ಇಂದಿನ ಡೆಕ್ಕನ್ ಡರ್ಬಿಯಲ್ಲಿ ಗೆಲ್ಲುವ ತಂಡ ಟಾಪ್ ನಾಲ್ಕರಲ್ಲಿ ಸ್ಥಾನ ಗಿಟ್ಟಿಸುತ್ತದೆ

|

Updated on: Oct 10, 2020 | 5:11 PM

ಇಂಡಿಯನ್ ಪ್ರಿಮೀಯರ್ ಲೀಗ್13ನೇ ಅವೃತಿಯಲ್ಲಿ ಇಂದಿನ ಡಬಲ್ ಹೆಡ್ಡರ್​ನ ಎರಡನೇ ಪಂದ್ಯ ದಕ್ಷಿಣ ಭಾರತದ ಫ್ರಾಂಚೈಸಿಗಳಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇವತ್ತಿನ ಪಂದ್ಯವನ್ನು ಗೆಲ್ಲುವ ತಂಡ ಪಾಯಂಟ್ಸ್ ಟೇಬಲ್​ನ ಮೇಲಿನ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಲಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3ರನ್ನು ಗೆದ್ದು 2ರಲ್ಲಿ ಸೋತಿರುವ ಆರ್​ಸಿಬಿ 6 ಪಾಯಿಂಟ್ಸ್ ಶೇಖರಿಸಿದ್ದು, ಕಳೆದ 7 ವರ್ಷಗಳಲ್ಲಿ ಈ ಟೀಮು ಕಂಡಿರುವ ಅತ್ಯುತ್ತಮ ಆರಂಭ ಇದಾಗಿದೆ. […]

ಇಂದಿನ ಡೆಕ್ಕನ್ ಡರ್ಬಿಯಲ್ಲಿ ಗೆಲ್ಲುವ ತಂಡ ಟಾಪ್ ನಾಲ್ಕರಲ್ಲಿ ಸ್ಥಾನ ಗಿಟ್ಟಿಸುತ್ತದೆ
Follow us on

ಇಂಡಿಯನ್ ಪ್ರಿಮೀಯರ್ ಲೀಗ್13ನೇ ಅವೃತಿಯಲ್ಲಿ ಇಂದಿನ ಡಬಲ್ ಹೆಡ್ಡರ್​ನ ಎರಡನೇ ಪಂದ್ಯ ದಕ್ಷಿಣ ಭಾರತದ ಫ್ರಾಂಚೈಸಿಗಳಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇವತ್ತಿನ ಪಂದ್ಯವನ್ನು ಗೆಲ್ಲುವ ತಂಡ ಪಾಯಂಟ್ಸ್ ಟೇಬಲ್​ನ ಮೇಲಿನ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಲಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3ರನ್ನು ಗೆದ್ದು 2ರಲ್ಲಿ ಸೋತಿರುವ ಆರ್​ಸಿಬಿ 6 ಪಾಯಿಂಟ್ಸ್ ಶೇಖರಿಸಿದ್ದು, ಕಳೆದ 7 ವರ್ಷಗಳಲ್ಲಿ ಈ ಟೀಮು ಕಂಡಿರುವ ಅತ್ಯುತ್ತಮ ಆರಂಭ ಇದಾಗಿದೆ. ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲೇ ತನ್ನ ಅತಿಕೆಟ್ಟ ಆರಂಭ ಕಂಡಿರುವ ಸಿಎಸ್​ಕೆ 6 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಮಾತ್ರ ಗೆದ್ದು 4 ಸೋತಿದೆ.

ಪಾಯಿಂಟ್ಸ್ ಟೇಬಲ್​ನಲ್ಲಿ ಬೆಂಗಳೂರು ಚೆನೈಗಿಂತ ಮುಂದಿದೆಯಾದರೂ ಭಾರಿ ಅಂತರದಲ್ಲಿ ಎರಡು ಸೋಲುಗಳನ್ನು ಅನುಭವಿಸಿರುವುದರಿಂದ ಅದರ ನೆಟ್​ ರನ್ ರೇಟ್ ನಿರಾಶಾದಾಯಕವಾಗಿದೆ. ಹಾಗೆಯೇ, ದಕ್ಷಿಣದ ಈ ಎರಡು ತಂಡಗಳು ಮುಖಾಮುಖಿಯಾದಾಗಿನ ಫಲಿತಾಂಶಗಳನ್ನು ಗಮನಿಸಿದ್ದೇಯಾದರೆ, ಚೆನೈ ನಿಚ್ಚಳ ಮೇಲುಗೈ ಸಾಧಿಸಿದೆ. ಮಹೇಂದ್ರ ಸಿಂಗ್ ಧೋನಿಯ ಪಡೆ 15 ಸಲ ಗೆಲುವು ಸಾಧಿಸಿದ್ದರೆ, ಬೆಂಗಳೂರು ಕೇವಲ 8 ಬಾರಿ ಮಾತ್ರ ಗೆದ್ದಿದೆ.

ಇವತ್ತಿನ ಪಂದ್ಯದಲ್ಲಿ ಕೊಹ್ಲಿ ತಂಡಕ್ಕೆ ಬ್ಯಾಟಿಂಗ್​ನಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ನೀಳಕಾಯದ ಯುವ ಆರಂಭ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್​ನಲ್ಲಿದ್ದು ಈಗಾಗಲೇ 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರ ಜೊತೆಗಾರ ಆರನ್ ಫಿಂಚ್ ಹೇಳಿಕೊಳ್ಳುವಂಥ ಫಾರ್ಮ್​ನಲ್ಲಿ ಇಲ್ಲ, 5 ಪಂದ್ಯಗಳಲ್ಲಿ ಅವರು 1 ಅರ್ಧ ಶತಕದೊಂದಿಗೆ 122 ರನ್ ಗಳಿಸಿದ್ದಾರೆ. ನಾಯಕ ಕೊಹ್ಲಿ ಫಾರ್ಮ್​ಗೆ ಮರಳಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಡೆಲ್ಲಿ ವಿರುದ್ಧ ಆಡಿದ ಪಂದ್ಯದಲ್ಲಿ ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಿದ್ದರೂ ಕೊಹ್ಲಿ 43 ರನ್ ಗಳಿಸಿ ತಮ್ಮ ತಂಡದ ಪರ ಟಾಪ್ ಸ್ಕೋರರ್ ಆಗಿದ್ದರು. ಬೆಂಗಳೂರು ಟೀಮಿನ ನೆಚ್ಚಿನ ಆಟಗಾರ ಎಬಿ ಡಿ ವಿಲಿಯರ್ಸ್ ಎರಡು ಅರ್ಧ ಶತಕಗಳನ್ನು ಬಾರಿಸಿರುವುದು ಉತ್ತಮ ಫಾರ್ಮ್​ನಲ್ಲಿರುವುದನ್ನು ಸೂಚಿಸುತ್ತದೆ.

ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ ದಕ್ಷಿಣ ಆಫ್ರಿಕಾದ ಆಲ್​ರೌಂಡರ್ ಕ್ರಿಸ್ ಮಾರಿಸ್ ಅವರನ್ನು ಆಡಿಸುವ ನಿರೀಕ್ಷೆಯಿದೆ. ಅವರು ಆಡಿದ್ದೇಯಾದಲ್ಲ್ಲಿ ಶಿವಮ್ ದುಬೆ ಮತ್ತು ಮೋಯಿನ್ ಅಲಿ ನಂತರ ಬ್ಯಾಟಿಂಗ್​​ಗೆ ಬರಬಹುದು.

ಬೌಲಿಂಗ್ ವಿಭಾಗಕ್ಕೆ ಬಂದರೆ, ಯುಜ್ವೇಂದ್ರ ಚಹಲ್ ಮತ್ತು ವೇಗಿ ನವದೀಪ್ ಸೈನಿ ಅವರಿಂದ ಮಾತ್ರ ಉತ್ತಮ ಪ್ರದರ್ಶನಗಳು ಬರುತ್ತಿವೆ. ವಾಷಿಂಗ್​ಟನ್ ಸುಂದರ್ ವಿಕೆಟ್ಪಡೆಯುತ್ತಿಲ್ಲವಾದರೂ ಮಿತವ್ಯಯಿ ಅನಿಸಿಕೊಳ್ಳುತ್ತಿದ್ದಾರೆ. ಡೇಲ್ ಸ್ಟೀನ್ ಮತ್ತು ಉಮೇಶ್ ಯಾದವ್ ಪರಿಣಾಮಕಾರಿಯೆನಿಸುತ್ತಿಲ್ಲ. ಪ್ರೊಟಿಯಾನನ್ನು ಈಗಾಗಲೇ ಅಡುವ ಇಲೆವೆನ್​ನಿಂದ ಕೈಬಿಡಲಾಗಿದೆ. 

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್​ಗಳ ಅತ್ಯಂತ ಅಧಿಕಾರಯುತ ಜಯ ಗಳಿಸಿದ ನಂತರ ಧೋನಿಯ ಟೀಮು ಗೆಲುವಿನ ಹಳಿಗೆ ಹಿಂತಿರುಗಿತೆಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ, 6ನೇ ಪಂದ್ಯದಲ್ಲಿ ಅದು ಕೊಲ್ಕತಾ ನೆಟ್​ರೈಡರ್ಸ್​ಗೆ 10 ರನ್​ಗಳಿಂದ ಸೋತು ಅವರಲ್ಲಿ ತೀವ್ರ ನಿರಾಶೆಯನ್ನು ಹುಟ್ಟಿಸಿತು. ಸದರಿ ಪಂದ್ಯದಲ್ಲಿ ಕೇವಲ ಶೇನ್ ವಾಟ್ಸನ್ (50) ಮತ್ತು ಅಂಬಟಿ ರಾಯುಡು (30) ಮಾತ್ರ ರನ್ ಗಳಿಸಿದರು.

ಈ ಸೋಲಿನ ನಂತರ ಧೋನಿ ಮತ್ತು ವೈಫಲ್ಯಗಳ ಸಾಕಾರಮೂರ್ತಿಯಾಗಿರುವ ಕೇದಾರ ಜಾಧವ್ ಬಹಳ ಕೆಟ್ಟದಾಗಿ ಟ್ರೋಲ್​ಗೊಳಗಾದರು. ಅದು ಧೋನಿಯನ್ನು ತೀವ್ರವಾಗಿ ಹರ್ಟ್ ಮಾಡಿರುತ್ತದೆ. ವಿಕೃತ ಮನಸ್ಸಿನ ಮುಟ್ಠಾಳನೊಬ್ಬ ಧೋನಿಯ 5 ವರ್ಷದ ಹೆಣ್ಣುಮಗುವಿನ ಬಗ್ಗೆ ಸಹ ಅಶ್ಲೀಲ ಪದಗಳನ್ನು ಬಳಸಿದ್ದಾನೆ. ಥೂ ಅವನ ಜನ್ಮಕ್ಕಿಷ್ಟು…

ಜಾಧವ್​ರ ಐಪಿಎಲ್ ಕರೀಯರ್ ಮುಕ್ತಾಯ ಹಂತಕ್ಕೆ ಬಂದಂತಿದೆ. ಇವತ್ತಿನ ಪಂದ್ಯದಲ್ಲಿ ಅವರ ಸ್ಥಾನದಲ್ಲಿ ಋತುರಾಜ್ ಗಾಯಕ್ವಾಡ್ ಆಡಬಹುದು. 2019ರ ಸಾಲಿನ ಐಪಿಲ್​ನಲ್ಲಿ ಪರ್ಪಲ್ ಕ್ಯಾಪಿನ ಒಡೆಯರಾಗಿದ್ದ 41 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಲೆಗ್ಗೀ ತಾಹಿರ್ ಹುಸೇನ್ ಈ ವರ್ಷ ಒಂದು ಪಂದ್ಯ ಕೂಡ ಅಡದಿರುವುದು ಆಶ್ಚರ್ಯಹುಟ್ಟಿಸುತ್ತದೆ. ಅವರನ್ನು ಆಡಿಸಬೇಕಾದರೆ ಯಾವುದಾದರೊಬ್ಬ ಓವರಸೀಸ್ ಆಟಗಾರನ್ನು ಡ್ರಾಪ್ ಮಾಡಬೇಕಾಗುತ್ತದೆ. 

ಡ್ವೇನ್ ಬ್ರಾವೊ ಅಥವಾ ಸ್ಯಾಮ್ ಕರನ್ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವುದರಿಂದ ಅವರನ್ನು ಕೈಬಿಡಲಾಗದು. ಇನ್ನುಳಿದ ಇಬ್ಬರು ವಿದೇಶಿ ಆಟಗಾರರೆಂದರೆ ಫಫ್ ಡು ಪ್ಲೆಸ್ಸಿ ಮತ್ತು ವಾಟ್ಸನ್. ಇಬ್ಬರಲ್ಲಿ ಒಬ್ಬರನ್ನು ಡ್ರಾಪ್ ಮಾಡುವ ಯೋಚನೆಯನ್ನು ಕೂಡ ಮಾಡಲಾಗದು. ಪರಿಸ್ಥಿತಿ ಹೀಗಿರುವಾಗ ತಾಹಿರ್ ಇವತ್ತು ಸಹ ಬೆಂಚ್ ಕಾಯಿಸಬೇಕಾಗಬಹುದು.

ಟೀಮ್ ಕಾಂಪೊಸಿಶನ್​ಗಳು ಹೇಗಾದರೂ ಇರಲಿ, ಇವತ್ತಿನ ಡೆಕ್ಕನ್ ಡರ್ಬಿಯಲ್ಲಿ ಗೆಲುವಿಗಾಗಿ ತೀವ್ರ ಸೆಣಸಾಟ ನಡೆಯಲಿರುವುದಂತೂ ಶತಸಿದ್ದ.