ಕ್ರಿಕೆಟ್ ಜಗತ್ತಿನ ಮಿಸ್ಟರ್ 360 ಅಂದ್ರೆ ನೆನಪಾಗೋದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎ ಬಿ ಡಿವಿಲಿಯರ್ಸ್. ಎಬಿಡಿ ಬ್ಯಾಟಿಂಗ್ ಸ್ಟೈಲೇ ಒಂದು ವಿಶೇಷ. ಅಷ್ಟದಿಕ್ಕೂಗಳಿಗೂ ಬೌಲ್ಗಳನ್ನ ಪರಿಚಯಿಸುವ ಏಕೈಕ ಪರಾಕ್ರಮಿ ಡಿವಿಲಿಯರ್ಸ್.
ಮಿಸ್ಟರ್ 360 ಡಿವಿಲಿಯರ್ಸ್ರಂತೆ ಮೈದಾನದಲ್ಲಿ ಅಬ್ಬರಿಸುವ ಹುಲಿಯೊಂದು ಟೀಮ್ ಇಂಡಿಯಾದಲ್ಲಿದೆ. ಅದು ನಮ್ಮ ಕನ್ನಡಿಗ ಅನ್ನೋದೇ ನಾವೆಲ್ಲರು ಹೆಮ್ಮೆಪಡುವಂತಹ ವಿಚಾರ. ಅಂದ್ಹಾಗೆ, ಈ ಕನ್ನಡ ಕಂಠೀರವ ಬೇರ್ಯಾರು ಅಲ್ಲ. ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್.ರಾಹುಲ್.
ಭಾರತದ ಮಿಸ್ಟರ್ 360 ಕನ್ನಡಿಗ ಕೆ.ಎಲ್.ರಾಹುಲ್:
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪಂದ್ಯವನ್ನ ಸೋತಿರಬಹುದು. ಆದ್ರೆ ನಮ್ಮ ರಾಹುಲ್ ತಮ್ಮ ಪ್ರದರ್ಶನದಲ್ಲಿ ಸೋತಿಲ್ಲ. ರನ್ಗಳಿಸುವ ವಿಚಾರದಲ್ಲಿ ಕಿಂಚಿತ್ತೂ ರಾಜೀಯಾಗಿಲ್ಲ. 5ನೇ ಸ್ಲಾಟ್ನಲ್ಲಿ ಕಣಕ್ಕಿಳಿದ್ರೂ ತಾವೊಬ್ಬ ಅತ್ಯದ್ಭುತ ಬ್ಯಾಟ್ಸ್ಮನ್ ಅನ್ನೋದನ್ನ ರಾಹುಲ್ ಮತ್ತೊಮ್ಮೆ ಸಾಬೀತು ಮಾಡಿದ್ರು.
ಕನ್ನಡ ಕಂಠೀರವ ರಾಹುಲ್ಗೆ ಈಗ ಮಿಸ್ಟರ್ 360 ಅನ್ನೋ ಪಟ್ಟ ತಂದುಕೊಟ್ಟಿದ್ದೇ ನ್ಯೂಜಿಲೆಂಡ್ ಸರಣಿ. ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಸಿಕ್ಸರ್ಗಳ ಸುರಿಮಳೆ ಸುರಿಸಿದ್ರು. ಅದ್ರಲ್ಲೂ ಇನ್ನಿಂಗ್ಸ್ ಮುಗಿತಿರೋ ವೇಳೆ ಬ್ಯಾಟಿಂಗ್ನಲ್ಲಿ ಅಬ್ಬರಿಸೋಕೆ ನಿಂತ ಕನ್ನಡದ ಕಲಿ ರಾಹುಲ್ ಸಿಡಿಸಿದ ಸೂಪರ್ ಸಿಕ್ಸ್ ಎಬಿಡಿಯನ್ನ ನೆನಪಿಸೋ ಹಾಗೇ ಮಾಡ್ತು.
ಜೇಮ್ಸ್ ನಿಶಾಮ್ ಎಸೆದ 48ನೇ ಓವರ್ನ 5ನೇ ಬಾಲ್ ಅನ್ನ ರಾಹುಲ್ ಥರ್ಡ್ ಮ್ಯಾನ್ನತ್ತ ಭರ್ಜರಿ ಸಿಕ್ಸರ್ಗಟ್ಟಿದ್ರು. ಕೇವಲ ಇದೊಂದು ಸಿಕ್ಸರ್ ಸಿಡಿಸಿದ ಮಾತ್ರಕ್ಕೆ ರಾಹುಲ್ಗೆ ಮಿಸ್ಟರ್ 360 ಪಟ್ಟ ಬಂದಿದ್ದಲ್ಲ. ರಾಹುಲ್ ನಿನ್ನೆ ಪಂದ್ಯದಲ್ಲಿ ಸಿಡಿಸಿದ ಒಂದೊಂದು ಬೌಂಡ್ರಿ ಜೊತೆಗೆ ಒಂದೊಂದು ಸಿಕ್ಸರ್ಗಳು ಸಹ ಮತ್ತೆ ಮೈದಾನದಲ್ಲಿ ಡಿವಿಲಿಯರ್ಸ್ ಅನ್ನ ನೆನಪಿಸಿತ್ತು.
ರಾಹುಲ್ ಮಿ.360 ಅವತಾರ:
ಹ್ಯಾಮಿಲ್ಟನ್ ಮೈದಾನದಲ್ಲಿ ನಮ್ಮ ರಾಹುಲ್ 5ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದು ಬ್ಯಾಟಿಂಗ್ ಮಾಡಿದ್ರು. ಎದುರಿಸದ 64 ಬಾಲ್ನಲ್ಲಿ 3 ಬೌಂಡ್ರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 88ರನ್ ಗಳಿಸಿದ್ರು.
ರಾಹುಲ್ಗೆ ಮಿಸ್ಟರ್ 360 ಪಟ್ಟ ನೀಡಿದ ಮಾಂಜ್ರೇಕರ್!
ರಾಹುಲ್ ಮಿಸ್ಟರ್ 360:
‘‘ 360 ಡಿಗ್ರಿ ಌಂಗಲ್ನಲ್ಲಿ ಕ್ಲಾಸಿಕ್ ಆಗಿ ಬ್ಯಾಟಿಂಗ್ ಮಾಡೋದು ಕೆ.ಎಲ್.ರಾಹುಲ್ರಿಂದ ಮಾತ್ರ ಸಾಧ್ಯ.”
– ಸಂಜಯ್ ಮಂಜ್ರೇಕರ್, ಮಾಜಿ ಕ್ರಿಕೆಟಿಗ
ದ್ವಿಪಾತ್ರದಲ್ಲಿ ಮಿಂಚುವ ಕನ್ನಡಿಗನೇ ತಂಡದ ಹೈಲೆಟ್!
ಈಗ ಟೀಮ್ ಇಂಡಿಯಾದಲ್ಲಿ ಕೊಹ್ಲಿ ಮತ್ತು ರೋಹಿತ್ಗಿಂತ ರಾಹುಲ್ನದ್ದೇ ಸದ್ದು ಜಾಸ್ತಿಯಾಗಿದೆ. ಕನ್ನಡಿಗ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಮಿಂಚುತ್ತಿರುವ ರಾಹುಲ್ ಈಗ ತಂಡದ ಮೈನ್ ಅಟ್ರಾಕ್ಷನ್ ಪ್ಲೇಯರ್ ಅಂದ್ರೆ ತಪ್ಪಾಗೋದಿಲ್ಲ. ಬ್ಯಾಟ್ ಹಿಡಿದು ಹೊಡಿಬಡಿ ಆಟವಾಡುವ ರಾಹುಲ್, ವಿಕೆಟ್ ಕೀಪಿಂಗ್ನಲ್ಲಿ ಸೂಪರ್ ಮ್ಯಾನ್ ಅವತಾರದಲ್ಲಿ ಮಿಂಚುತ್ತಾರೆ.
ಒಟ್ನಲ್ಲಿ. ಮಿಸ್ಟರ್ 360 ಕನ್ನಡಿಗ ರಾಹುಲ್, ಅಷ್ಟದಿಕ್ಕುಗಳಿಗೂ ಬೌಲ್ಗಳನ್ನ ಪರಿಚಯಿಸುವ ಭಾರತದ ಎಬಿಡಿಯಾಗಿ ಮಿಂಚುತ್ತಿದ್ದಾರೆ. ವಿಕೆಟ್ ಕೀಪಿಂಗ್ನಲ್ಲಿ ಚಮತ್ಕಾರ ತೋರುತ್ತಿರುವ ರಾಹುಲ್ ಸೂಪರ್ ಮ್ಯಾನ್ ಆಟಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡ್ತಿದ್ದಾರೆ.
Only K L Rahul can make 360 degrees batting look orthodox and classical.
— Sanjay Manjrekar (@sanjaymanjrekar) February 6, 2020
Published On - 10:39 am, Fri, 7 February 20