ಆತ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ.. ಐಪಿಎಲ್ಗೆ ಬ್ರೇಕ್ ಬಿದ್ದಿದ್ರೂ ಆತನಿಗೆ ಮಾತ್ರ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿದೆ. ಕೊರೊನಾ ಅಪ್ಪಳಿಸದ ರಭಸಕ್ಕೆ ಐಪಿಎಲ್ಗೆ ಬ್ರೇಕ್ ಬಿದ್ದಿದೆ. ಐಪಿಎಲ್ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟಿಗರನ್ನ ಹೊರತು ಪಡಿಸಿದ್ರೆ, ಬೇರೆಲ್ಲಾ ವಿದೇಶಿ ಕ್ರಿಕೆಟಿಗರು ತವರಿಗೆ ವಾಪಸ್ ಆಗಿದ್ದಾರೆ. ಐಪಿಎಲ್ ಮೂಂದೂಡಿಕೆಯಾಗಿದ್ದು ಅದೆಷ್ಟು ಜನಕ್ಕೆ ಬೇಸರವಾಯ್ತೋ.. ಆದ್ರೆ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ಗೆ ಮಾತ್ರ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿದೆ.
ಇಂಗ್ಲೆಂಡ್ ಕ್ರಿಕೆಟಿಗನಿಂದ ಬಹುದೊಡ್ಡ ಉಡುಗೊರೆ
ನಿಜ.. ರಾಜಸ್ಥಾನ್ ತಂಡದ ಜೈಸ್ವಾಲ್ ಈಗ ಫುಲ್ ಹ್ಯಾಪಿ ಮೂಡ್ನಲ್ಲಿದ್ದಾನೆ. ಯಾಕಂದ್ರೆ ಜೈಸ್ವಾಲ್ಗೆ ಇಂಗ್ಲೆಂಡ್ ಕ್ರಿಕೆಟಿಗನಿಂದ ಬಹುದೊಡ್ಡ ಉಡುಗೊರೆ ಸಿಕ್ಕಿದೆ. ಆ ಉಡುಗೊರೆ ಜೈಸ್ವಾಲ್ ಪಾಲಿನ ನಿದ್ದಯನ್ನೇ ಕದ್ದಿದೆ. ರಾಜಸ್ಥಾನ್ ತಂಡದಲ್ಲಿದ್ದ ಇಂಗ್ಲೆಂಡ್ನ ಜೋಸ್ ಬಟ್ಲರ್, ಈ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಸಿಡಿಸಿದ್ರು. ಕೇವಲ 64 ಬಾಲ್ಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸಹಿತ, ಬಟ್ಲರ್ 124 ರನ್ಗಳಿಸಿದ್ರು. ಬಟ್ಲರ್ ರನ್ ಸುನಾಮಿಗೆ ಹೈದರಾಬಾದ್ ರಾಜಸ್ಥಾನದೆದುರು ಸುಲಭವಾಗಿ ಶರಣಾಗಿತ್ತು.
ಹೈದರಾಬಾದ್ ವಿರುದ್ಧ ಶತಕ ಸಿಡಿಸಿದ ವಿಶೇಷ ಬ್ಯಾಟ್ ಅನ್ನೇ ಬಟ್ಲರ್, ಯಶಸ್ವಿ ಜೈಸ್ವಾಲ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಜೈಸ್ವಾಲ್ಗೆ ತಮ್ಮ ಸೆಂಚುರಿ ಬ್ಯಾಟ್ ಅನ್ನ ಉಡುಗೊರೆಯಾಗಿ ನಿಡಿರುವ ಫೋಟೋವನ್ನ ರಾಜಸ್ಥಾನ್ ಫ್ರಾಂಚೈಸಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ವಿಶೇಷವಾದ ಆರಂಭಿಕ ಜೊತೆಗಾರನಿಗೆ ವಿಶೇಷವಾದ ಉಡುಗೊರೆ ಎಂದು ಬಣ್ಣಿಸಿದೆ. ಇನ್ನು ಬಟ್ಲರ್ ಜೈಸ್ವಾಲ್ಗೆ ನೀಡಿದ ಬ್ಯಾಟ್ ಮೇಲೆ, ಯಶ್ ನಿಮ್ಮ ಪ್ರತಿಭೆಯನ್ನ ಆನಂದಿಸಿ.. ಶುಭಾಶಯಗಳು ಎಂದು ಬರೆದಿದ್ದಾರೆ.
A special gift from a special opening partner. ?#HallaBol | #RoyalsFamily | @yashasvi_j | @josbuttler pic.twitter.com/VE3QIE0kct
— Rajasthan Royals (@rajasthanroyals) May 4, 2021
ಏಷ್ಯಾಕಪ್ನಲ್ಲಿ ಸಚಿನ್ ಬ್ಯಾಟ್ನಿಂದ ಶತಕ ಸಿಡಿಸಿದ್ದ ಯಶಸ್ವಿ!
ಇನ್ನು ಯಶಸ್ವಿ ಜೈಸ್ವಾಲ್ಗೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಏಷ್ಯಾಕಪ್ನಲ್ಲಿ ಆಡಿದ ಬ್ಯಾಟ್ ಅನ್ನ ಉಡುಗೊರೆಯಾಗಿ ನೀಡಿದ್ರು. ಸಚಿನ್ ನೀಡಿದ ಬ್ಯಾಟ್ನಿಂದಲೇ ಜೈಸ್ವಾಲ್, ಅಂಡರ್ ನೈಂಟೀನ್ ಏಷ್ಯಾಕಪ್ನಲ್ಲಿ ರನ್ ಮಳೆ ಹರಿಸಿದ್ದ. ಅಷ್ಟೇ ಅಲ್ಲ.. ಸಚಿನ್ ಬ್ಯಾಟ್ನಿಂದಲೇ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ.
ಕಡು ಬಡತನ ಮತ್ತು ಕಷ್ಟದ ಹಾದಿಯಲ್ಲೇ ಸಾಗಿ ಬಂದ ಜೈಸ್ವಾಲ್, ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ಪರ ಮಿಂಚುತ್ತಿದ್ದ. ಅಷ್ಟರಲ್ಲೇ ಐಪಿಎಲ್ಗೆ ತೆರೆ ಬಿದ್ದಿದೆ. ಆದ್ರೆ ಸಚಿನ್ರಂತೆ ಬಟ್ಲರ್ ಕೂಡ ಜೈಸ್ವಾಲ್ ಪ್ರತಿಭೆಗೆ ಫಿದಾ ಆಗಿ ಬ್ಯಾಟ್ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ನಿಜಕ್ಕೂ ಬಟ್ಲರ್ ಜೈಸ್ವಾಲ್ ಮೇಲೆ ತೋರಿಸಿದ ಪ್ರೀತಿ ಮೆಚ್ಚುವಂತಹದ್ದು.
ಇದನ್ನೂ ಓದಿ:IPL 2021: ಐಪಿಎಲ್ ಸರಣಿ ಪೂರ್ಣಗೊಳಿಸಲು ಬಿಸಿಸಿಐ ಮುಂದಿದೆ ಈ ಮೂರು ಆಯ್ಕೆಗಳು; ವಿವರಗಳನ್ನು ನೋಡಿ
Published On - 5:13 pm, Thu, 6 May 21