KKR vs RCB: ಕೆಕೆಆರ್​ ಆಟಗಾರರಿಗೆ ಕೊರೊನಾ, ಇಂದಿನ ಪಂದ್ಯ ರದ್ದು! ಬಯೋ ಬಬಲ್​ನಲ್ಲಿದ್ದರೂ ಕೊರೊನಾ ತಗುಲಿದ್ದು ಹೇಗೆ?

|

Updated on: May 03, 2021 | 3:00 PM

KKR vs RCB Reschedule: ಕೆಕೆಆರ್​ ತಂಡದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗದ ಬೌಲರ್ ಸಂದೀಪ್ ವಾರಿಯರ್ ಅವರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ.

KKR vs RCB: ಕೆಕೆಆರ್​ ಆಟಗಾರರಿಗೆ ಕೊರೊನಾ, ಇಂದಿನ ಪಂದ್ಯ ರದ್ದು! ಬಯೋ ಬಬಲ್​ನಲ್ಲಿದ್ದರೂ ಕೊರೊನಾ ತಗುಲಿದ್ದು ಹೇಗೆ?
ವರುಣ್ ಚಕ್ರವರ್ತಿ ( ಎಡದಿಂದ ಎರಡನೇಯವರು), ಸಂದೀಪ್ ವಾರಿಯರ್ (ಬಲದಿಂದ ಎರಡನೇಯವರು)
Follow us on

ಇಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2021 ಪಂದ್ಯವನ್ನು ಮುಂದೂಡಲಾಗಿದೆ. ಇಬ್ಬರು ಕೆಕೆಆರ್ ಆಟಗಾರರು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಕ್ರಿಕೆಟ್ ಮಂಡಳಿ (ಬಿಸಿಸಿಐ) ದೃಢಪಡಿಸಿದೆ. ಮೇ 30 ಕ್ಕೆ ಕೊನೆಗೊಳ್ಳುವ ಪಂದ್ಯಾವಳಿಯಲ್ಲಿ ಪಂದ್ಯ ಮತ್ತೊಂದು ದಿನ ನಡೆಯಲಿದೆ. ಕೆಕೆಆರ್​ ತಂಡದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗದ ಬೌಲರ್ ಸಂದೀಪ್ ವಾರಿಯರ್ ಅವರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಇಬ್ಬರು ಆಟಗಾರರು ಕೊರೊನಾ ಪಾಸಿಟಿವ್​ ಆದ ಕಾರಣ, ಉಳಿದ ಆಟಗಾರರು ತೊಂದರೆಗೀಡಾಗಬಹುದು ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಪಂದ್ಯಾವಳಿಯಲ್ಲಿ ಬಯೋ ಬಬಲ್ ನಿರ್ವಹಣೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ವರುಣ್ ಚಕ್ರವರ್ತಿ ಭುಜದ ಗಾಯವೇ ಕಾರಣವಾಯ್ತ?
ಈ ಹಿಂದೆ ತಂಡಗಳು ಮತ್ತು ಆಟಗಾರರಿಗೆ ಬಿಸಿಸಿಐ ಪತ್ರ ಬರೆದಿತ್ತು. ಐಪಿಎಲ್ ಬಯೋ ಬಬಲ್ ಸುರಕ್ಷಿತವಾಗಿದೆ ಎಂದು ಆಗ ಹೇಳಲಾಯಿತು. ಪ್ರತಿ ಎರಡು ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆಯನ್ನು ನಡೆಸಲು ಮಂಡಳಿಯು ಮಾಹಿತಿ ನೀಡಿತ್ತು. ಅಲ್ಲದೆ, ಹೊರಗಿನಿಂದ ಆಹಾರವನ್ನು ಖರೀದಿಸಲು ನಿಷೇಧ ಹೇರಲಾಯಿತು. ಅಂತಹ ಪರಿಸ್ಥಿತಿಯಲ್ಲಿ, ಕೆಕೆಆರ್ ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬುದು ಕಳವಳಕಾರಿ ವಿಷಯವಾಗಿದೆ. ಇದು ನಿರ್ಲಕ್ಷ್ಯವನ್ನೂ ತೋರಿಸುತ್ತದೆ. ಭುಜದ ಗಾಯದಿಂದಾಗಿ ವರುಣ್ ಚಕ್ರವರ್ತಿಯನ್ನು ಸ್ಕ್ಯಾನ್‌ಗಾಗಿ ಬಯೋ ಬಬಲ್‌ನಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ, ಚಕ್ರವರ್ತಿಗೆ ಕೊರೊನಾ ತಗುಲಿರಬಹುದು ಎಂದು ಹೇಳಲಾಗಿದೆ. ಜೊತೆಗೆ ಸಂದೀಪ್ ವಾರಿಯರ್ ಕೂಡ ವರುಣ್​ ಅವರಿಂದ ಕೊರೊನಾ ಸೋಂಕಿಗೆ ಒಳಗಾಗಿರಬಹುದು ಎಂದು ಊಹಿಸಲಾಗಿದೆ.

ಸಂದೀಪ್ ವಾರಿಯರ್ ಐಪಿಎಲ್ 2021 ರಲ್ಲಿ ಇನ್ನೂ ಯಾವುದೇ ಪಂದ್ಯಗಳನ್ನು ಆಡಿಲ್ಲ. ಚಕ್ರವರ್ತಿ ಎಲ್ಲಾ ಕೆಕೆಆರ್ ಪಂದ್ಯಗಳಲ್ಲಿ ಒಂದು ಭಾಗವಾಗಿದ್ದಾರೆ. ಅವರು ಇಲ್ಲಿಯವರೆಗೆ ಏಳು ವಿಕೆಟ್ ಪಡೆದಿದ್ದಾರೆ ಮತ್ತು ಕೆಕೆಆರ್ ತಂಡದ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದಾರೆ.

ಎರಡನೇ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ
ಇಬ್ಬರು ಕೆಕೆಆರ್ ಸದಸ್ಯರು ಕೊರೊನಾ ಪಾಸಿಟಿವ್​ ಆಗಿದ್ದಾರೆ ಎಂದು ಬಿಸಿಸಿಐ ಮೂಲವು ತಿಳಿಸಿದೆ. ಆದರೆ ಅವರ ಎರಡನೇ ಪರೀಕ್ಷೆಯ ವರದಿಯು ಇನ್ನೂ ಬಂದಿಲ್ಲ. ಹೀಗಾಗಿ ಆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದೆ. ಇದರಿಂದ ಅವರ ಎರಡನೇ ವರದಿ ಕೊರೊನಾ ನೆಗೆಟಿವ್​ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದಿದೆ. ದೆಹಲಿ ತಂಡದ ಎನ್ರಿಕ್ ನಾರ್ಕಿಯಾ ಅವರು ದಕ್ಷಿಣ ಆಫ್ರಿಕಾದಿಂದ ಬಂದ ನಂತರ ಕೊರೊನಾ ಪಾಸಿಟಿವ್​ ಎಂದು ಕಂಡುಬಂದರು. ಆದರೆ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರ ವರದಿ ನೆಗೆಟಿವ್ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವರ ಮೊದಲ ವರದಿಯ ಫಲಿತಾಂಶವು ತಪ್ಪಾಗಿದೆ ಎಂದು ತಿಳಿದುಬಂದಿದೆ.

ಸಮಾಧಾನಕಾರ ವಿಷಯವೆನೆಂದರೆ, ಚಕ್ರವರ್ತಿ ಮತ್ತು ವಾರಿಯರ್ ಹೊರತುಪಡಿಸಿ, ಕೆಕೆಆರ್‌ನ ಇತರ ಎಲ್ಲ ಆಟಗಾರರ ಪರೀಕ್ಷೆಯು ನಕಾರಾತ್ಮಕವಾಗಿದೆ. ಆದರೆ ಈ ಇಬ್ಬರು ಆಟಗಾರರ ಎರಡನೇ ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ಇಂದು ಸಂಜೆಯವರೆಗೆ ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯ ಆಡಿಸುವುದು ಸರಿ ಅಲ್ಲ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Published On - 2:55 pm, Mon, 3 May 21