AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs DC, IPL 2021 Match 20 Result: ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ವ್ಯರ್ಥ; ಸೂಪರ್ ಓವರ್​ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್!

SRH vs DC Scorecard: ಸನ್​ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 20ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

SRH vs DC, IPL 2021 Match 20 Result: ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ವ್ಯರ್ಥ; ಸೂಪರ್ ಓವರ್​ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್!
ಕೇನ್ ವಿಲಿಯಮ್ಸನ್
TV9 Web
| Updated By: ganapathi bhat|

Updated on:Sep 05, 2021 | 10:45 PM

Share

ಚೆನ್ನೈ: ಸೂಪರ್ ಓವರ್‌ವರೆಗೆ ಮುಂದುವರಿದಿದ್ದ ರೋಚಕ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಕಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ವ್ಯರ್ಥವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಸನ್‌ರೈಸರ್ಸ್ ತಂಡ 20 ಓವರ್‌ಗೆ 7 ವಿಕೆಟ್ ಕಳೆದುಕೊಂಡು 159 ರನ್ ದಾಖಲಿಸಲಷ್ಟೇ ಸಾಧ್ಯವಾಯಿತು. ಕೇನ್ ವಿಲಿಯಮ್ಸನ್ 66 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದಿದ್ದರು. ಆದರೆ, ಸೂಪರ್ ಓವರ್ ಹಂತಕ್ಕೆ ತಲುಪಿದ ಪಂದ್ಯದಲ್ಲಿ ಡೆಲ್ಲಿ ಗೆಲುವು ಕಂಡಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡ 8 ರನ್ ಗಳಿಸಿತ್ತು. ಅದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೆನ್ನತ್ತಿ ಗೆಲುವು ಕಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತ್ತು.‌ ಈ‌ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 160 ರನ್ ಗುರಿ‌‌ ನೀಡಿತ್ತು. ಡೆಲ್ಲಿ ಪರ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಅಮೋಘ ಆರಂಭ ನೀಡಿದ್ದರು. ಶಾ 39 ಬಾಲ್‌ಗೆ 53 ಹಾಗೂ ಧವನ್ 26 ಬಾಲ್‌ಗೆ 28 ಗಳಿಸಿದ್ದರು. ಈ ಎರಡು ವಿಕೆಟ್ ಪತನದ ಬಳಿಕ ರನ್ ವೇಗ ಕುಸಿತ ಕಂಡಿತ್ತು. ನಂತರ ನಾಯಕ ರಿಷಭ್ ಪಂತ್ 37, ಸ್ಟೀವ್ ಸ್ಮಿತ್ 34 ರನ್ ಗಳಿಸಿ ತಂಡದ ಮೊತ್ತ 150 ದಾಟುವಂತೆ ಮಾಡಿದ್ದರು.

ಪಂದ್ಯದ ಸಂಪೂರ್ಣ ವಿವರ ಈ ಕೆಳಗಿದೆ.

LIVE NEWS & UPDATES

The liveblog has ended.
  • 25 Apr 2021 11:50 PM (IST)

    ಸೂಪರ್ ಓವರ್​ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಸೂಪರ್ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಕಂಡಿದೆ. ಸನ್​ರೈಸರ್ಸ್ ಹೈದರಾಬಾದ್ ಸೋಲುಂಡಿದೆ.

  • 25 Apr 2021 11:33 PM (IST)

    ಸೂಪರ್ ಓವರ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ 8 ರನ್

    ಸೂಪರ್ ಓವರ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿದ್ದು, ಕೇನ್ ವಿಲಿಯಮ್ಸನ್ ಹಾಗೂ ಡೇವಿಡ್ ವಾರ್ನರ್ ಆಡಿದ್ದಾರೆ. ಅಕ್ಸರ್ ಪಟೇಲ್ ಬೌಲಿಂಗ್ ಮಾಡಿದ್ದಾರೆ. 1 ಓವರ್​ನಲ್ಲಿ 8 ರನ್ ಗಳಿಸಿದ್ದಾರೆ.

  • 25 Apr 2021 11:28 PM (IST)

    ಸೂಪರ್ ಓವರ್!

    ಸನ್​ರೈಸರ್ಸ್ ಹಾಗೂ ಡೆಲ್ಲಿ ಪಂದ್ಯ ಟೈ ಆಗಿದ್ದು, ಇದು ಈ ಐಪಿಎಲ್ ಟೂರ್ನಿಯ ಮೊದಲ ಸೂಪರ್ ಓವರ್ ಪಂದ್ಯವಾಗಿದೆ. ಯಾರು ಗೆಲ್ಲುತ್ತಾರೋ ನೋಡಬೇಕಿದೆ..

  • 25 Apr 2021 11:23 PM (IST)

    ಮ್ಯಾಚ್ ಟೈ!

    ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಟೈ ಆಗಿದೆ. ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟದಿಂದ ಸನ್​ರೈಸರ್ಸ್ 159 ರನ್ ದಾಖಲಿಸಿತ್ತು. ಪಂದ್ಯವೀಗ ಟೈ ಆಗಿದ್ದು, ಸೂಪರ್ ಓವರ್​ನತ್ತ ಮುಖ ಮಾಡಿದೆ.

  • 25 Apr 2021 11:15 PM (IST)

    ಸನ್​ರೈಸರ್ಸ್ ಗೆಲುವಿಗೆ 6 ಬಾಲ್​ಗೆ 16 ರನ್ ಬೇಕು

    ಸನ್​ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 6 ಬಾಲ್​ಗೆ 16 ರನ್ ಬೇಕಿದೆ. 19 ಓವರ್ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ 7 ವಿಕೆಟ್ ಕಳೆದುಕೊಂಡು 144 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ 61 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 11:12 PM (IST)

    ವಿಜಯ್ ಶಂಕರ್ ಔಟ್

    ಸನ್​ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ಕಳೆದುಕೊಂಡಿದೆ. ವಿಜಯ್ ಶಂಕರ್ ಔಟ್ ಆಗಿದ್ದಾರೆ. ತಂಡದ ಗೆಲುವಿಗೆ 8 ಬಾಲ್​ಗೆ 20 ರನ್ ಬೇಕಿದೆ. ಕೇನ್ ವಿಲಿಯಮ್ಸನ್ ಹಾಗೂ ಜಗದೀಶ್ ಸುಚಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 11:01 PM (IST)

    ರಶೀದ್ ಖಾನ್ ಔಟ್

    ಅಭಿಷೇಕ್ ಔಟಾದ ಬೆನ್ನಲ್ಲೇ ರಶೀದ್ ಖಾನ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಅಕ್ಸರ್ ಪಟೇಲ್ ಬಾಲ್​ಗೆ ಎಲ್​ಬಿಡಬ್ಲ್ಯು ಆಗಿದ್ದಾರೆ. ವಿಜಯ್ ಶಂಕರ್ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 18 ಬಾಲ್​ಗೆ 39 ರನ್ ಬೇಕಿದೆ. ಸನ್​ರೈಸರ್ಸ್ 17 ಓವರ್​ಗೆ 121 ರನ್ ಗಳಿಸಿದ್ದು 6 ವಿಕೆಟ್ ಕಳೆದುಕೊಂಡಿದೆ.

  • 25 Apr 2021 10:57 PM (IST)

    ಅಭಿಷೇಕ್ ಶರ್ಮಾ ಔಟ್

    6 ಬಾಲ್​ಗೆ 5 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅಕ್ಸರ್ ಪಟೇಲ್ ಬಾಲ್​ಗೆ ಎಲ್​ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಗೆಲುವಿಗೆ 23 ಬಾಲ್​ಗೆ 43 ರನ್ ಬೇಕಿದೆ. ಕೇನ್ ವಿಲಿಯಮ್​ಸನ್ ಮೇಲೆ ಸನ್​ರೈಸರ್ಸ್ ತಂಡ ಗೆಲ್ಲಿಸುವ ಒತ್ತಡವಿದೆ.

  • 25 Apr 2021 10:51 PM (IST)

    ಕೇನ್ ವಿಲಿಯಮ್​ಸನ್ ಅರ್ಧಶತಕ

    ಸನ್​ರೈಸರ್ಸ್ ಹೈದರಾಬಾದ್ ಪರ ಕೇನ್ ವಿಲಿಯಮ್​ಸನ್ ಅರ್ಧಶತಕ ಪೂರೈಸಿದ್ದಾರೆ. 42 ಬಾಲ್​ಗೆ 51 ರನ್ ಗಳಿಸಿ ಅವರು ಆಡುತ್ತಿದ್ದಾರೆ. ತಂಡ ಗೆಲ್ಲಲು 24 ಬಾಲ್​ಗೆ 43 ರನ್ ಬೇಕಿದೆ. ಅಭಿಷೇಕ್ ಶರ್ಮಾ ಕ್ರೀಸ್​ನಲ್ಲಿದ್ದಾರೆ. ಎಸ್​ಆರ್​ಎಚ್ 16 ಓವರ್​ಗೆ 117 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.

  • 25 Apr 2021 10:41 PM (IST)

    ಕೇದಾರ್ ಜಾಧವ್ ಔಟ್

    9 ಬಾಲ್​ಗೆ 9 ರನ್ ಗಳಿಸಿ ಕೇದಾರ್ ಜಾಧವ್ ವಿಕೆಟ್ ಒಪ್ಪಿಸಿದ್ದಾರೆ. ಅಮಿತ್ ಮಿಶ್ರಾ ಬೌಲಿಂಗ್​ಗೆ ಸ್ಟಂಪ್ ಔಟ್ ಆಗಿದ್ದಾರೆ. ತಂಡದ ಗೆಲುವಿಗೆ 34 ಬಾಲ್​ಗೆ 56 ರನ್ ಬೇಕಾಗಿದೆ.

  • 25 Apr 2021 10:39 PM (IST)

    100 ರನ್ ತಲುಪಿದ ಸನ್​ರೈಸರ್ಸ್

    ಸನ್​ರೈಸರ್ಸ್ ಹೈದರಾಬಾದ್ ತಂಡ 100 ರನ್ ದಾಖಲಿಸಿ ಆಡುತ್ತಿದೆ. 14 ಓವರ್​ಗೆ 3 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ. ಕೇನ್ ವಿಲಿಯಮ್​ಸನ್ 37 ಬಾಲ್​ಗೆ 44 ರನ್ ಹಾಗೂ ಕೇದಾರ್ ಜಾಧವ್ 7 ಬಾಲ್​ಗೆ 9 ರನ್ ಪೇರಿಸಿದ್ದಾರೆ. ಗೆಲ್ಲಲು 36 ಬಾಲ್​ಗೆ 56 ರನ್ ಬೇಕಿದೆ.

  • 25 Apr 2021 10:30 PM (IST)

    ಸನ್​ರೈಸರ್ಸ್ 88/3 (12 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 12 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 88 ರನ್ ದಾಖಲಿಸಿದೆ. ಸನ್​ರೈಸರ್ಸ್ ಪರ ಕೇನ್ ವಿಲಿಯಮ್​ಸನ್ ಹಾಗೂ ಕೇದಾರ್ ಜಾಧವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 10:27 PM (IST)

    ವಿರಾಟ್ ಸಿಂಗ್ ಔಟ್

    ಸನ್​ರೈಸರ್ಸ್ ಹೈದರಾಬಾದ್ ತಂಡದ ಮತ್ತೊಂದು ವಿಕೆಟ್ ಪತನವಾಗಿದೆ. ವಿರಾಟ್ ಸಿಂಗ್ 14 ಬಾಲ್​ಗೆ 4 ರನ್ ಗಳಿಸಿ ಅವೇಶ್ ಖಾನ್ ಬಾಲ್​ಗೆ ಸ್ಟಾಯಿನಿಸ್​ಗೆ ಕ್ಯಾಚ್ ನೀಡಿದ್ದಾರೆ.

  • 25 Apr 2021 10:25 PM (IST)

    ವಿಲಿಯಮ್​ಸನ್ ಉತ್ತಮ ಆಟ

    ಕೇನ್ ವಿಲಿಯಮ್​ಸನ್ ಉತ್ತಮ ಆಟ ಆಡುತ್ತಿದ್ದಾರೆ. 28 ಬಾಲ್​ಗೆ 34 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 11 ಓವರ್ ಅಂತ್ಯಕ್ಕೆ 84 ರನ್ ಗಳಿಸಿರುವ ಸನ್​ರೈಸರ್ಸ್ ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 54 ಬಾಲ್​ಗೆ 76 ರನ್ ಬೇಕಿದೆ. ವಿಜಯ್ ಶಂಕರ್, ಅಭಿಷೇಕ್ ಶರ್ಮಾ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 25 Apr 2021 10:15 PM (IST)

    ಸನ್​ರೈಸರ್ಸ್ 72/2 (9 ಓವರ್)

    9 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡು 72 ರನ್ ದಾಖಲಿಸಿದೆ. ಕೇನ್ ವಿಲಿಯಮ್​ಸನ್ 21 ಬಾಲ್​ಗೆ 25 ಹಾಗೂ ವಿರಾಟ್ ಸಿಂಗ್ 7 ಬಾಲ್​ಗೆ 2 ರನ್ ಗಳಿಸಿ ಆಡುತ್ತಿದ್ದಾರೆ. ಗೆಲ್ಲಲು 66 ಬಾಲ್​ಗೆ 88 ರನ್ ಬೇಕಿದೆ.

  • 25 Apr 2021 10:10 PM (IST)

    ಸನ್​ರೈಸರ್ಸ್ ಗೆಲುವಿಗೆ 72 ಬಾಲ್​ಗೆ 96 ರನ್ ಬೇಕು

    ಸನ್​ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 72 ಬಾಲ್​ಗೆ 96 ರನ್ ಬೇಕಾಗಿದೆ. 8 ಓವರ್​ಗೆ 2 ವಿಕೆಟ್ ಕಳೆದುಕೊಂಡಿರುವ ಎಸ್​ಆರ್​ಎಚ್ 64 ರನ್ ದಾಖಲಿಸಿದೆ. ಕೇನ್ ವಿಲಿಯಮ್​ಸನ್ ಹಾಗೂ ವಿರಾಟ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 10:02 PM (IST)

    2ನೇ ವಿಕೆಟ್ ಪತನ

    38 ರನ್ ಗಳಿಸಿದ್ದ ಬೈರ್​ಸ್ಟೋ ಅವೇಶ್​ ಖಾನ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಔಟಾಗುವುದಕ್ಕೂ ಮುನ್ನ ಬೈರ್​ಸ್ಟೋ 3 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು.

  • 25 Apr 2021 09:13 PM (IST)

    ಡೆಲ್ಲಿ ಕ್ಯಾಪಿಟಲ್ಸ್ 159/4 (20 ಓವರ್)

    ನಿಗದಿತ 20 ಓವರ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ಕಳೆದುಕೊಂಡು 159 ರನ್ ದಾಖಲಿಸಿದೆ. ಸನ್​ರೈಸರ್ಸ್ ಗೆಲ್ಲಲು 160 ರನ್​ಗಳ ಟಾರ್ಗೆಟ್ ನೀಡಿದೆ. ಡೆಲ್ಲಿ ಪರ ಸ್ಮಿತ್ 34 ರನ್ ಗಳಿಸಿ ಔಟ್ ಆಗದೆ ಉಳಿದಿದ್ದಾರೆ.

  • 25 Apr 2021 09:06 PM (IST)

    ಹೆಟ್ಮೆಯಿರ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ 19 ಓವರ್​ಗೆ 4 ವಿಕೆಟ್ ಕಳೆದುಕೊಂಡು 145 ರನ್ ದಾಖಲಿಸಿದೆ. ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಔಟಾದ ಬೆನ್ನಲ್ಲೇ ಹೆಟ್ಮಿಯರ್ ಕೂಡ ನಿರ್ಗಮಿಸಿದ್ದಾರೆ. 2 ಬಾಲ್​ಗೆ 1 ರನ್ ದಾಖಲಿಸಿದ ಅವರು ಸಿದ್ಧಾರ್ಥ್ ಕೌಲ್ ಬಾಲ್​ಗೆ ವಿಲಿಯಮ್​ಸನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ.

  • 25 Apr 2021 09:05 PM (IST)

    ರಿಷಭ್ ಪಂತ್ ಔಟ್!

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 27 ಬಾಲ್​ಗೆ 37 ರನ್ ಗಳಿಸಿ ಔಟ್ ಆಗಿದ್ದಾರೆ. ಸಿದ್ಧಾರ್ಥ್ ಕೌಲ್ ಬೌಲಿಂಗ್​ಗೆ ಸುಚಿತ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ.

  • 25 Apr 2021 09:01 PM (IST)

    ಫೇರ್ ಪ್ಲೇ ಅವಾರ್ಡ್; ಯಾವ ತಂಡ ಎಲ್ಲಿದೆ?

    ಐಪಿಎಲ್ ಟೂರ್ನಿಯ ಫೇರ್ ಪ್ಲೇ ಅವಾರ್ಡ್ ಪಟ್ಟಿಯಲ್ಲಿ ಯಾವ ತಂಡ ಎಲ್ಲಿದೆ ಎಂದು ಇಲ್ಲಿ ಮಾಹಿತಿ ಇದೆ.

  • 25 Apr 2021 09:00 PM (IST)

    ಡೆಲ್ಲಿ ಕ್ಯಾಪಿಟಲ್ಸ್ 142/2 (18 ಓವರ್)

    18 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 142 ರನ್ ಕಲೆಹಾಕಿದೆ. ಡೆಲ್ಲಿ ಪರ ರಿಷಭ್ ಪಂತ್ 37 ಮತ್ತು ಸ್ಮಿತ್ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 08:58 PM (IST)

    130 ರನ್ ದಾಟಿದ ಡೆಲ್ಲಿ ಕ್ಯಾಪಿಟಲ್ಸ್

    ಡೆಲ್ಲಿ ಕ್ಯಾಪಿಟಲ್ಸ್ 17ಮೇ ಓವರ್​ಗೆ 130 ರನ್ ಗಡಿ ದಾಟಿದ್ದಾರೆ. 2 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾರೆ.

    ಪಂದ್ಯದಲ್ಲಿ ವಿಜಯ್ ಶಂಕರ್ ಬೌಲಿಂಗ್ ಮಾಡಿದ ಆ ಒಂದು ಬಾಲ್ ಹೇಗಿತ್ತು? ಇಲ್ಲಿ ನೋಡಿ..

  • 25 Apr 2021 08:48 PM (IST)

    15 ಓವರ್​ಗೆ 116/2

    ಡೆಲ್ಲಿ ಕ್ಯಾಪಿಟಲ್ಸ್ ತಂಡ 15 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 116 ರನ್ ಕಲೆಹಾಕಿದೆ. ಮೊದಲ ಎರಡು ವಿಕೆಟ್ ಪತನದ ಬಳಿಕ ಡೆಲ್ಲಿ ರನ್ ವೇಗ ಇಳಿಕೆಯಾಗಿದೆ. ತಂಡದ ಪರ ರಿಷಭ್ ಪಂತ್ 24 ಹಾಗೂ ಸ್ಟೀವ್ ಸ್ಮಿತ್ 13 ರನ್ ಗಳಿಸಿ ಆಡುತ್ತಿದ್ದಾರೆ.

  • 25 Apr 2021 08:35 PM (IST)

    ಡೆಲ್ಲಿ ಕ್ಯಾಪಿಟಲ್ಸ್ 96/2 (13 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 13 ಓವರ್​ಗೆ 2 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ. ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೆಟ್ಮಿಯರ್ ಹಾಗೂ ಸ್ಟಾಯಿನಿಸ್ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 25 Apr 2021 08:27 PM (IST)

    ಪೃಥ್ವಿ ಶಾ ವಿಕೆಟ್ ಪತನ

    ಶಿಖರ್ ಧವನ್ ಬೆನ್ನಲ್ಲೆ ಮತ್ತೊಬ್ಬ ಆರಂಭಿಕ ಆಟಗಾರ ಪೃಥ್ವಿ ಶಾ ಔಟ್ ಆಗಿದ್ದಾರೆ. 39 ಬಾಲ್​ಗೆ 53 ರನ್ ಗಳಿಸಿ ರನೌಟ್ ಆಗಿದ್ದಾರೆ. ರಿಷಭ್ ಪಂತ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 86 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.

  • 25 Apr 2021 08:24 PM (IST)

    ಶಿಖರ್ ಧವನ್ ಔಟ್

    ಶಿಖರ್ ಧವನ್ 26 ಬಾಲ್​ಗೆ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

  • 25 Apr 2021 08:19 PM (IST)

    ಅರ್ಧಶತಕ ದಾಖಲಿಸಿದ ಪೃಥ್ವಿ ಶಾ

    ಪೃಥ್ವಿ ಶಾ 36 ಬಾಲ್​ಗೆ 1 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 51 ರನ್ ದಾಖಲಿಸಿದ್ದಾರೆ. 10.2 ಓವರ್​ಗೆ ಡೆಲ್ಲಿ 81 ರನ್ ದಾಖಲಿಸಿ ಉತ್ತಮ ಆಟವಾಡುತ್ತಿದೆ. ಹೈದರಬಾದ್ ಬೌಲರ್ಸ್​ಗೆ ವಿಕೆಟ್ ಪಡೆಯುವ ಒತ್ತಡ ಹೆಚ್ಚಾಗಿದೆ.

  • 25 Apr 2021 08:14 PM (IST)

    ಡೆಲ್ಲಿ ಕ್ಯಾಪಿಟಲ್ಸ್ 76/0 (9 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 9 ಓವರ್ ಅಂತ್ಯಕ್ಕೆ 76 ರನ್ ಗಳಿಸಿದೆ. ವಿಕೆಟ್ ನಷ್ಟವಾಗಿಲ್ಲ. ಪೃಥ್ವಿ ಶಾ 48 ಹಾಗೂ ಶಿಖರ್ ಧವನ್ 26 ರನ್ ದಾಖಲಿಸಿದ್ದಾರೆ.

  • 25 Apr 2021 07:59 PM (IST)

    ಅರ್ಧಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    ಪವರ್​ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 51 ರನ್ ದಾಖಲಿಸಿದೆ. ಪೃಥ್ವಿ ಶಾ 23 ಬಾಲ್​ಗೆ 39 ಹಾಗೂ ಶಿಖರ್ ಧವನ್ 13 ಬಾಲ್​ಗೆ 11 ರನ್ ಪೇರಿಸಿದ್ದಾರೆ.

  • 25 Apr 2021 07:56 PM (IST)

    ಪೃಥ್ವಿ ಶಾ- ಶಿಖರ್ ಧವನ್ ಉತ್ತಮ ಜೊತೆಯಾಟ

    ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 5 ಓವರ್​ಗೆ 48 ರನ್ ದಾಖಲಿಸಿದೆ. ವಿಕೆಟ್ ಕಳೆದುಕೊಂಡಿಲ್ಲ.

  • 25 Apr 2021 07:45 PM (IST)

    ಡೆಲ್ಲಿ ಕ್ಯಾಪಿಟಲ್ಸ್ 33/0 (3 ಓವರ್)

    3 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 33 ರನ್ ಗಳಿಸಿದೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅಮೋಘ ಆರಂಭ ಒದಗಿಸಿಕೊಟ್ಟಿದ್ದಾರೆ. 3 ಓವರ್​ಗಳಲ್ಲಿ ಒಟ್ಟು 6 ಬೌಂಡರಿ ಹಾಗೂ 1 ಸಿಕ್ಸರ್ ಬಂದಿದ್ದು, ಚೆನ್ನೈ ಪಿಚ್​ನಲ್ಲಿ ಬೃಹತ್ ಮೊತ್ತ ಕಲೆಹಾಕುವ ಉತ್ಸಾಹದಲ್ಲಿ ಪಂತ್ ಪಡೆ ಇದೆ.

  • 25 Apr 2021 07:40 PM (IST)

    2 ಓವರ್​ಗೆ 26 ರನ್

    ಡೆಲ್ಲಿ ಕ್ಯಾಪಿಟಲ್ಸ್ 2 ಓವರ್​ಗೆ ಭರ್ಜರಿ 26 ರನ್ ದಾಖಲಿಸಿದೆ. ಪೃಥ್ವಿ ಶಾ 9 ಬಾಲ್​ಗೆ 20 ರನ್ ಕಲೆಹಾಕಿದ್ದಾರೆ. ಎಸ್​ಆರ್​ಎಚ್ ಪರ ಅಭಿಷೇಕ್ ಶರ್ಮಾ ಮತ್ತು ಖಲೀಲ್ ಅಹ್ಮದ್ 14, 12 ರನ್ ಬಿಟ್ಟುಕೊಟ್ಟಿದ್ದಾರೆ.

  • 25 Apr 2021 07:36 PM (IST)

    ಬೌಂಡರಿ ಆಟ ಆರಂಭಿಸಿದ ಪೃಥ್ವಿ ಶಾ

    ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಡೆಲ್ಲಿ ಪರ ಪೃಥ್ವಿ ಶಾ ಮೊದಲ ಓವರ್​ನಲ್ಲಿ ಮೂರು ಬೌಂಡರಿ ಸಿಡಿಸಿದ್ದಾರೆ. ಶಿಖರ್ ಧವನ್ ಹಾಗೂ ಶಾ ಕಣಕ್ಕಿಳಿದಿದ್ದು, 1 ಓವರ್​ಗೆ ವಿಕೆಟ್ ಕಳೆದುಕೊಳ್ಳದೆ 12 ರನ್ ಗಳಿಸಿದ್ದಾರೆ. ಖಲೀಲ್ ಅಹ್ಮದ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.

  • 25 Apr 2021 07:27 PM (IST)

    ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

    ಸನ್​ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ಈ ರೀತಿ ಇದೆ..

  • 25 Apr 2021 07:11 PM (IST)

    ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಸನ್​ರೈಸರ್ಸ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ಸನ್​ರೈಸರ್ಸ್ ಹೈದರಾಬಾದ್ ಬೌಲಿಂಗ್ ಮಾಡಲಿದೆ.

Published On - Apr 25,2021 11:50 PM

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ