ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಅಂತ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವು ತಾನಾಗೇ ಸೋಲಿನ ದವಡಗೆ ಸಿಕ್ಕಿಕೊಂಡಿದ್ದೂ ಅಲ್ಲದೆ ಆಲ್ಮೋಸ್ಟ್ ಗೆದ್ದಿದ್ದ ಪಂದ್ಯವನ್ನು ಕೊನೇ ಘಳಿಗೆಯಲ್ಲಿ ಸೋತುಬಿಟ್ಟಿತು. ಎರಡು ಬಾಲ್ಗಳಲ್ಲಿ ಒಂದು ರನ್ ಮಾತ್ರ ಗಳಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಖಾತೆ ಓಪನ್ ಮಾಡುವ ಅವಕಾಶ ಹೊಂದಿದ್ದ ಪಂಜಾಬ್ ಆ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು, ಪಂದ್ಯ ಟೈ ಮಾಡಿಕೊಂಡಿತಲ್ಲದೆ ಸೂಪರ್ ಓವರ್ನಲ್ಲಿ ಸೋತುಬಿಟ್ಟಿತು.
ಆಕ್ಷರಶ: ಏಕಾಂಗಿ ಹೋರಾಟ ನಡೆಸಿ ಟೀಮನ್ನು ಗೆಲುವಿನ ಕೂದಲೆಳೆಯ ಸನಿಹಕ್ಕೆ ಕೊಂಡೊಯ್ದಿದ್ದ ಓಪನರ್ ಮಯಾಂಕ್ ಅಗರವಾಲ್ ಪಂದ್ಯದ ಫಲಿತಾಂಶದಿಂದ ತೀವ್ರ ನಿರಾಶೆಗೊಳಗಾದರು. ಬ್ಯಾಟಿಂಗ್ಗೆ ಅಷ್ಟೇನು ಅನಕೂಲಕರವಾಗಿರದ ಪಿಚ್ನಲ್ಲಿ ಒಂದೆಡೆ ವಿಕೆಟ್ಗಳು ಬೀಳುತ್ತಿದ್ದರೂ, ಮೊದಲು ನೆಲಕಚ್ಚಿ ಆಡಿ ನಂತರ ಅಗತ್ಯಕ್ಕೆ ತಕ್ಕಂತೆ ಗೇರ್ ಬದಲಿಸಿದ ಮಾಯಾಂಕ್, ಮ್ಯಾಚ್ ಮುಗಿದ ನಂತರ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾ, ‘ರವಿವಾರ ನಮ್ಮ ಪಾಲಿಗೆ ಒಳ್ಳೆಯ ದಿನವಾಗಿರಲಿಲ್ಲ,’ ಎಂದರು.
‘‘ನಾವು ಪಂದ್ಯ ಸೋತರೂ ಒಂದಷ್ಟು ಪಾಸಿಟಿವ್ ಅಂಶಗಳು ಲಭ್ಯವಾಗಿವೆ. ಅತ್ಯಂತ ದುಸ್ಥಿಯಲ್ಲಿದ್ದ ನಾವು ಪಂದ್ಯದಲ್ಲಿ ವಾಪಸ್ಸು ಬಂದಿದ್ದು ಅಸಾಮಾನ್ಯವಾದ ಸಂಗತಿ. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭಿಸಿದಾಗ ನಮ್ಮ ಬೌಲರ್ಗಳು