‘ಪಾರ್ಟನರ್​ ಇನ್ ಕ್ರೈಂ‘ ಧೋನಿ ಕಂ​ಬ್ಯಾಕ್ ಮಾಡೋದು ಖಚಿತವಾ?

|

Updated on: Nov 21, 2019 | 12:40 PM

ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಈಡನ್ ಗಾಡರ್ನ್ಸ್ ಮೈದಾನ ಸಜ್ಜಾಗಿದೆ. ಟೀಂ ಇಂಡಿಯಾ ಹುಡುಗ್ರು ಚೊಚ್ಚಲ ಬಾರಿಗೆ ಪಿಂಕ್ ಬಾಲ್​ನಲ್ಲಿ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದಾರೆ. ಇದ್ರ ನಡುವೆಯೇ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಭಿಮಾನಿಗಳ ತಲೆಯಲ್ಲಿ ಹುಳವೊಂದನ್ನ ಬಿಟ್ಟಿದ್ದಾರೆ. ಅಭಿಮಾನಿಗಳ ಆತುರಕ್ಕೆ ಕಾರಣವಾಯ್ತು ಕೊಹ್ಲಿ ಟ್ವೀಟ್! ಒಂದೆಡೆ ನಾಳೆಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ದವಾಗ್ತಿದ್ರೆ, ಇನ್ನೊಂದೆಡೆ ಬಿಸಿಸಿಐ ಆಯ್ಕೆ ಸಮಿತಿ ಇಂದು ವೆಸ್ಟ್ ಇಂಡೀಸ್ ವಿರುದ್ಧದ ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ತಂಡವನ್ನ ಪ್ರಕಟಿಸಲಿದೆ. ಇದ್ರ […]

‘ಪಾರ್ಟನರ್​ ಇನ್ ಕ್ರೈಂ‘ ಧೋನಿ ಕಂ​ಬ್ಯಾಕ್ ಮಾಡೋದು ಖಚಿತವಾ?
Follow us on

ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಈಡನ್ ಗಾಡರ್ನ್ಸ್ ಮೈದಾನ ಸಜ್ಜಾಗಿದೆ. ಟೀಂ ಇಂಡಿಯಾ ಹುಡುಗ್ರು ಚೊಚ್ಚಲ ಬಾರಿಗೆ ಪಿಂಕ್ ಬಾಲ್​ನಲ್ಲಿ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದಾರೆ. ಇದ್ರ ನಡುವೆಯೇ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಭಿಮಾನಿಗಳ ತಲೆಯಲ್ಲಿ ಹುಳವೊಂದನ್ನ ಬಿಟ್ಟಿದ್ದಾರೆ.

ಅಭಿಮಾನಿಗಳ ಆತುರಕ್ಕೆ ಕಾರಣವಾಯ್ತು ಕೊಹ್ಲಿ ಟ್ವೀಟ್!
ಒಂದೆಡೆ ನಾಳೆಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ದವಾಗ್ತಿದ್ರೆ, ಇನ್ನೊಂದೆಡೆ ಬಿಸಿಸಿಐ ಆಯ್ಕೆ ಸಮಿತಿ ಇಂದು ವೆಸ್ಟ್ ಇಂಡೀಸ್ ವಿರುದ್ಧದ ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ತಂಡವನ್ನ ಪ್ರಕಟಿಸಲಿದೆ. ಇದ್ರ ನಡುವೆಯೇ ಕಿಂಗ್ ಕೊಹ್ಲಿ ಕುತೂಹಲ ಮೂಡಿಸುವಂತಹ ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಮಾಡಿರೋ ಟ್ವೀಟ್, ಧೋನಿಯ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದೆ.

ಧೋನಿ ಜೊತೆ ಕೊಹ್ಲಿ ಫೋಟೋ.. ಏನಿದರ ಗುಟ್ಟು..?
ಕಳೆದೆರೆಡು ತಿಂಗಳ ಹಿಂದೆ ಕೊಹ್ಲಿ ಧೋನಿಗೆ ನಮಿಸುತ್ತಿರೋ ಹಾಗೆ ಟ್ವೀಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ರು. ಆದ್ರೀಗ ವಿರಾಟ್, ಧೋನಿ ಜೊತೆ ಪ್ರಾಕ್ಟೀಸ್ ಮಾಡ್ತಿರೋ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪಾರ್ಟನರ್ ಇನ್ ಕ್ರೈಮ್ ಅನ್ನೋ ಶೀರ್ಷಿಕೆ ನೀಡಿದ್ದಾರೆ. ಅಂದ್ರೆ ಅಪರಾಧದಲ್ಲಿ ಜೊತೆಗಾರನೂ ಪಾಲುದಾರ ಅಂತಾ ಬರೆದುಕೊಂಡಿದ್ದಾರೆ.

ವಿಂಡೀಸ್ ಸರಣಿಗೆ ಆಯ್ಕೆಯಾಗ್ತಾರಾ ಧೋನಿ?
ಕೊಹ್ಲಿ ಯಾವಾಗ ಇಂತಹದ್ದೊಂದು ಟ್ವೀಟ್ ಮಾಡಿದ್ರೋ, ಧೋನಿ ವೆಸ್ಟ್ ಇಂಡೀಸ್ ಸರಣಿಗೆ ಕಮ್​ಬ್ಯಾಕ್ ಮಾಡೋದು ಪಕ್ಕಾ ಅನ್ನೋ ಚರ್ಚೆ ನಡೀತಿದೆ. ಧೋನಿ ಬರ್ತಿದ್ದಾರೆ ಅನ್ನೋ ಖುಷಿಗೆ ಕೊಹ್ಲಿ ಹೀಗೆ ಫೋಟೋ ಪೋಸ್ಟ್ ಮಾಡಿದ್ದಾರೆ ಅಂತಾ ಮಾತನಾಡಿಕೊಳ್ತಿದ್ದಾರೆ.

ಇನ್ನೂ ಕೆಲ ಧೋನಿ ಅಭಿಮಾನಿಗಳು ಆತಂಕವನ್ನ ವ್ಯಕ್ತಪಡಿಸಿದ್ದಾರೆ. ಇವತ್ತು ಟೀಂ ಇಂಡಿಯಾ ಸೆಲೆಕ್ಷನ್ ನಡೆಯಲಿದ್ದು, ಧೋನಿಯನ್ನ ತಂಡದಲ್ಲಿ ಡ್ರಾಪ್ ಮಾಡಲಾಗುತ್ತೆ. ಹಾಗಾಗಿ ಕೊಹ್ಲಿ ಇಂತಹದ್ದೊಂದು ಫೋಟೋ ಹಾಕಿದ್ದಾರೆ ಅನ್ನೋ ಚರ್ಚೆ ಕೂಡ ನಡೀತಿದೆ.

ರೋಹಿತ್​ಗೆ ವಿಶ್ರಾಂತಿ.. ಮಯಾಂಕ್​ಗೆ ಸಿಗುತ್ತಾ ಚಾನ್ಸ್!
ಸತತ ಕ್ರಿಕೆಟ್​ನಿಂದ ಬಸವಳಿದಿರುವ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡೋ ಸಾಧ್ಯತೆ ಹೆಚ್ಚಿದೆ. ರೋಹಿತ್​ಗೆ ವಿಶ್ರಾಂತಿ ನೀಡಿದ್ರೆ ಕನ್ನಡಿಗ ಮಯಾಂಕ್ ಟಿಟ್ವೆಂಟಿ ಮತ್ತು ಏಕದಿನ ಸರಣಿಗೆ ಆಯ್ಕೆಯಾಗೋ ಸಾಧ್ಯತೆಯಿದೆ. ಇನ್ನು ಕಳಪೆ ಫಾರ್ಮ್​ನಲ್ಲಿರುವ ಶಿಖರ್ ಧವನ್​ರನ್ನ ತಂಡದಿಂದ ಹೊರಗಿಡೋ ಸಾಧ್ಯತೆಯಿದೆ. ಇನ್ನು ರಿಷಬ್ ಪಂತ್ ಬದಲು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾದ್ರೂ ಅಚ್ಚರಿಯಿಲ್ಲ.

 

Published On - 11:25 am, Thu, 21 November 19