KPL ಮ್ಯಾಚ್ ಫಿಕ್ಸಿಂಗ್: ಬೆಂಗಳೂರು ತಂಡದ ಮಾಲೀಕರಿಗೂ ಬುಲಾವ್

|

Updated on: Nov 22, 2019 | 10:50 PM

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಟೀಂ ಮಾಲೀಕರಿಗೂ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರ ಮತ್ತು ಕೋಚ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆಂದು ಆರೋಪಿಸಿ ಸಿಸಿಬಿ ರೌಡಿ ಸ್ಕ್ವಾಡ್​​​​ ಎಸಿಪಿ ದೂರು ದಾಖಲಿಸಿದ್ದರು. ಆಟಗಾರರಾದ ಎಂ.ವಿಶ್ವನಾಥನ್ ಹಾಗೂ ವಿನು ಪ್ರಸಾದ್ ಮೇಲೆ ಭಾರತೀನಗರ ಠಾಣೆಯಲ್ಲಿ ಎಸಿಪಿ ಎಸ್.ಎಂ.ನಾಗರಾಜ್ ದೂರು ನೀಡಿದ್ದರು. ಭಾರತೀನಗರದ ಲೆಮನ್ ಟ್ರೀ ಹೋಟೆಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ ನಡೆಸಿದ್ದರೆಂದು ದೂರು ದಾಖಲಿಸಿದ್ದರು. ಹೀಗಾಗಿ ವಿಚಾರಣೆಗೆ […]

KPL ಮ್ಯಾಚ್ ಫಿಕ್ಸಿಂಗ್: ಬೆಂಗಳೂರು ತಂಡದ ಮಾಲೀಕರಿಗೂ ಬುಲಾವ್
Follow us on

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಟೀಂ ಮಾಲೀಕರಿಗೂ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರ ಮತ್ತು ಕೋಚ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆಂದು ಆರೋಪಿಸಿ ಸಿಸಿಬಿ ರೌಡಿ ಸ್ಕ್ವಾಡ್​​​​ ಎಸಿಪಿ ದೂರು ದಾಖಲಿಸಿದ್ದರು.

ಆಟಗಾರರಾದ ಎಂ.ವಿಶ್ವನಾಥನ್ ಹಾಗೂ ವಿನು ಪ್ರಸಾದ್ ಮೇಲೆ ಭಾರತೀನಗರ ಠಾಣೆಯಲ್ಲಿ ಎಸಿಪಿ ಎಸ್.ಎಂ.ನಾಗರಾಜ್ ದೂರು ನೀಡಿದ್ದರು. ಭಾರತೀನಗರದ ಲೆಮನ್ ಟ್ರೀ ಹೋಟೆಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ ನಡೆಸಿದ್ದರೆಂದು ದೂರು ದಾಖಲಿಸಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.