IPL 2021: ಆರ್ಸಿಬಿ ಗೆಲುವಿಗೆ ಕಂಟಕವಾದ ಜಡೇಜಾ! ಕೊಹ್ಲಿ ಪಡೆಯ ಸೋಲಿಗೆ ಕಾರಣವಾಯ್ತು ಅದೊಂದು ಕ್ಯಾಚ್ ಡ್ರಾಪ್

IPL 2021 Ravindra Jadeja: 1 ರನ್ಗಳಿಸಿದ್ದಾಗ ಜಡೇಜಾ ಡೀಪ್ ಪಾಯಿಂಟ್ನಲ್ಲಿ ಡೇನಿಯಲ್ ಕ್ರಿಶ್ಚಿಯನ್ಗೆ ಸುಲಭ ಕ್ಯಾಚ್ ನೀಡಿದ್ರು. ಆದ್ರೆ ಕ್ರಿಶ್ಚಿಯನ್ ಕ್ಯಾಚ್ ಕೈ ಚೆಲ್ಲಿ ಜಡ್ಡುಗೆ ಜೀವದಾನ ನೀಡಿದ್ರು.

IPL 2021: ಆರ್ಸಿಬಿ ಗೆಲುವಿಗೆ ಕಂಟಕವಾದ ಜಡೇಜಾ! ಕೊಹ್ಲಿ ಪಡೆಯ ಸೋಲಿಗೆ ಕಾರಣವಾಯ್ತು ಅದೊಂದು ಕ್ಯಾಚ್ ಡ್ರಾಪ್
ವಿಕೆಟ್ ಕಿತ್ತ ಸಂಭ್ರಮದಲ್ಲಿ ಸಿಎಸ್​ಕೆ
pruthvi Shankar

|

Apr 25, 2021 | 9:08 PM

ಈ ಸೀಸನ್ನಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿ ಸೋಲಿಲ್ಲದ ಸರದಾರರಂತೆ ಮೆರೆಯುತ್ತಿದ್ದ ಆರ್ಸಿಬಿ, ಚೆನ್ನೈ ವಿರುದ್ಧ ಮೊದಲ ಸೋಲು ಅನುಭವಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈಗೆ ಆರಂಭಿಕರಾದ ಫಾಪ್ ಡುಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ 74 ರನ್ಗಳ ಅದ್ಭುತ ಓಪನಿಂಗ್ ನೀಡಿದ್ರು. ರುತುರಾಜ್ 33 ರನ್ಗಳಿಸಿದ್ರೆ, ಡುಪ್ಲೆಸಿಸ್ 41 ಬಾಲ್ಗಳಲ್ಲಿ 50 ರನ್ಗಳಿಸಿದ್ದಾಗ ಹರ್ಷಲ್ ಪಟೇಲ್ಗೆ ಔಟಾದ್ರು.

ಕ್ರಿಶ್ಚಿಯನ್ ಕ್ಯಾಚ್ ಕೈ ಚೆಲ್ಲಿ ಜಡ್ಡುಗೆ ಜೀವದಾನ ನೀಡಿದ್ರು ಮಿಡಲ್ ಆರ್ಡರ್ನಲ್ಲಿ 24 ರನ್ಗಳಿಸಿದ್ದ ಸುರೇಶ್ ರೈನಾ ಮತ್ತು 14 ರನ್ಗಳಿಸಿದ್ದ ಅಂಬಟಿ ರಾಯುಡುಗೆ, ಹರ್ಷಲ್ ಪಟೇಲ್ ಪೆವಿಲಿಯನ್ ದಾರಿ ತೋರಿಸಿದ್ರು. 142 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಸ್ಕೋರ್ ಹೆಚ್ಚಿಸಿದ್ದು ರವೀಂದ್ರ ಜಡೇಜಾ. 1 ರನ್ಗಳಿಸಿದ್ದಾಗ ಜಡೇಜಾ ಡೀಪ್ ಪಾಯಿಂಟ್ನಲ್ಲಿ ಡೇನಿಯಲ್ ಕ್ರಿಶ್ಚಿಯನ್ಗೆ ಸುಲಭ ಕ್ಯಾಚ್ ನೀಡಿದ್ರು. ಆದ್ರೆ ಕ್ರಿಶ್ಚಿಯನ್ ಕ್ಯಾಚ್ ಕೈ ಚೆಲ್ಲಿ ಜಡ್ಡುಗೆ ಜೀವದಾನ ನೀಡಿದ್ರು.

ಕ್ರಿಶ್ಚಿಯನ್ ನೀಡಿದ ಜೀವದಾನವನ್ನ ಸದುಪಯೋಗ ಪಡಿಸಿಕೊಂಡ ಜಡೇಜಾ, ವಾಂಖೆಡೆ ಮೈದಾನದಲ್ಲಿ ರನ್ ಮಳೆ ಹರಿಸಿದ್ರು. ಅದ್ರಲ್ಲೂ ಹರ್ಷಲ್ ಪಟೇಲ್ ಕೊನೆ ಓವರ್ನಲ್ಲಿ ಜಡ್ಡು, ರನ್ ಸುನಾಮಿ ಎಬ್ಬಿಸಿದ್ರು. ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಜಡೇಜಾ, ಒಂದು ನೋಬಾಲ್ ಸೇರಿದಂತೆ ಮೊದಲ ನಾಲ್ಕು ಎಸೆತಗಳನ್ನ ಸಿಕ್ಸರ್ಗಟ್ಟಿದ್ರು..

ಒಂದೇ ಓವರ್ನಲ್ಲಿ 37 ರನ್ಗಳಿಸಿದ ಜಡೇಜಾ 5ನೇ ಬಾಲ್ ಅನ್ನ ಸಿಕ್ಸರ್ಗಟ್ಟಿದ ಜಡೇಜಾ ಕೊನೆ ಬಾಲ್ ಅನ್ನ ಬೌಂಡರಿಗಟ್ಟಿದ್ರು. ಹೀಗೇ ಒಂದೇ ಓವರ್ನಲ್ಲಿ 37 ರನ್ಗಳಿಸಿದ ಜಡೇಜಾ, ಕೇವಲ 28 ಬಾಲ್ಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸೇರಿದಂತೆ ಅಜೇಯ 62 ರನ್ಗಳಿಸಿದ್ರು. ಚೆನ್ನೈ ನಿಗದಿತ 20 ಓವರ್ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 191 ರನ್ಗಳಿಸಿತು. ಆರ್ಸಿಬಿ ಪರ ದುಬಾರಿ ಸ್ಪೆಲ್ ಮಾಡಿದ್ರೂ ಹರ್ಷಲ್ ಪಟೇಲ್ 3 ವಿಕೆಟ್ ಪಡೆದು ಮಿಂಚಿದ್ರು..

ಚೆನ್ನೈ ನೀಡಿದ 191 ರನ್ಗಳನ್ನ ಬೆನ್ನತ್ತಿದ ಆರ್ಸಿಬಿ ಪರ ದೇವದತ್ ಪಡಿಕ್ಕಲ್ ಬಿಟ್ರೆ, ಮತ್ಯಾರೂ ಅಬ್ಬರಿಸಲಿಲ್ಲ. ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್ಗಳಿಸಿದ್ರೆ, ವಂಡೌನ್ನಲ್ಲಿ ಬ್ಯಾಟಿಂಗ್ ಮಾಡೋಕೆ ಬಂದ ಸುಂದರ್ 7 ರನ್ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು.

15 ಬಾಲ್ಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಿಡಿಸಿ 34 ರನ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ದೇವದತ್ ಪಡಿಕ್ಕಲ್ 15 ಬಾಲ್ಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಿಡಿಸಿ 34 ರನ್ಗಳಿಸಿದ್ದಾಗ ಠಾಕೂರ್​ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಮ್ಯಾಕ್ಸ್ವೆಲ್ ಹೋರಾಟವು 22 ರನ್ಗಳಿಗೆ ಅಂತ್ಯವಾಯ್ತು. ಇನ್ನು ಎಬಿ ಡಿವಿಲಿಯರ್ಸ್ 4 ರನ್ಗಳಿಸಿ ಔಟಾಗುತ್ತಿದ್ದಂತೆ ಆರ್ಸಿಬಿ ಆಟಗಾರರು ಜಡೇಜಾ ಮತ್ತು ಇಮ್ರಾನ್ ತಾಹೀರ್ ಸ್ಪಿನ್ ಮೋಡಿಗೆ ಪೆವಿಲಿಯನ್ ಪರೇಡ್ ನಡೆಸಿದ್ರು..

ಅಂತಿಮವಾಗಿ ಆರ್ಸಿಬಿ 9 ವಿಕೆಟ್ ನಷ್ಟಕ್ಕೆ 122 ರನ್ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಚೆನ್ನೈ 69 ರನ್ಗಳ ಭರ್ಜರಿ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada