Virat Kohli: ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ? ವಿಶ್ಲೇಷಣೆ

|

Updated on: May 25, 2021 | 4:31 PM

ಕ್ಯಾಪ್ಟನ್​ ಕೊಹ್ಲಿ ಸೆಂಚುರಿ ಬಾರಿಸಿದಾಗ 70 ಮ್ಯಾಚ್​ಗಳ ಪೈಕಿ 48 ಪಂದ್ಯಗಳನ್ನು ಭಾರತ ಗೆದ್ದಿದೆ. ಕೇವಲ14 ಬಾರಿ ಸೋತಿದೆ. ಇದು ಒಬ್ಬ ಆಟಗಾರನ ಸಫಲತೆಯನ್ನು ಎತ್ತಿತೋರಿಸುತ್ತದೆ. 2019ರಲ್ಲಿ ಈಡನ್​ ಗಾರ್ಡನ್​ ಮೈದಾನದಲ್ಲಿ ಪಕ್ಕದ ಬಾಂಗ್ಲಾ ವಿರುದ್ಧ 136 ರನ್​​ ಬಾರಿಸಿದ್ದೇ ಕೊನೆಯ ಸರ್ವಾಧಿಕ ಸ್ಕೋರ್. ಅದಾದ ನಂತರ ಟ್ರಿಬಲ್​ ಸೆಂಚುರಿ ಬಾರಿಸಿಲ್ಲ ಕೊಹ್ಲಿ. ಆದರೆ ಯಾವುದೇ ಪಂದ್ಯದಲ್ಲಿ ಎಂಬಂತೆ ಯಾವುದೇ ಕ್ಷಣ ರನ್​ ಮಷೀನ್ ವಿರಾಟ್​ ಕೊಹ್ಲಿ ಮತ್ತೆ ಮಿಂಚಬಹುದು.

Virat Kohli: ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ? ವಿಶ್ಲೇಷಣೆ
ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ?
Follow us on

ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಇನ್ನೂ 30 ಶತಕ ಬಾರಿಸಲೇಬೇಕು… ಮತ್ತು ಕಿಂಗ್​ ಕೊಹ್ಲಿಯ ಈಗಿನ ದೈಹಿಕ ಸಾಮರ್ಥ್ಯ ಗಮನಿಸಿದರೆ ಅದನ್ನು ಅವರು ಸಾಧಿಸಬಲ್ಲರು. ಏಕೆಂದರೆ ಅವರ ಎದುರಿಗೆ ಹಿಮಾಲಯದಷ್ಟು ಎತ್ತರದ ಗುರಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅದುವೇ ಕ್ರಿಕೆಟ್​ ಜಗತ್ತಿನ ಮತ್ತೊಬ್ಬ ಶತಕವೀರ ಭಾರತದ ಸಚಿನ್​ ತೆಂಡೂಲ್ಕರ್​ ಅವರ ಶತಕಗಳ ಸರಮಾಲೆ ಸಾಧನೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಜಗತ್ತಿನಲ್ಲಿ ತ್ರಿಬಲ್ ಡಿಜಿಟ್​ ಸ್ಕೋರ್​ ಮಾಡುವ ಹಪಾಹಪಿ ಬಲಾಢ್ಯ ಬ್ಯಾಟ್ಸ್​​ಮನ್​​ ಕೊಹ್ಲಿಯಲ್ಲಿ ಹೇರಳವಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​​, ಕಿಂಗ್ ಕೊಹ್ಲಿ ಬಗ್ಗೆ ಹೇಳಿದ್ದ ಮಾತನ್ನು ಉಲ್ಲೇಖಿಸುವುದಾದರೆ ‘ನಾವು ಆಸ್ಟ್ರೇಲಿಯನ್ನರು ಕಿಂಗ್​ ಕೊಹ್ಲಿಯನ್ನು ಔಟ್​ ಮಾಡುವುದಿಲ್ಲ. ಅಂದರೆ ನೂರು ಶತಕಗಳ ಗಡಿಯಲ್ಲಿರುವ ಕೊಹ್ಲಿಯನ್ನು ಅವರ ಪಾಡಿಗೆ ಅವರನ್ನು ಬ್ಯಾಟ್​ ಮಾಡುವುದಕ್ಕೆ ಬಿಡುತ್ತೇವೆ. ಅಂದ್ರೆ ಆತ ಶತಕಗಳ ಗಡಿ ತಲುಪಲಿ’ ಎಂಬುದು ನಮ್ಮಿಚ್ಚೆ ಎಂದಿದ್ದರು. ಆದರೆ ಕಿಂಗ್​ ಕೊಹ್ಲಿ 2019ರ ನವೆಂಬರ್​ನಿಂದೀಚೆಗೆ ಒಂದೂ ಸೆಂಚುರಿ ಬಾರಿಸಿಲ್ಲ. ಆದರೂ ಶತಕ ಬಾರಿಸುವುದರಲ್ಲಿ ಕಿಂಗ್​ ಕೊಹ್ಲಿಗೆ ನಾವು ಯಾರೂ ಸಾಟಿಯಿಲ್ಲ ಎಂಬುದು ಡೇವಿಡ್​ ವಾರ್ನರ್ ಇಂಗಿತ.

ಸರಿ ಹಾಗಾದ್ರೆ ಕಿಂಗ್​ ಕೊಹ್ಲಿಯ ಕೆಲ ಅದ್ಭುತ ಶತಕದಾಟಗಳನ್ನು ವಿಶ್ಲೇಷಿಸುವುದಾದರೆ… 2008 ರಿಂದ 2021ರವರೆಗೆ ಈ 13 ವರ್ಷಗಳಲ್ಲಿ ಕಿಂಗ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕಗಳನ್ನು ದಾಖಲಿಸಿದ್ದಾರೆ. ಸದ್ಯಕ್ಕೆ ಅವರಿಗಿಂತ ಮೇಲಿರುವವರು 71 ಶತಕಗಳನ್ನು ಬಾರಿಸಿರುವ ಅದೇ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್. ಇವರಿಬ್ಬರಿಗಿಂತ ಸುಸ್ಥಿತಿಯಲ್ಲಿ ಮೇಲೆ ವಿರಾಜಮಾನವಾಗಿರುವವರು ಲಿಟ್ಲ್​ ಮಾಸ್ಟರ್​ ಸಚಿನ್​ ತೆಂಡೂಲ್ಕರ್. ಇದಕ್ಕೂ ಮುನ್ನ ಕಿಂಗ್​ ಕೊಹ್ಲಿ ಇಬ್ಬರನ್ನು ದಾಟಿಕೊಂಡು ಈ ಹಂತಕ್ಕೆ ಬಂದಿದ್ದಾರೆ. 63 ಶತಕಗಳೊಂದಿಗೆ ನಾಲ್ಕನೆಯ ಸ್ಥಾನದಲ್ಲಿರುವ ಕುಮಾರ ಸಂಗಕ್ಕಾರ್ ಮತ್ತು 62 ಸೆಂಚುರಿಗಳೊಂದಿಗೆ 5ನೆಯ ಸ್ಥಾನದಲ್ಲಿರುವ ಜಾಕ್​ ಕಲ್ಲೀಸ್​.

ಹೀಗೆ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ ಸ್ತರದಲ್ಲಿ ಸುಮಾರು 30 ಸೆಂಚುರಿಗಳನ್ನು ಬಾರಿಸಿರುವ 43 ಬ್ಯಾಟ್ಸ್​​ಮನ್​ಗಳು ಹೇಗೆಲ್ಲಾ ತಮ್ಮ ಸೆಂಚುರಿಗಳನ್ನು ಬಾರಿಸಿದರು ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಅವರೆಲ್ಲ ಇಷ್ಟಾನುಸಾರ ಆವಾಗಾವಾಗ ಸೆಂಚುರಿಗಳನ್ನು ಬಾರಿಸಿದವರೇ. ಆದ್ರೆ ಕಿಂಗ್​ ಕೊಹ್ಲಿ ಪ್ರತಿ 7 ಇನ್ನಿಂಗ್ಸ್​​ಗಳಿಗೆ ಒಮ್ಮೆ ಒಂದೊಂದು ಸೆಂಚುರಿ ಬಾರಿಸಿದ್ದಾರೆ. ಅಂದ್ರೆ ಶತಕ ಬಾರಿಸುವ ತಮ್ಮ ಹಸಿವನ್ನು ಹಾಗೆಯೇ ಜಾರಿಯಲ್ಲಿಟ್ಟಿದ್ದಾರೆ. ಸ್ಟೀವ್ ಸ್ಮಿತ್ 7.61 ಇನ್ನಿಂಗ್ಸ್​​ಗಳಿಗೆ ಒಮ್ಮೆ ಸೆಂಚುರಿ ಬಾರಿಸಿದ್ದರೆ ಸಚಿನ್​ ತೆಂಡೂಲ್ಕರ್ 7.82 ಇನ್ನಿಂಗ್ಸ್​​ಗಳಿಗೆ ಒಮ್ಮೆ ಸೆಂಚುರಿ ಬಾರಿಸಿದ್ದಾರೆ. ಇನ್ನು ರಿಕಿ ಪಾಂಟಿಂಗ್ 9.41 ಇನ್ನಿಂಗ್ಸ್​​ಗೆ ಒಮ್ಮೆ ಸೆಂಚುರಿ ಬಾರಿಸಿದ್ದಾರೆ. ಲಾರಾ, ರಿಚರ್ಡ್ಸ್​, ಜೋ ರೂಟ್​ ಅವರೆಲ್ಲ ಬಹುತೇಕ 10 ಇನ್ನಿಂಗ್ಸ್​​ಗಳಿಗೆ ಒಮ್ಮೆ ಸೆಂಚುರಿ ಬಾರಿಸಿದ್ದಾರೆ!

ಕ್ಯಾಪ್ಟನ್​ ಕೊಹ್ಲಿ ಸೆಂಚುರಿ ಬಾರಿಸಿದ್ದಾಗ 70 ಮ್ಯಾಚ್​ಗಳ ಪೈಕಿ 48 ಪಂದ್ಯಗಳನ್ನು ಭಾರತ ಗೆದ್ದಿದೆ. ಕೇವಲ 14 ಬಾರಿ ಸೋತಿದೆ.

ಅದ್ಸರಿ ODI ಕ್ರಿಕೆಟ್​ನಲ್ಲಿ ಕಿಂಗ್​ ಕೊಹ್ಲಿ ಶತಕಗಳ ಸಾಧನೆ ಹೇಗಿದೆ ಎಂದು ನೋಡುವುದಾದರೆ ಮೇಲೆ ಹೇಳಿದಂತೆ ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಶತಕಗಳನ್ನು ಬಾರಿಸುತ್ತಾ ಹೋಗಿದ್ದರೆ ಏಕ ದಿನ ಪಂದ್ಯಗಳಲ್ಲಿ ಕಿಂಗ್​ ಕೊಹ್ಲಿಗೆ ಸರಿಸಾಟಿಯೇ ಯಾರೂ ಇಲ್ಲ. ಕೇವಲ 245 ಇನ್ನಿಂಗ್ಸ್​​ಗಳಲ್ಲಿ ಭಾರತ ಕ್ರಿಕೆಟ್​ ತಂದ ಕ್ಯಾಪ್ಟನ್​ ಕೊಹ್ಲಿ 43 ಶತಕಗಳನ್ನು ಸಿಡಿಸಿದ್ದಾರೆ. 5.6 ಇನ್ನಿಂಗ್ಸ್​​ಗಳಿಗೆ ಒಮ್ಮೆ ಸೆಂಚುರಿ ಸಿಡಿಸಿದ್ದಾರೆ. ತೆಂಡೂಲ್ಕರ್ ಪ್ರತಿ 10 ಇನ್ನಿಂಗ್ಸ್​​ಗೆ ಒಮ್ಮೆ ಸೆಂಚುರಿ ಹೊಡೆದಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದ್ರೆ ತೆಂಡೂಲ್ಕರ್​ಗಿಂತ 207 ಇನ್ನಿಂಗ್ಸ್​​ಗಳನ್ನು ಕಡಿಮೆ ಆಡಿರುವ ವಿರಾಟ್​ ಕೊಹ್ಲಿ, ತೆಂಡೂಲ್ಕರ್​​ಗಿಂತ ಜಸ್ಟ್​ 6 ಶತಕಗಳನ್ನು ಕಡಿಮೆ ಬಾರಿಸಿದ್ದಾರೆ ಅಷ್ಟೇ. ಹಾಗಾದ್ರೆ ಈ ವೇಗದಲ್ಲಿ ಸಾಗಿರುವ ವಿರಾಟ್​ ಕೊಹ್ಲಿ, ಮುಂದೆ ಶತಕಗಳ ಶತಕ ಪೂರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನಿಸುತ್ತದೆ.

ರನ್​ ಮಷೀನ್ ವಿರಾಟ್​ ಕೊಹ್ಲಿ, 115 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಅಂದರೆ 2.6 ಬಾರಿ ಅವರು ಅರ್ಧ ಶತಕ ಬಾರಿಸಿದ ಮೇಲೆ ಮುಂದಿನದು ಶತಕದತ್ತಲೇ ಓಟ ಎಂಬಂತಾಗಿದೆ. ಆದರೆ ಇಲ್ಲಿ ಸ್ಟೀವ್​ ಸ್ಮಿತ್ ಒಬ್ಬರು ಮಾತ್ರವೇ ವಿರಾಟ್​ ಕೊಹ್ಲಿಗಿಂತ ತುಸು ಮುಂದಿರುವುದು… ಆತ 2.58 ಬಾರಿ ಅರ್ಧ ಶತಕ ಬಾರಿಸಿದ ಮೇಲೆ ಮುಂದಿನದು ಶತಕ ಗ್ಯಾರಂಟಿ ಎಂಬಂತೆ ಆಡಿದವರು.

ತೆಂಡೂಲ್ಕರ್​ ಒಟ್ಟಾರೆಯಾಗಿ 482 ಅಂತಾರಾಷ್ಟ್ರೀಯ ಇನ್ನಿಂಗ್ಸ್​​ಗಳನ್ನಾಡಿ 49 ರನ್​ ಸರಾಸರಿಯಲ್ಲಿ 66 ಸೆಂಚುರಿಗಳೊಂದಿಗೆ 21,331 ರನ್​ ಕ್ರೋಢೀಕರಿಸಿದ್ದಾರೆ. ಕೊಹ್ಲಿ ಸಹ ಇಷ್ಟೇ ಸಂಖ್ಯೆಯ ಇನ್ನಿಂಗ್ಸ್​​ಗಳನ್ನಾಡಿದ್ದಾರೆ. ಇದರರ್ಥ ವಿರಾಟ್​ ಕೊಹ್ಲಿ ಅದಾಗಲೇ ನಾಲ್ಕು ಚೆಂಚುರಿಗಳನ್ನು ಹೆಚ್ಚಾಗಿ ಬಾರಿಸಿದ್ದಾರೆ! 482 ಅಂತಾರಾಷ್ಟ್ರೀಯ ಇನ್ನಿಂಗ್ಸ್​​ಗಳಲ್ಲಿ 22818 ರನ್ ಗಳಿಸಿರುವ ಕೊಹ್ಲಿ 70 ಶತಕಗಳನ್ನು ಬಾರಿಸಿದ್ದಾರೆ.

ರನ್​ ಮಷೀನ್ ವಿರಾಟ್​ ಕೊಹ್ಲಿ ತಮ್ಮ ವೃತ್ತಿ ಜೀವನದ ಪೀಕ್​ನಲ್ಲಿ ಅಂದ್ರೆ 2017 ಮತ್ತು 2018ರ ಕ್ಯಾಲೆಂಡರ್​ ವರ್ಷದಲ್ಲಿ ತಲಾ 11 ಶತಕಗಳನ್ನು ಬಾರಿಸಿದ್ದರು. ಆದರೆ 1998ರಲ್ಲಿ ತೆಂಡೂಲ್ಕರ್​ 12 ಶತಕಗಳನ್ನು ಸಿಡಿಸಿದ್ದು ಇನ್ನೂ ದಾಖಲೆಯಾಗಿಯೇ ಇದೆ. ರಿಕಿ ಪಾಂಟಿಂಗ್ ಒಮ್ಮೆ ಮಾತ್ರ ಅಂದ್ರೆ 2003ರಲ್ಲಿ 11 ಶತಕಗಳನ್ನು ಬಾರಿಸಿದ್ದರು.

ಕ್ಯಾಪ್ಟನ್​ ಕೊಹ್ಲಿ ಸೆಂಚುರಿ ಬಾರಿಸಿದ್ದಾಗ 70 ಮ್ಯಾಚ್​ಗಳ ಪೈಕಿ 48 ಪಂದ್ಯಗಳನ್ನು ಭಾರತ ಗೆದ್ದಿದೆ. ಕೇವಲ 14 ಬಾರಿ ಸೋತಿದೆ. ಇದು ಒಬ್ಬ ಆಟಗಾರನ ಸಫಲತೆಯನ್ನು ಎತ್ತಿತೋರಿಸುತ್ತದೆ.

2019ರಲ್ಲಿ ಈಡನ್​ ಗಾರ್ಡನ್​ ಮೈದಾನದಲ್ಲಿ ಪಕ್ಕದ ಬಾಂಗ್ಲಾ ವಿರುದ್ಧ 136 ರನ್​​ ಬಾರಿಸಿದ್ದೇ ಕೊನೆಯ ಸರ್ವಾಧಿಕ ಸ್ಕೋರ್. ಅದಾದ ನಂತರ ಟ್ರಿಬಲ್​ ಸೆಂಚುರಿ ಬಾರಿಸಿಲ್ಲ ಕೊಹ್ಲಿ. ಆದರೆ ಯಾವುದೇ ಪಂದ್ಯದಲ್ಲಿ ಎಂಬಂತೆ ಯಾವುದೇ ಕ್ಷಣ ರನ್​ ಮಷೀನ್ ವಿರಾಟ್​ ಕೊಹ್ಲಿ ಮತ್ತೆ ಮಿಂಚಬಹುದು.

(King Virat Kohli will surpass Sachin Tendulkar 100 centuries shortly and may score 30 centuries more analysis)