IPL 2021: ಸಿಎಸ್ಕೆ ವಿರುದ್ಧ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ದಂಡದ ಬರೆ! ಮತ್ತೆ ಈ ತಪ್ಪಾದರೆ ವಿರಾಟ್ಗೆ ಒಂದು ಪಂದ್ಯದಿಂದ ಗೇಟ್ ಪಾಸ್
IPL 2021: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ಓವರ್‌ಗಳನ್ನು ಎಸೆಯಲು ಹೆಚ್ಚು ಸಮಯ ತೆಗೆದುಕೊಂಡಿತು. ಈ ಕಾರಣದಿಂದ ವಿರಾಟ್ ಕೊಹ್ಲಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿಗೆ ಭಾನುವಾರ ಕೆಟ್ಟ ದಿನವಾಗಿತ್ತು. ಐಪಿಎಲ್ (IPL 14) ನ 14 ನೇ ಆವೃತ್ತಿಯಲ್ಲಿ ಸತತ ನಾಲ್ಕು ಜಯಗಳಿಸಿದ ನಂತರ ಕೊಹ್ಲಿ ತಂಡ ಸೋಲನ್ನು ಅನುಭವಿಸಿತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ 69 ರನ್ಗಳಿಂದ ಆರ್ಸಿಬಿಯನ್ನು ಸೋಲಿಸಿತು. ರವೀಂದ್ರ ಜಡೇಜಾ ಅವರ ಆಲ್‌ರೌಂಡ್ ಗೇಮ್ ಎದುರು ಆರ್‌ಸಿಬಿ ಕೆಟ್ಟದಾಗಿ ಸೋತಿದೆ. ಈ ಗೆಲುವಿನೊಂದಿಗೆ ಚೆನ್ನೈ ಕೂಡ ಪಾಯಿಂಟ್ ಟೇಬಲ್‌ನಲ್ಲಿ ಬೆಂಗಳೂರಿನಿಂದ ಅಗ್ರ ಸ್ಥಾನವನ್ನು ಕಸಿದುಕೊಂಡಿದೆ. ಈಗ ಸಿಎಸ್ಕೆ ಅಗ್ರ ತಂಡವಾಗಿದೆ. ಇದರೊಂದಿಗೆ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಗೆ ಮತ್ತೊಂದು ಕೆಟ್ಟ ಸುದ್ದಿ ಇದೆ.
ವಿರಾಟ್ ಕೊಹ್ಲಿಗೆ 12 ಲಕ್ಷ ರೂ.ಗಳ ದಂಡ ವಾಸ್ತವವಾಗಿ, ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ನಿಧಾನವಾಗಿ ಓವರ್ ಮಾಡಿದ ಆರೋಪ ಕೇಳಿಬಂದಿದೆ. ಸಾಮಾನ್ಯವಾಗಿ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳನ್ನು ಪೂರ್ಣಗೊಳಿಸಲು 90 ನಿಮಿಷಗಳನ್ನು ನೀಡಲಾಗುತ್ತದೆ, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ಓವರ್‌ಗಳನ್ನು ಎಸೆಯಲು ಹೆಚ್ಚು ಸಮಯ ತೆಗೆದುಕೊಂಡಿತು. ಈ ಕಾರಣದಿಂದ ವಿರಾಟ್ ಕೊಹ್ಲಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ನಿರಂತರವಾಗಿ ಈ ತಪ್ಪನ್ನು ಮಾಡುತ್ತಿರುವುದು ಕಂಡುಬಂದರೆ, ಕೊಹ್ಲಿಯ ಮೇಲೆ ಪಂದ್ಯದ ಅಮಾನತು ಸಹ ವಿಧಿಸಬಹುದು. ಮುಂದಿನ ಪಂದ್ಯಗಳಲ್ಲಿ ಹೀಗಾಗದಂತೆ ನಿಯಂತ್ರಿಸಲು ಈ ಕಠಿಣ ಕ್ರಮ ಮುಖ್ಯವಾಗಿದೆ. ಒಂದು ವೇಳೆ ಈ ತಪ್ಪು ಮರುಕಳಿಸಿದರೆ ಅವರಿಗೆ ಪಂದ್ಯವೊಂದರಲ್ಲಿ ನಿಷೇಧ ಹೇರಬಹುದಾಗಿದೆ.
ಈ ಆವೃತ್ತಿಯಲ್ಲಿ ಶಿಕ್ಷೆ ಅನುಭವಿಸಿದ ನಾಲ್ಕನೇ ನಾಯಕ ವಿರಾಟ್ ಕೊಹ್ಲಿ. ಇವರಿಗಿಂತ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಯಾನ್ ಮೊರ್ಗಾನ್ ಕೂಡ ನಿಧಾನವಾಗಿ ಓವರ್ ಮುಗಿಸಿದಕ್ಕೆ ದಂಡ ಹಾಕಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ, ಮುಂದಿನ ಎಲ್ಲಾ ಪಂದ್ಯಗಳಲ್ಲಿ ಧೋನಿ ತಮ್ಮ ಬೌಲರ್‌ಗಳನ್ನು ಆದಷ್ಟು ಬೇಗನೆ ಬೌಲಿಂಗ್ ಮುಗಿಸುವಂತೆ ನೋಡಿಕೊಳ್ಳುತ್ತಿದ್ದಾರೆ.
ಐದು ಪಂದ್ಯಗಳಲ್ಲಿ ಫಲಿತಾಂಶ ಹೀಗಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಐದು ಪಂದ್ಯಗಳನ್ನು ಆಡಿದೆ. ಈ ಪೈಕಿ ಅವರು ನಾಲ್ಕು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಒಂದನ್ನು ಕಳೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ತಂಡವು ಆವೃತ್ತಿಯ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆದರೆ ವಿಜೇತ ರಥವು ಧೋನಿ ತಂಡದ ಮುಂದೆ ನಿಂತಿತು. ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ಸೋಲಿಸಿತು. ಇದರ ನಂತರ, ಎರಡನೇ ಪಂದ್ಯದಲ್ಲಿ, ಬೆರಗುಗೊಳಿಸುವ ಮತ್ತು ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಬೆಂಗಳೂರು ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಅನ್ನು 6 ರನ್‌ಗಳಿಂದ ಸೋಲಿಸಿತು.
ಮೂರನೇ ಪಂದ್ಯದಲ್ಲಿ ಇಯಾನ್ ಮೊರ್ಗಾನ್ ನಾಯಕತ್ವ ವಹಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 38 ರನ್ಗಳಿಂದ ಸೋಲಿಸಿ ಆರ್‌ಸಿಬಿ ಹ್ಯಾಟ್ರಿಕ್ ಜಯ ಸಾಧಿಸಿತು. ನಂತರ ಪ್ರಸಕ್ತ ಸರಣಿಯಲ್ಲಿ, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಆರ್‌ಸಿಬಿ ನಾಲ್ಕನೇ ಜಯ ಸಾಧಿಸಿತ್ತು.