14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿದ್ದು ಉಳಿದ ಪಂದ್ಯಗಳು ಸೆಪ್ಟೆಂಬರ್ನಲ್ಲಿ ಆಯೋಜಿಸಲಾಗಿದೆ. ಇದಾದ ಬಳಿಕ ಡಿಸೆಂಬರ್ನಲ್ಲಿ ಐಪಿಎಲ್ 2022ಕ್ಕಾಗಿ ಮೆಗಾ ಹರಾಜು (IPL 2022 Mega Auction) ನಡೆಯುವ ಸಾಧ್ಯತೆ ಇದೆ. ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಯಾವ ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡು ಯಾವ ಪ್ಲೇಯರ್ ಅನ್ನು ಕೈಬಿಡಬಹುದು ಎಂಬ ಲೆಕ್ಕಚಾರ ಶುರುವಾಗಿದೆ.
ನಿಯಮಗಳ ಪ್ರಕಾರ, ಐಪಿಎಲ್ ಮೆಗಾ ಆಕ್ಷನ್ನಲ್ಲಿ ಪ್ರತಿಯೊಂದು ಫ್ರಾಂಚೈಸಿ ಕೇವಲ ನಾಲ್ಕು ಆಟಗಾರರನ್ನು ಮಾತ್ರ ತನ್ನಲೇ ಉಳಿಸಿಕೊಳ್ಳುವ ಅಧಿಕಾರ ಹೊಂದಿದೆ. ಉಳಿದ ಎಲ್ಲಾ ಆಟಗಾರರನ್ನು ರಿಲೀಸ್ ಮಾಡಬೇಕಿದೆ. ಇದರಲ್ಲಿ ಮೂರು ಭಾರತೀಯ ಆಟಗಾರರು ಮತ್ತು ಓರ್ವ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. ಅಥವಾ ಇಬ್ಬರು ಭಾರತೀಯ ಆಟಗಾರರು-ಇಬ್ಬರು ವಿದೇಶಿ ಆಟಗಾರರನ್ನು ತಮ್ಮಲ್ಲೆ ಉಳಿಸಿಕೊಳ್ಳಬಹುದು.
ಸದ್ಯ ಆರ್ಸಿಬಿ ಫ್ರಾಂಚೈಸಿ ಐಪಿಎಲ್ 2022 ಮೆಗಾ ಹರಾಜಿಗೆ ತನ್ನಲ್ಲೆ ಉಳಿಸಿಕೊಳ್ಳಬಹುದಾದ ಆಟಗಾರರು ಯಾರಿರಬಹುದೆಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೆಸರಿಸಿದ್ದಾರೆ.
ಈ ಬಗ್ಗೆ ಅಭಿಮಾನಿಯೊಬ್ಬರು ಟ್ವಿಟ್ಟರ್ನಲ್ಲಿ ಹಾಗ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ‘ಐಪಿಎಲ್ ಮೆಗಾ ಆಕ್ಷನ್ ಆರಂಭಕ್ಕೂ ಮುನ್ನ ಫ್ರಾಂಚೈಸಿ 4 ಆಟಗಾರರನ್ನು ತಮ್ಮಲ್ಲೆ ಉಳಿಸಿಕೊಳ್ಳಬಹುದು. ಹಾಗಾದ್ರೆ ಆರ್ಸಿಬಿ ಯಾರನ್ನೆಲ್ಲ ತಮ್ಮ ತಂಡದಲ್ಲೇ ರಿಟೈನ್ ಮಾಡಬೇಕು’ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಹಾಗ್, ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್ ಹಾಗೂ ದೇವದತ್ ಪಡಿಕ್ಕಲ್ ಅವರ ನಾಲ್ಕು ಹೆಸರನ್ನು ತಿಳಿಸಿದ್ದಾರೆ. ಅಚ್ಚರಿ ಎಂದರೆ ಆರ್ಸಿಬಿ ಆಪತ್ಭಾಂದವ ಎಬಿ ಡಿವಿಯರ್ಸ್ ಹೆಸರು ತೆಗೆದುಕೊಂಡಿಲ್ಲ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ‘ಎಬಿಡಿ ಎಷ್ಟು ದಿನಗಳ ವರೆಗೆ ಕ್ರಿಕೆಟ್ ಆಡುತ್ತಾರೆ ಎಂಬುದು ಖಚಿತ ಇಲ್ಲ. ಹೀಗಾಗಿ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವುದು ಅಪಾಯಕಾರಿ’ ಎಂದು ಹೇಳಿದ್ದಾರೆ.
4 year window to invest in players.
Kohli
Siraj
Chahal
Padikkal
Keeping locals vital.
I would find out on how long AB De Villiers wants to play to before I make the final decision. Jamieson would be looked out to. Overseas player investment to risky today though. https://t.co/z5bycmioie— Brad Hogg (@Brad_Hogg) July 12, 2021
ಸದ್ಯ ಅರ್ಧಕ್ಕೆ ನಿಂತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 18ರಂದು ಯುನೈಟೆಡ್ ಅರಬ್ ಎಮಿರೈಟ್ಸ್ (UAE) ಆತಿಥ್ಯದಲ್ಲಿ ಆಯೋಜನೆ ಆಗುವ ಸಾಧ್ಯತೆ ದಟ್ಟವಾಗಿದೆ.
ಐಪಿಎಲ್ 2021 ಟೂರ್ನಿಯನ್ನು ಭಾರತದಲ್ಲೇ ಸಂಪೂರ್ಣವಾಗಿ ಆಯೋಜಿಸಲು ಬಿಸಿಸಿಐ ಬಯೋ ಬಬಲ್ ನಿರ್ಮಾಣ ಮಾಡಿತ್ತು. ಆದರೂ ನಾಲ್ಕು ಫ್ರಾಂಚೈಸಿ ಆಟಗಾರರಲ್ಲಿ ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಕಾರಣ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿ ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.
ಏಪ್ರಿಲ್ 9ರಂದು ಶುರುವಾಗಿದ್ದ 60 ಪಂದ್ಯಗಳ ಐಪಿಎಲ್ 2021 ಟೂರ್ನಿ ನಿಗದಿಯಂತೆ ಮೇ 30ಕ್ಕೆ ಅಹ್ಮದಾಬಾದ್‌ನಲ್ಲಿ ಅಂತ್ಯಗೊಳ್ಳಬೇಕಿತ್ತು. ಆದರೆ, 29 ಪಂದ್ಯಗಳ ನಂತರ ಮೇ 4ರಂದು ಟೂರ್ನಿಗೆ ತಾತ್ಕಾಲಿಕ ತೆರೆ ಬಿದ್ದತು. ಐಪಿಎಲ್ 2022 ಅನ್ನು ಭಾರತದಲ್ಲೇ ಆಯೋಜನ ಮಾಡುವ ಪ್ಲಾನ್ನಲ್ಲಿ ಬಿಸಿಸಿಐ ಇದೆ. ಅಲ್ಲದೆ ಮುಂದಿನ ಆವೃತ್ತಿಗೆ ಎರಡು ಹೊಸ ತಂಡಗಳು ಸೇರ್ಪಡೆ ಆಗಲಿದೆ.
‘ನೀವು ಐಸಿಸಿ ಟ್ರೋಫಿ ಬಗ್ಗೆ ಮಾತಾಡ್ತೀರಿ, ಆದ್ರೆ ಕೊಹ್ಲಿ ಇನ್ನೂ IPL ಟ್ರೋಫಿಯನ್ನೇ ಗೆದ್ದಿಲ್ಲ’