ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 2023ಕ್ಕೆ (IPL 2023) ಎಲ್ಲಾ 10 ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಶುರುಮಾಡಿಕೊಂಡಿದೆ. ಇದೇ ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿದ್ದು ಇದಕ್ಕೂ ಮುನ್ನ ಬಿಸಿಸಿಐ (BCCI) ಎಲ್ಲಾ ತಂಡಗಳಿಗೆ ತಮಗೆ ಅಗತ್ಯವಿಲ್ಲದ ಆಟಗಾರರನ್ನು ಬಿಡುಗಡೆ ಮಾಡಲು ಹೇಳಿದೆ. ಅದರಂತೆ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad), ಕ್ಯಾಪ್ಟನ್ ಕೇನ್ ವಿಲಿಯಮ್ಸನ್(kane williamson) ಸೇರಿದಂತೆ ಮೂವರು ಕನ್ನಡಿಗರನ್ನು ತಂಡದಿಂದ ಬಿಡುಗಡೆಗೊಳಿಸಿದೆ.
RCB 2023: ಐಪಿಎಲ್ 2023 ಹರಾಜಿಗೂ ಮುನ್ನ 4 ಆಟಗಾರರನ್ನು ರಿಲೀಸ್ ಮಾಡಿದ ಆರ್ಸಿಬಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ಯಾಪ್ಟನ್ ಕೂಡ ಆಗಿದ್ದ ಕೇನ್ ವಿಲಿಯಮ್ಸನ್ ಹಾಗೂ ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕನಾಗಿರುವ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. ಇವರ ಜೊತೆಗೆ ಫ್ರಾಂಚೈಸಿಯಲ್ಲಿದ್ದ ಮೂವರು ಕರ್ನಾಟಕ ಆಟಗಾರರಾದ ಶ್ರೇಯಸ್ ಗೋಪಾಲ್, ಜೆ.ಸುಚಿತ್ ಹಾಗೂ ರವಿಕುಮಾರ್ ಸಮರ್ಥ್ ಅವರನ್ನೂ ಸಹ ತಂಡದಿಂದ ರಿಲೀಸ್ ಮಾಡಿದೆ
It was one memorable association, #Risers. ?
Thank you for your contributions and here’s wishing you all the very best for your future endeavours. ?#SunRisersHyderabad pic.twitter.com/3s4ICRV4mA
— SunRisers Hyderabad (@SunRisers) November 15, 2022
ಅಚ್ಚರಿ ನಿರ್ಧಾರ ಕೈಗೊಂಡ ಸನ್‌ರೈಸರ್ಸ್
ಕೇನ್ ವಿಲಿಯಮ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅತ್ಯಂತ ದುಬಾರಿ ಆಟಗಾರನಾಗಿದ್ದರು. ಬರೋಬ್ಬರಿ 14 ಕೋಟಿ ರೂಪಾಯಿ ಮೊತ್ತವನ್ನು ಕೇನ್ ವಿಲಿಯಮ್ಸನ್‌ಗೆ ನೀಡಿತ್ತು. 8 ವರ್ಷಗಳ ತಂಡದಲ್ಲಿ ಸ್ಥಾನಪಡೆದಿದ್ದ ಕೇನ್ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ 76 ಪಂದ್ಯಗಳನ್ನು ಆಡಿದ್ದು, 46 ಪಂದ್ಯಗಳಲ್ಲಿ ನಾಯಕರಾಗಿದ್ದರು. ಅಲ್ಲದೇ 36.22ರ ಸರಾಸರಿಯಲ್ಲಿ 126.03 ಸ್ಟ್ರೈಕ್‌ರೇಟ್‌ನಲ್ಲಿ 2101 ರನ್ ಬಾರಿಸಿದ್ದರು. ಆದ್ರೆ, ಇದೀಗ ತಂಡದ ನಾಯಕನನ್ನೇ ಬಿಡುಗಡೆಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಈಗ ವಿಲಿಯಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕಾರಣ, ಸನ್‌ರೈಸರ್ಸ್ ತಂಡದಲ್ಲಿ ಹೆಚ್ಚಿನ ಹಣ ಹರಾಜಿಗೆ ಉಳಿಯಲಿದೆ. ಅದಲ್ಲದೆ, 10.75 ಕೋಟಿ ರೂಪಾಯಿಗೆ ಖರೀದಿಸಿದ್ದ ಪೂರನ್ ಅವರನ್ನು ಹೊರಹಾಕಿದೆ. ಕೇವಲ ಎರಡೇ ಆಟಗಾರರನ್ನು ಹೊರಹಾಕುವ ಮೂಲಕ 24.75 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಬೇರೆ ಆಟಗಾರರನ್ನು ಖರೀದಿಸಲು ಪ್ಲಾನ್ ಮಾಡಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ:
ಬಿಡುಗಡೆಯಾದ ಆಟಗಾರರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಪ್ರಿಯಮ್ ಗಾರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೋ ಶೆಫರ್ಡ್, ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್.
ಟ್ರೇಡಿಂಗ್ ಮೂಲಕ ಆಟಗಾರರ ಆಯ್ಕೆ: ಯಾರೂ ಇಲ್ಲ
ತಂಡದಲ್ಲಿ ಇರುವ ಒಟ್ಟ ಮೊತ್ತ: 42.25 ಕೋಟಿ ರೂಪಾಯಿ.
ವಿದೇಶಿ ಆಟಗಾರರ ಕೋಟಾ ಬಾಕಿ: 4
ಸದ್ಯದ ತಂಡದಲ್ಲಿ ಉಳಿದುಕೊಂಡಿರುವ ಆಟಗಾರರು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
Published On - 8:30 pm, Tue, 15 November 22