ಸೆಪ್ಟಂಬರ್ 19 ರಿಂದ ನವಂಬರ್ 8 ರವರೆಗೆ UAE ನಲ್ಲಿ IPL2020 .. ಕನ್ಫರ್ಮ್!

| Updated By: Team Veegam

Updated on: Jul 25, 2020 | 9:09 PM

ಕೊರೊನಾ ವೈರಸ್ ಕಾರಣದಿಂದಾಗಿ ಮುಂದೂಡಲಾಗಿದ್ದ IPL 2020 UAEನಲ್ಲಿ ನಡೆಯೋದು ಖಚಿತವಾಗಿದೆ. ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್​​ನಲ್ಲಿ IPL ಆರಂಭವಾಗಲಿದೆ ಅಂತಾ ಐಪಿಎಲ್ ಅಧ್ಯಕ್ಷ ಬ್ರಿಜೇಷ್​ ಪಟೇಲ್ ತಿಳಿಸಿದ್ದಾರೆ. ಹೀಗಾಗಿ, ಸೆ.19ರಂದು ಆರಂಭವಾಗಲಿದ್ದು, ನ. 8ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಗ್ಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದಿರೋ ಬ್ರಿಜೇಷ್ ಪಟೇಲ್, ಅನುಮತಿ ಸಿಕ್ಕ ನಂತರ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ಈಗಾಗಲೇ ದುಬೈ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ […]

ಸೆಪ್ಟಂಬರ್ 19 ರಿಂದ ನವಂಬರ್ 8 ರವರೆಗೆ UAE ನಲ್ಲಿ IPL2020 .. ಕನ್ಫರ್ಮ್!
ಐಪಿಎಲ್​ ಟ್ರೋಪಿ
Follow us on

ಕೊರೊನಾ ವೈರಸ್ ಕಾರಣದಿಂದಾಗಿ ಮುಂದೂಡಲಾಗಿದ್ದ IPL 2020 UAEನಲ್ಲಿ ನಡೆಯೋದು ಖಚಿತವಾಗಿದೆ. ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್​​ನಲ್ಲಿ IPL ಆರಂಭವಾಗಲಿದೆ ಅಂತಾ ಐಪಿಎಲ್ ಅಧ್ಯಕ್ಷ ಬ್ರಿಜೇಷ್​ ಪಟೇಲ್ ತಿಳಿಸಿದ್ದಾರೆ.

ಹೀಗಾಗಿ, ಸೆ.19ರಂದು ಆರಂಭವಾಗಲಿದ್ದು, ನ. 8ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಗ್ಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದಿರೋ ಬ್ರಿಜೇಷ್ ಪಟೇಲ್, ಅನುಮತಿ ಸಿಕ್ಕ ನಂತರ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ಈಗಾಗಲೇ ದುಬೈ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ ಮತ್ತು ಈವೆಂಟ್‌ಗಳ ಮುಖ್ಯಸ್ಥ ಸಲ್ಮಾನ್ ಹನೀಫ್ ದುಬೈನಲ್ಲಿ IPL ನಡೆಸಲು ಎಲ್ಲಾ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳುತ್ತಿರೋದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ, ಐಪಿಎಲ್ UAEನಲ್ಲೇ ನಡೆಯೋದು ಖಚಿತವಾದಂತಾಗಿದೆ.

ಇನ್ನು, ಕೊರೊನಾ ಸೋಂಕಿನ ಭೀತಿಯಿಂದಾಗಿ ಈ ಬಾರಿಯ IPL ಪಂದ್ಯಗಳನ್ನ ಬಹುತೇಕ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸೋದಕ್ಕೆ BCCI ತೀರ್ಮಾನಿಸಿದೆ. ಹಾಗಿದ್ರೂ UAE ಸರ್ಕಾರದ ಬಳಿ ಮಾತನಾಡಿ, ದೈಹಿಕ ಅಂತರದ ಆಧಾರದ ಮೇಲೆ ಕಡಿಮೆ ಪ್ರೇಕ್ಷಕರಿಗೆ ಮೈದಾನಕ್ಕೆ ಬರೋದಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳೋದಾಗಿ ಬ್ರಿಜೇಷ್ ಪಟೇಲ್ ತಿಳಿಸಿದ್ದಾರೆ.

Published On - 3:00 pm, Sat, 25 July 20