AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ರೋಹಿತ್ ಜೊತೆಗೆ ಈತ ಬ್ಯಾಟಿಂಗ್ ಆರಂಭಿಸಲಿ; ತಂಡದಲ್ಲಿ ಅಶ್ವಿನ್ ಇರಲೇಬೇಕು: ವಿ.ವಿ.ಎಸ್. ಲಕ್ಷ್ಮಣ್

WTC Final: ರವಿಚಂದ್ರನ್ ಅಶ್ವಿನ್ ಅವರನ್ನು ತಂಡದ ಮೊದಲ ಸ್ಪಿನ್ನರ್ ಆಗಿ ಆಯ್ಕೆ ಮಾಡುಬೇಕೆಂದು ಲಕ್ಷ್ಮಣ್ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತದ ಯಶಸ್ಸಿಗೆ ಅಶ್ವಿನ್ ಒಂದು ಪ್ರಮುಖ ಕಾರಣ

WTC Final: ರೋಹಿತ್ ಜೊತೆಗೆ ಈತ ಬ್ಯಾಟಿಂಗ್ ಆರಂಭಿಸಲಿ; ತಂಡದಲ್ಲಿ ಅಶ್ವಿನ್ ಇರಲೇಬೇಕು: ವಿ.ವಿ.ಎಸ್. ಲಕ್ಷ್ಮಣ್
ವಿ.ವಿ.ಎಸ್. ಲಕ್ಷ್ಮಣ್
ಪೃಥ್ವಿಶಂಕರ
| Edited By: |

Updated on: Jun 15, 2021 | 9:33 AM

Share

ಭಾರತೀಯ ಕ್ರಿಕೆಟ್ ತಂಡವು ಜೂನ್ 18 ರಿಂದ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಬೇಕಾಗಿದೆ. ವಿಶ್ವಕಪ್ ಆಫ್ ಟೆಸ್ಟ್ ಕ್ರಿಕೆಟ್ ಎಂದು ಕರೆಯಲ್ಪಡುವ ಈ ಚಾಂಪಿಯನ್‌ಶಿಪ್ ಬಗ್ಗೆ ಚರ್ಚೆ ಬಿಸಿಯಾಗಿದೆ. ಭಾರತ ತನ್ನ ಸಿದ್ಧತೆಯನ್ನು ಪ್ರಾರಂಭಿಸಿದೆ. ತಂಡವು ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು ಆಡಿ ತನ್ನ ಸಿದ್ಧತೆಗಳನ್ನು ಬಲಪಡಿಸಿದೆ. ಕೊನೆಯ -11 ರ ಆಯ್ಕೆ ವಿರಾಟ್ ಕೊಹ್ಲಿಗೆ ತಲೆನೋವಾಗಿದೆ. ಭಾರತವು ಇಬ್ಬರು ಸ್ಪಿನ್ನರ್‌ಗಳನ್ನು ಆಡಬೇಕೆ ಅಥವಾ ಒಬ್ಬರನ್ನ ಆಡಿಸಬೇಕೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ವಿ.ವಿ.ಎಸ್. ಲಕ್ಷ್ಮಣ್ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರನ್ನು ತಂಡದ ಮೊದಲ ಸ್ಪಿನ್ನರ್ ಆಗಿ ಆಯ್ಕೆ ಮಾಡುಬೇಕೆಂದು ಲಕ್ಷ್ಮಣ್ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತದ ಯಶಸ್ಸಿಗೆ ಅಶ್ವಿನ್ ಒಂದು ಪ್ರಮುಖ ಕಾರಣ ಎಂದು ಲಕ್ಷ್ಮಣ್ ಹೇಳಿದ್ದಾರೆ, ಏಕೆಂದರೆ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಲಕ್ಷ್ಮಣ್, ಅಶ್ವಿನ್ ನನ್ನ ಮೊದಲ ಆಯ್ಕೆಯಾಗುತ್ತಾರೆ. ಆಸ್ಟ್ರೇಲಿಯಾದಲ್ಲಿ ಅವರು ಬೌಲ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರು ವಿರೋಧ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ವಿರುದ್ಧ ತಮ್ಮ ಪ್ರಾಬಲ್ಯವನ್ನು ತೋರಿಸಿದರು ಮತ್ತು ಸತತವಾಗಿ ಸ್ಮಿತ್‌ರನ್ನು ಬಲಿಪಡೆದರು. ಆಸ್ಟ್ರೇಲಿಯಾದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆಲ್ಲಲು ಅವರು ಒಂದು ಕಾರಣವಾಗಿದ್ದಾರೆ. ಹೀಗಾಗಿ ಅಶ್ವಿನ್​ಗೆ ಮೊದಲ ಆದ್ಯತೆ ನೀಡಿ ಎಂದಿದ್ದಾರೆ.

ರೋಹಿತ್ ಜೊತೆ ಗಿಲ್ ಅದೇ ಸಮಯದಲ್ಲಿ, ಆರಂಭಿಕ ಬ್ಯಾಟಿಂಗ್ ಬಗ್ಗೆ ಲಕ್ಷ್ಮಣ್ ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಮತ್ತು ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ. ರೋಹಿತ್ ಅವರೊಂದಿಗೆ ಯಾರು ಇನ್ನಿಂಗ್ಸ್ ತೆರೆಯುತ್ತಾರೆ ಎಂಬುದು ಅತ್ಯಂತ ಮುಖ್ಯವಾದ ಪ್ರಶ್ನೆಯಾಗಿದೆ ಏಕೆಂದರೆ ನಮಗೆ ಎರಡು ಬಲವಾದ ಆಯ್ಕೆಗಳಿವೆ ಮತ್ತು ಇಬ್ಬರೂ ಪ್ರತಿಭಾವಂತರು ಮತ್ತು ಇಬ್ಬರೂ ಭಾರತ-ಎ ಜೊತೆ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮಾಡಿದ ಅನುಭವವನ್ನು ಹೊಂದಿದ್ದಾರೆ. ನಾನು ಯಾವಾಗಲೂ ಸ್ಥಿರತೆಗೆ ಆದ್ಯತೆ ನೀಡುತ್ತೇನೆ. ನನ್ನ ಪ್ರಕಾರ ಬ್ರಿಸ್ಬೇನ್‌ನಲ್ಲಿ ಶುಬ್ಮನ್ ಗಿಲ್ ಉತ್ತಮ ಇನ್ನಿಂಗ್ಸ್ ಆಡಿದರು. ಅವರು ಇಂಗ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಆಡದಿದ್ದರೂ, ಅಭ್ಯಾಸ ಪಂದ್ಯದಲ್ಲಿ ಅವರು ತಮ್ಮ ವೇಗವನ್ನು ಕಂಡುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವುದನ್ನು ನೋಡಲು ನಾನು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಜನಿಸಿದ್ದರೂ ಇಂಗ್ಲೆಂಡ್‌ ಪರ ಕ್ರಿಕೆಟ್: 200 ಪಂದ್ಯ, 50 ಶತಕ, 27 ನೇ ವಯಸ್ಸಿಗೆ ನಿವೃತ್ತನಾದ ಕ್ರಿಕೆಟಿಗನ ಜನ್ಮದಿನ