IPL 2021: ಆರ್ಸಿಬಿಯ ಸತತ 5ನೇ ಗೆಲುವಿಗೆ ತೊಡಕಾಗಿದ್ದು ಕೊಹ್ಲಿ ಮಾಡಿದ ಈ 5 ತಪ್ಪುಗಳಾ?

|

Updated on: Apr 26, 2021 | 2:53 PM

IPL 2021: ಕ್ಯಾಪ್ಟನ್ ಕೊಹ್ಲಿ ಐವರು ವೇಗಿಗಳನ್ನ ಆಡಿಸಿದ್ರು. ಸ್ಪಿನ್ನರ್ಗಳನ್ನ ಬಳಸಿಕೊಂಡು ಚೆನ್ನೈ ಆರ್ಭಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಿಲ್ಲ. ಇದು ಆರ್ಸಿಬಿ ಸೋಲಿಗೆ ಐದನೇ ಕಾರಣವಾಯ್ತು.

IPL 2021: ಆರ್ಸಿಬಿಯ ಸತತ 5ನೇ ಗೆಲುವಿಗೆ ತೊಡಕಾಗಿದ್ದು ಕೊಹ್ಲಿ ಮಾಡಿದ ಈ 5 ತಪ್ಪುಗಳಾ?
ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ
Follow us on

ಸತತ ನಾಲ್ಕು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿದ್ದ ಆರ್ಸಿಬಿ, ಸುಲಭವಾಗಿ ಚೆನ್ನೈ ವಿರುದ್ಧ 5ನೇ ಗೆಲುವು ದಾಖಲಿಸಬಹುದಿತ್ತು. ಆದ್ರೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಒಂದಲ್ಲಾ ಎರಡಲ್ಲಾ ಐದು ತಪ್ಪುಗಳನ್ನ ಮಾಡಿದ್ರು. ಈ ತಪ್ಪುಗಳೇ ಆರ್ಸಿಬಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿಬಿಡ್ತು.

ಕ್ಯಾಪ್ಟನ್ ಕೊಹ್ಲಿ ಮೊದಲ ತಪ್ಪು
ಹನ್ನೊಂದರ ಬಳಗವನ್ನ ಬದಲಾಯಿಸಿದ್ದು

ಸಿಎಸ್ಕೆ ವಿರುದ್ಧ ವಿರಾಟ್ ಮಾಡಿದ ಮೊದಲ ತಪ್ಪು ಇದೆ. ಗೆಲುವಿನ ತಂಡದಲ್ಲಿ ಎರಡೆರಡು ಬದಲಾವಣೆ ಮಾಡಿದ್ದು. ಕೇನ್ ರಿಚರ್ಡ್ಸನ್ ಬದಲು ಡೇನಿಯಲ್ ಕ್ರಿಶ್ಚಿಯನ್ ಮತ್ತು ಒಂದೂ ಪಂದ್ಯವನ್ನಾಡದ ನವದೀಪ್ ಸೈನಿಗೆ ಅವಕಾಶ ನೀಡಿದ್ದು. ಇವರಿಬ್ಬರು ಚೆನ್ನೈ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಕಾರಣವಾದ್ರು. ಕ್ರಿಶ್ಚಿಯನ್ ಮತ್ತು ಸೈನಿ ಒಂದೇ ಒಂದು ವಿಕೆಟ್ ಕೂಡ ಪಡೆಯಲಿಲ್ಲ. ವಿನ್ನಿಂಗ್ ಕಾಂಬಿನೇಷನ್ನಲ್ಲಿ ಬದಲಾವಣೆ ಮಾಡಿದ್ದೇ ಆರ್ಸಿಬಿ ಸೋಲಿಗೆ, ಕಂಟಕವಾಗಿಬಿಡ್ತು.

ಕ್ಯಾಪ್ಟನ್ ಕೊಹ್ಲಿ ಎರಡನೇ ತಪ್ಪು
ಕಳಪೆ ಫಾರ್ಮ್ನಲ್ಲಿದ್ದ ಕ್ರಿಶ್ಚಿಯನ್ಗೆ ಅವಕಾಶ

ಕಳಪೆ ಫಾರ್ಮ್ನಲ್ಲಿದ್ದ ಡೇನಿಯಲ್ ಕ್ರಿಶ್ಚಿಯನ್ಗೆ ಅವಕಾಶ ನೀಡಿದ್ದು ಕೊಹ್ಲಿ ಮಾಡಿದ ಎರಡನೇ ತಪ್ಪು. ಇದೇ ಕ್ರಿಶ್ಚಿಯನ್, ಇನ್ನು ಖಾತೆ ತೆರೆಯದಿದ್ದ ರವೀಂದ್ರ ಜಡೇಜಾ ಕ್ಯಾಚ್ ಕೈ ಚೆಲ್ಲಿ, ಚೆನ್ನೈ ಬಿಗ್ ಸ್ಕೋರ್ ಕಲೆಹಾಕಲು ಕಾರಣವಾದ್ರು..

ಬ್ಯಾಟಿಂಗ್ನಲ್ಲಿ ಕೇವಲ 1 ರನ್ಗಳಿಸಿದ ಕ್ರಿಶ್ಚಿಯನ್, ಬೌಲಿಂಗ್ನಲ್ಲಿ ಒಂದೇ ಒಂದು ವಿಕೆಟ್ ಕೂಡ ಪಡೆಯಲಿಲ್ಲ. ಬೇಸರದ ಅಂಗತಿ ಅಂದ್ರೆ ಆರ್ಸಿಬಿ ಪರ ಕಳೆದ ಎರಡೂ ಪಂದ್ಯಗಳಲ್ಲಿ ಪ್ಲಾಫ್ ಆಗಿದ್ರು. ಇದು ಗೊತ್ತಿದ್ದೂ ವಿರಾಟ್, ಮತ್ತೊಮ್ಮೆ ಡೇನ್ಗೆ ಅವಕಾಶ ನೀಡಿದ್ದು ದೊಡ್ಡ ಎಡವಟ್ಟು ಮಾಡಿಕೊಂಡ್ರು.

ಕ್ಯಾಪ್ಟನ್ ಕೊಹ್ಲಿ ಮೂರನೇ ತಪ್ಪು
ಫಾರ್ಮ್ನಲ್ಲಿದ್ದ ರಿಚರ್ಡ್ಸನ್ಗೆ ಅವಕಾಶ ನೀಡಲಿಲ್ಲ

ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕ್ರಿಶ್ಚಿಯನ್ ಬದಲು ಕೇನ್ ರಿಚರ್ಡ್ಸನ್ಗೆ ವಿರಾಟ್ ಅವಕಾಶ ನೀಡಿದ್ರು. ರಿಚರ್ಡ್ಸನ್ 3 ಓವರ್ ಮಾಡಿ ಕೇವಲ 29 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದ್ರು. ಹೀಗಾಗಿ ಚೆನ್ನೈ ವಿರುದ್ಧ ವಿರಾಟ್ ಕ್ರಿಶ್ಚಿಯನ್ ಬದಲು ರಿಚರ್ಡ್ಸನ್ಗೆ ಅವಕಾಶ ನೀಡಬೇಕಿತ್ತು.

ಕ್ಯಾಪ್ಟನ್ ಕೊಹ್ಲಿ ನಾಲ್ಕನೇ ತಪ್ಪು
ಒಂದೂ ಪಂದ್ಯವನ್ನಾಡದ ಸೈನಿಗೆ ಅವಕಾಶ ನೀಡಿದ್ದು

ಶಹಬಾಜ್ ಅಹ್ಮದ್ ಬದಲು ವಿರಾಟ್ ವೇಗಿ ನವದೀಪ್ ಸೈನಿಗೆ ಅವಕಾಶ ನೀಡಿದ್ರು. ಆದ್ರೆ ಸೈನಿ ಈ ಸೀಸನ್ನಲ್ಲಿ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ಏಕಾಏಕಿ ಬಲಿಷ್ಟ ಚೆನ್ನೈ ವಿರುದ್ಧ ವಿರಾಟ್ ಸೈನಿಗೆ ಅವಕಾಶ ನೀಡುವ ಅಗತ್ಯವಿರಲಿಲ್ಲ. ಆದ್ರೆ ಸೈನಿ ಎರಡು ಓವರ್ ಬೌಲಿಂಗ್ ಮಾಡಿ 27 ರನ್ ನೀಡಿದ. ಒಂದು ವೇಳೆ ಶಹಬಾಜ್ಗೆ ಅವಕಾಶ ನೀಡಿದ್ರೆ, ಸ್ಪಿನ್ ಮೋಡಿಯಿಂದ ಪಂದ್ಯಕ್ಕೆ ತಿರುವು ನೀಡಬಹುದಿತ್ತು. ಜೊತೆಗೆ ಆರ್ಸಿಬಿ ಬ್ಯಾಟಿಂಗ್ ಲೈನ್ ಅಪ್ ಮತ್ತಷ್ಟು ಸ್ಟ್ರಾಂಗ್ ಆಗಿರುತ್ತಿತ್ತು.

ಕ್ಯಾಪ್ಟನ್ ಕೊಹ್ಲಿ ಐದನೇ ತಪ್ಪು
ಐವರು ವೇಗಿಗಳಿಗೆ ಅವಕಾಶ ನೀಡಿದ್ದು

ಮಹೇಂದ್ರ ಸಿಂಗ್ ಧೋನಿ ಮೋಯಿನ್ ಅಲಿ ಅನ್ ಫಿಟ್ ಆಗಿದ್ದರಿಂದ ಇಮ್ರಾನ್ ತಾಹೀರ್ಗೆ ಅವಕಾಶ ನೀಡಿದ್ರು. ಅಷ್ಟೇ ಅಲ್ಲ.. ಡೇ ಹೊತ್ತಿನ ಪಂದ್ಯದಲ್ಲಿ ವಾಂಖೆಡೆ ಪಿಚ್ನಲ್ಲಿ ಸ್ಪಿನ್ನರ್ಗಳು ಗೇಮ್ ಚೇಂಜರ್ ಆಗ್ತಾರೆ ಅನ್ನೊದು ಧೋನಿಗೆ ಗೊತ್ತಿತ್ತು. ಹೀಗಾಗಿ ಧೋನಿ ತಾಹೀರ್ ಮತ್ತು ಜಡೇಜಾರಿಂದಲೇ ಇಡೀ ಪಂದ್ಯದ ದಿಕ್ಕು ಬದಲಿಸಿದ್ರು.

ಆದ್ರೆ ಕ್ಯಾಪ್ಟನ್ ಕೊಹ್ಲಿ ಐವರು ವೇಗಿಗಳನ್ನ ಆಡಿಸಿದ್ರು. ಸ್ಪಿನ್ನರ್ಗಳನ್ನ ಬಳಸಿಕೊಂಡು ಚೆನ್ನೈ ಆರ್ಭಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಿಲ್ಲ. ಇದು ಆರ್ಸಿಬಿ ಸೋಲಿಗೆ ಐದನೇ ಕಾರಣವಾಯ್ತು. ಈ ಐದು ತಪ್ಪುಗಳೇ ಆರ್ಸಿಬಿ ಸೋಲಿಗೆ ಕಾರಣವಾಯ್ತು. ಗೆಲುವಿನ ಜೋಷ್ನಲ್ಲಿದ್ದ ವಿರಾಟ್ ಇಷ್ಟು ಬೇಗ, ತಂಡದಲ್ಲಿ ಪ್ರಯೋಗ ಮಾಡುವ ಅವಶ್ಯಕತೆ ಇರಲಿಲ್ಲ. ಗೆಲುವಿನ ತಂಡವನ್ನೇ ಮುಂದುವರಿಸಿ ಚೆನ್ನೈ ತಂಡವನ್ನ ಬಗ್ಗು ಬಡಿದು, ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದಿತ್ತು.