WTC Final: ಕೊಹ್ಲಿಯೇನೋ ಸಂತೋಷದಲ್ಲಿದ್ದಾರೆ ಅದರೆ ಸರಣಿ ಗೆದ್ದಿರುವ ವಿಲಿಯಮ್ಸನ್ ಆತ್ಮವಿಶ್ವಾಸದ ಮೂಟೆಯಾಗಿದ್ದಾರೆ!

|

Updated on: Jun 15, 2021 | 1:48 AM

ವಿಲಿಯಮ್ಸನ್ ಅವರ ನ್ಯೂಜಿಲೆಂಡ್​ ತಂಡ ಇಂಗ್ಲೆಂಡ್​ ವಿರುದ್ಧ ಎರಡು ಟೆಸ್ಟ್​ಗಳ ಸರಣಿ ಆಡಿದ್ದೂ ಅಲ್ಲದೆ ಕೊನೆಯ ಟೆಸ್ಟ್​ನಲ್ಲಿ 8 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿ ಭರ್ಜರಿ ತಯಾರಿಯೊಂದಿಗೆ ಭಾರತವನ್ನು ಎದುರಿಸಲಿದೆ.

WTC Final: ಕೊಹ್ಲಿಯೇನೋ ಸಂತೋಷದಲ್ಲಿದ್ದಾರೆ ಅದರೆ ಸರಣಿ ಗೆದ್ದಿರುವ ವಿಲಿಯಮ್ಸನ್ ಆತ್ಮವಿಶ್ವಾಸದ ಮೂಟೆಯಾಗಿದ್ದಾರೆ!
ಕೇನ್ ವಿಲಿಯಮ್ಸನ್ ಮತ್ತು ವಿರಾಟ್​ ಕೊಹ್ಲಿ
Follow us on

ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ವಿಶ್ವದ ಈಗಿನ ಅತ್ಯುತ್ತಮ ಬೌಲರ್​ಗಳ ಬೆವರಿಳಿಸರೋದು ಸತ್ಯ. ಅಷ್ಟ್ಯಾಕೆ, ಹಲವು ಖ್ಯಾತನಾಮರು ಕೊಹ್ಲಿಗೆ ಬೌಲ್ ಮಾಡುವುದಕ್ಕಿಂತ ಮಿಡ್​-ಆನ್ ಇಲ್ಲವೇ ಮಿಡ್​-ಆಫ್​ನಲ್ಲಿ ಫೀಲ್ಡ್ ಮಾಡುತ್ತಾ ಅವರ ಬ್ಯಾಟಿಂಗ್ ಮಾಡುವುದನ್ನು ನೋಡಲಿಚ್ಛಿಸುವುದಾಗಿ ಹೇಳಿದ್ದಾರೆ. ಆದರೆ ಕೊಹ್ಲಿ ತಮ್ಮ ಟೀಮಿನ ಬೌಲರ್​ಗಳ ವಿರುದ್ಧ ಆಡುವುದನ್ನು ನೀವು ನೋಡಿದ್ದೀರಾ? ಹೌದು ನೆಟ್ಸ್​ನಲ್ಲಿ ಅವರು ಬುಮ್ರಾ, ಶಮಿ, ಇಶಾಂತ್, ಸಿರಾಜ್ ಮೊದಲಾವರನ್ನು ಎದುರಿಸುತ್ತಾರಾದರೂ ಮ್ಯಾಚ್​ನಂಥ ಸ್ಥಿತಿಯಲ್ಲಿ ಅಲ್ಲ. ಆದರೆ, ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ಅದು ಸಾಧ್ಯವಾಗಿದೆ, ಟೀಮ್ ಇಂಡಿಯಾ ತನ್ನ ಸದಸ್ಯರದ್ದೇ ಎರಡು ಟೀಮಗಳನ್ನು ಮಾಡಿಕೊಂಡು ಈ ಮೈದಾನದಲ್ಲಿ ಮ್ಯಾಚ್​ಗಳನ್ನು ಆಡುತ್ತಿದ್ದು ಕೊಹ್ಲಿ ತಾನಿದನ್ನು ತುಂಬಾ ಆನಂದಿಸುತ್ತಿರುವುದಾಗಿ ಹೇಳಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಮೊದಲು ಟೀಮ್ ಇಂಡಿಯಾ ಸೌತಾಂಪ್ಟನಲ್ಲಿ ಜೋರಾಗಿ ಅಭ್ಯಾಸ ನಡೆಸುತ್ತಿರುವ ಸಮಯದಲ್ಲೇ ಕೊಹ್ಲಿ ಟೀಮಿನ ಪ್ರಮುಖ ವೇಗದ ಬೌಲರ್​ಗಳಾಗಿರುವ ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮ ಅವರೊಂದಿಗೆ ಸೆಲ್ಫೀಯೊಂದನ್ನು ಟ್ಯಾಗ್ ಮಾಡಿ ‘ಇವರಿಬ್ಬರು ಪ್ರತಿದಿನ ಬ್ಯಾಟ್ಸ್​ಮನ್​ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ,’ ಅಂತ ಟ್ವೀಟ್​ ಮಾಡಿದ್ದಾರೆ.

ಕೊಹ್ಲಿ ನಾಯಕತ್ವದ ಭಾರತ ಮತ್ತು ಕೇನ್ ವಿಲಿಯಮ್ಸನ್​ ನೇತೃತ್ವದ ನ್ಯೂಜಿಲೆಂಡ್​ ವಿರುದ್ಧ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪೈನಲ್ ಜೂನ್​ 18ರಿಂದ ಸೌತಾಂಪ್ಟನ್​ನ ಏಜಿಸ್ ಬೋಲ್ ಮೈದಾನದಲ್ಲಿ ನಡೆಯಲಿದೆ.

ಸೌತಾಂಪ್ಟ​ನಲ್ಲಿ ನಡೆಯುತ್ತಿರುವ ಅಭ್ಯಾಸದ ಪಂದ್ಯಗಳಲ್ಲಿ ವಿಕೆಟ್-ಕೀಪರ್ ಬ್ಯಾಟ್ಸಮನ್​ ರಿಷಭ್ ಪಂತ್, ಶುಭ್ಮನ್ ಗಿಲ್, ಕೆ ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಟೀಮ್​ ಮೂಲಗಳು ತಿಳಿಸಿವೆ,
ಹಾಗೆ ನೋಡಿದರೆ, ಅತ್ಯಂತ ಮಹತ್ವಪೂರ್ಣ ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಭಾರತ ಮ್ಯಾಚ್​ ಪ್ರ್ಯಾಕ್ಟೀಸ್ ಇಲ್ಲದೆ ಮೈದಾನಕ್ಕಿಳಿಯಲಿದೆ.

ಆದರೆ ಮತ್ತೊಂದೆಡೆ ವಿಲಿಯಮ್ಸನ್ ಅವರ ನ್ಯೂಜಿಲೆಂಡ್​ ತಂಡ ಇಂಗ್ಲೆಂಡ್​ ವಿರುದ್ಧ ಎರಡು ಟೆಸ್ಟ್​ಗಳ ಸರಣಿ ಆಡಿದ್ದೂ ಅಲ್ಲದೆ ಕೊನೆಯ ಟೆಸ್ಟ್​ನಲ್ಲಿ 8 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿ ಭರ್ಜರಿ ತಯಾರಿಯೊಂದಿಗೆ ಭಾರತವನ್ನು ಎದುರಿಸಲಿದೆ. ಈ ಟೆಸ್ಟ್​ ನಡೆದ ಸುಮಾರು ಒಂದೂವರೆ ತಿಂಗಳ ನಂತರ ಭಾರತ ಮತ್ತ್ತು ಇಂಗ್ಲೆಂಡ್​ 5-ಟೆಸ್ಟ್​ ಪಂದ್ಯಗಳ ಸರಣಿಯನ್ನಾಡಲಿವೆ.

ಟೆಸ್ಟ್​ ಚಾಂಪಿಯನ್​ಶಿಪ್ ಗೆಲ್ಲುವ ತಂಡ ಸುಮಾರು 12 ಕೋಟಿ ರೂಪಾಯಿಗಳನ್ನು ಬಹುಮಾನದ ರೂಪದಲ್ಲಿ ಪಡೆಯಲಿದೆ. ಈ ಕುರಿತತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು ಸೋಲುವ ತಂಡಕ್ಕೆ ಸುಮಾರು 6 ಕೋಟಿ ರೂಪಾಯಿ ಸಿಗಲಿದೆ ಅಂತ ಹೇಳಿದೆ. ಚಾಂಪಿಯನ್ ತಂಡಕ್ಕೆ ಹಣದ ಜೊತೆ ಐಸಿಸಿ ಟೆಸ್ಟ್ ಚಾಂಪಿಯನ್​ಸಿಪ್ ಗದೆ ಸಹ ಸಿಗಲಿದೆ.

‘ಒಂಭತ್ತು ತಂಡಗಳು ಭಾಗವಹಿಸಿದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅನ್ನು ಗೆಲ್ಲುವ ತಂಡ 1.6 ಮಿಲಿಯನ್ ಡಾಲರ್​ಗಳನ್ನು ಪಡೆದರೆ, ಸೋಲುವ ತಂಡ 8 ಲಕ್ಷ ಡಾಲರ್​ಗಳನ್ನು ಜೇಬಿಗಿಳಿಸಲಿದೆ. ಕ್ರಿಕೆಟ್​ನ ಸಾಂಪ್ರದಾಯಿಕ ಆವೃತ್ತಿಯಲ್ಲಿ ಚಾಂಪಿಯನ್ ತಂಡ ಹೊರಹೊಮ್ಮುವಂತಾಗಲು ಎರಡು ವರ್ಷಗಳ ಟೆಸ್ಟ್ ಕ್ರಿಕೆಟ್ ಸೈಕಲ್ ನಡೆಸಲಾಯಿತು,’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ: WTC Final: ಕೊಹ್ಲಿ ಹುಡುಗರ ನಡುವೆ ಅಭ್ಯಾಸ ಪಂದ್ಯ; ಶತಕ ಸಿಡಿಸಿದ ಪಂತ್, ಗಿಲ್ ಅರ್ಧ ಶತಕ.. ಬೌಲಿಂಗ್​ನಲ್ಲಿ ಮಿಂಚಿದ ಇಶಾಂತ್