ್ಭರ್ತಿ ಮಾಡಬೇಕಾಗುತ್ತದೆ. ಈ ಯುವ ಕ್ರಿಕೆಟಿಗರು ತಾವು ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳೆಂದು ಅರ್ಥಮಾಡಿಕೊಳ್ಳಬೇಕು ಮತ್ತು ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್ ಆಗಲು, ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಬೇಕು.

ಭಾರತೀಯ ತಂಡದ ಯುವ ಕ್ರಿಕೆಟಿಗರ ಮಟ್ಟಿಗೆ ಹೇಳುವುದಾದರೆ, ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಐಪಿಎಲ್ 2021 ಅನ್ನು ಪ್ರಾರಂಭಿಸಿದರು. ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಬಾರಿಸಿದರು. ಆದರೆ ದೆಹಲಿ ತಂಡದ ವಿರುದ್ಧ ಸಂಜು ವಿಫಲರಾಗಿದ್ದರು. ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯರಾಗಿ ಹಿಂದಿರುಗಿದರೆ, ಅವರು ರಾಜಸ್ಥಾನ್ ವಿರುದ್ಧ ಅದ್ಭುತ ಅರ್ಧಶತಕವನ್ನು ಬಾರಿಸಿದರು.