ಮುಂದಿನವಾರವೇ ಕ್ರಿಕೆಟರ್​ ಜಸ್ಪ್ರಿತ್​ ಬುಮ್ರಾ ಮದುವೆ; ವಧು ಯಾರು? ಎಲ್ಲಿ ನಡೆಯಲಿದೆ ವಿವಾಹ..? ಇಲ್ಲಿದೆ ನೋಡಿ ಮಾಹಿತಿ

|

Updated on: Mar 09, 2021 | 1:22 PM

Jasprit bumrah: ಸೋಷಿಯಲ್​ ಮೀಡಿಯಾಗಳಲ್ಲಿ ಬುಮ್ರಾ ಮದುವೆಯಾಗಲಿರುವ ಯುವತಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಅವರು ಕೇರಳದ ನಟಿ ಅನುಪಮಾ ಪರಮೇಶ್ವರನ್​ರನ್ನು ವರಿಸಲಿದ್ದಾರೆ ಎಂದೂ ಹೇಳಲಾಗಿತ್ತು.

ಮುಂದಿನವಾರವೇ ಕ್ರಿಕೆಟರ್​ ಜಸ್ಪ್ರಿತ್​ ಬುಮ್ರಾ ಮದುವೆ; ವಧು ಯಾರು? ಎಲ್ಲಿ ನಡೆಯಲಿದೆ ವಿವಾಹ..? ಇಲ್ಲಿದೆ ನೋಡಿ ಮಾಹಿತಿ
ಸಂಜನಾ ಗಣೇಶನ್​ ಮತ್ತು ಜಸ್ಪ್ರಿತ್​ ಬುಮ್ರಾ
Follow us on

ಟೀಂ ಇಂಡಿಯಾ ವೇಗಿ ಜಸ್ಪ್ರಿತ್​ ಬುಮ್ರಾ ಮದುವೆ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು.. ಅವರು ಮದುವೆಯಾಗಲಿದ್ದಾರೆ ಎಂಬುದು ಸುದ್ದಿಯಾಗಿತ್ತು. ಆದರೆ ಅವರು ಯಾರನ್ನು ವಿವಾಹವಾಗುತ್ತಿದ್ದಾರೆ? ಬುಮ್ರಾ ಮದುವೆ ಯಾವಾಗ ಎಂದು ಸ್ಪಷ್ಟವಾಗಿರಲಿಲ್ಲ. ಅದರಲ್ಲೂ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಾವಳಿಯ ನಾಲ್ಕನೇ (ಅಂತಿಮ) ಪಂದ್ಯವನ್ನೂ ಆಡದೆ, ವೈಯಕ್ತಿಕ ಕಾರಣಕ್ಕೆ ರಜೆ ಪಡೆಯುತ್ತಿದ್ದೇನೆ ಎಂದು ಹೇಳಿ ವಾಪಸ್​ ಬಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಚರ್ಚೆಯಾಗಿತ್ತು. ಇದೀಗ ಬುಮ್ರಾ ಮದುವೆ ವಿಚಾರದಲ್ಲಿ ಎದ್ದಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಅವರ ವಿವಾಹ ಕೆಲವೇ ದಿನಗಳಲ್ಲಿ ಗೋವಾದಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ವಿವಾಹ ಸಿದ್ಧತೆಗಾಗಿಯೇ ಬುಮ್ರಾ ರಜೆ ಪಡೆದಿದ್ದಾಗಿ ಬಿಸಿಸಿಐ ಮೂಲಗಳೂ ತಿಳಿಸಿವೆ.

ಜಸ್ಪ್ರೀತ್​ ಬುಮ್ರಾ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರ ಕೈ ಹಿಡಿಯಲಿದ್ದು, ಇವರ ವಿವಾಹ ಮಾರ್ಚ್​ 14 ಮತ್ತು 15ರಂದು ನಡೆಯಲಿದೆ ಎಂದು ಸ್ಪಷ್ಟವಾಗಿದೆ. ಹಲವರು ಇವರಿಬ್ಬರ ಫೋಟೋವನ್ನೂ ಟ್ವಿಟರ್​​ನಲ್ಲಿ ಹಾಕಿ, ಶುಭಾಶಯ ಕೋರಿದ್ದಾರೆ. ಈ ಮಧ್ಯೆ ಸೋಷಿಯಲ್​ ಮೀಡಿಯಾಗಳಲ್ಲಿ ಬುಮ್ರಾ ಮದುವೆಯಾಗಲಿರುವ ಯುವತಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಅವರು ಕೇರಳದ ನಟಿ ಅನುಪಮಾ ಪರಮೇಶ್ವರನ್​ರನ್ನು ವರಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಬುಮ್ರಾ ಮಾತ್ರ ಇದುವರೆಗೂ ತಮ್ಮ ವೈಯಕ್ತಿಕ ಬದುಕು, ಮದುವೆ ಬಗ್ಗೆ ಒಂದಿಷ್ಟೂ ಕೂಡ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೀಗ ಅವರ ಆಪ್ತವಲಯ, ಅಭಿಮಾನಿಗಳು ತಮ್ಮ ಟ್ವಿಟರ್​ ಮೂಲಕ ಬುಮ್ರಾ ಮತ್ತು ಸಂಜನಾ ಮದುವೆಯಾಗುವುದನ್ನು ಖಚಿತಪಡಿಸಿದ್ದಾರೆ.

ಯಾರು ಈ ಸಂಜನಾ ಗಣೇಶನ್​?
28 ವರ್ಷದ ಸಂಜನಾ ಗಣೇಶನ್​ ಮೂಲತಃ ಪುಣೆಯವರು. ಮಾಡೆಲಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಜನಾ 2014ರಲ್ಲಿ ಫೆಮಿನಾ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್​ ಕೂಡ ಆಗಿದ್ದಾರೆ. 2016ರಲ್ಲಿ ಸ್ಟಾರ್​ಸ್ಪೋರ್ಟ್ಸ್​ಗೆ ಕ್ರೀಡಾ ನಿರೂಪಕಿಯಾಗಿ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಸಂಜನಾಗೆ ಅವರ ಪ್ರತಿಸ್ಪರ್ಧಿಯಾಗಿದ್ದ ಅಶ್ವಿನಿ ಕೌಲ್​​ ಜತೆ ಅಫೇರ್​ ಇತ್ತು. ಆದರೆ ಅವರಿಬ್ಬರ ರಿಲೇಶನ್​ಶಿಪ್​ ತುಂಬ ದಿನ ಇರಲಿಲ್ಲ ಎಂಬ ರೂಮರ್​ ಕೂಡ ಇದೆ. 2016ರ ಈಚೆಗೆ ಕ್ರೀಡೆಗೆ ಸಂಬಂಧಪಟ್ಟ ಶೋ, ಸಂದರ್ಶನಗಳಲ್ಲಿ ಸಕ್ರಿಯವಾಗಿದ್ದಾರೆ. ಐಪಿಲ್​ ವೇಳೆ ಕೋಲ್ಕತ್ತ ನೈಟ್​ ರೈಡರ್ಸ್​ ತಂಡದ ನೈಟ್​ ಕ್ಲಬ್​ ಶೋನ ನಿರೂಪಕಿ ಇವರು. ಬುಮ್ರಾ ಮತ್ತು ಸಂಜನಾ ವಿವಾಹವಾಗುತ್ತಿರುವ ಬಗ್ಗೆ ಇವರಿಬ್ಬರೂ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

Published On - 1:14 pm, Tue, 9 March 21