IPL 2021: ಐಪಿಎಲ್​ನಲ್ಲಿ ದುಡಿದ ಅಷ್ಟೂ ಹಣವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ನೀಡುತ್ತಿದ್ದೇನೆ; ಲಕ್ಷ್ಮೀರತನ್ ಶುಕ್ಲಾ

|

Updated on: May 07, 2021 | 3:40 PM

ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಐಪಿಎಲ್​ನಲ್ಲಿ ದುಡಿದ ಎಲ್ಲಾ ಹಣವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸಲು ಅವರು ನಿರ್ಧರಿಸಿದ್ದೇನೆ ಎಂದು ಶುಕ್ಲಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದರು.

IPL 2021: ಐಪಿಎಲ್​ನಲ್ಲಿ ದುಡಿದ ಅಷ್ಟೂ ಹಣವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ನೀಡುತ್ತಿದ್ದೇನೆ; ಲಕ್ಷ್ಮೀರತನ್ ಶುಕ್ಲಾ
ಲಕ್ಷ್ಮೀರತನ್ ಶುಕ್ಲಾ
Follow us on

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಐಪಿಎಲ್ -2021 ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಇದರೊಂದಿಗೆ, ಇದರಲ್ಲಿ ಭಾಗವಹಿಸುವ ಎಲ್ಲಾ ಆಟಗಾರರು, ಬೆಂಬಲ ಸಿಬ್ಬಂದಿ ಮತ್ತು ಕಾಮೆಂಟೆಟರ್ಸ್​ ಕೂಡ ತಮ್ಮ ಮನೆಗಳಿಗೆ ಮರಳಿದರು. ಭಾರತ ಮತ್ತು ಬಂಗಾಳದ ಮಾಜಿ ಕ್ರಿಕೆಟ್ ತಂಡದ ಆಟಗಾರ ಲಕ್ಷ್ಮೀರತನ್ ಶುಕ್ಲಾ ಕೂಡ ಐಪಿಎಲ್ ಕಾಮೆಂಟೆಟರ್ಸ್ ತಂಡದ ಭಾಗವಾಗಿದ್ದರು. ಲೀಗ್ ಅನ್ನು ಮುಂದೂಡಿದ ನಂತರ, ಶುಕ್ಲಾ ಉತ್ತಮ ಕೆಲಸ ಮಾಡಿದ್ದಾರೆ. ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಐಪಿಎಲ್​ನಲ್ಲಿ ದುಡಿದ ಎಲ್ಲಾ ಹಣವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸಲು ಅವರು ನಿರ್ಧರಿಸಿದ್ದೇನೆ ಎಂದು ಶುಕ್ಲಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದರು.

ಅವರ ಜನ್ಮದಿನದಂದು ಶುಕ್ಲಾ ಈ ನಿರ್ಧಾರ ಕೈಗೊಂಡಿದ್ದಾರೆ. ಶುಕ್ಲಾ ಅವರು 2016 ರಿಂದ 2021 ರವರೆಗೆ ರಾಜ್ಯದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದರು. ಅವರು ಈ ವರ್ಷದ ಆರಂಭದಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದರು. ಅವರು ಉತ್ತರ ಪ್ರದೇಶದ ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದರು. ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 47 ಐಪಿಎಲ್ ಪಂದ್ಯಗಳಲ್ಲಿಯೂ ಆಡಿದ್ದಾರೆ.

ಇನ್ನೂ ಅನೇಕ ಕ್ರಿಕೆಟಿಗರು ಸಹಾಯ ಮಾಡಿದ್ದಾರೆ
ಶುಕ್ಲಾ ಅವರಿಗೂ ಮೊದಲು, ಐಪಿಎಲ್‌ನಲ್ಲಿ ಆಡಿದ ಅನೇಕ ಕ್ರಿಕೆಟಿಗರು ಈ ಸಾಂಕ್ರಾಮಿಕ ರೋಗದಲ್ಲಿ ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರು ಪಿಎಂ ಕೇರ್ಸ್ ಫಂಡ್‌ಗೆ ಸಹಾಯ ಮಾಡಲು ನಿರ್ಧರಿಸಿದರು. ಅವರಲ್ಲದೆ ಶಿಖರ್ ಧವನ್, ಜೈದೇವ್ ಉನಾದ್ಕಟ್, ಪಾಂಡ್ಯ ಸಹೋದರರು ಸಹ ತಮ್ಮ ಸಹಾಯವನ್ನು ಘೋಷಿಸಿದರು. ಸಚಿನ್ ತೆಂಡೂಲ್ಕರ್, ಬ್ರೆಟ್ ಲೀ ಕೂಡ ಸಹಾಯ ಮಾಡಿದ್ದಾರೆ. ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸಹ ಸಹಾಯ ಘೋಷಿಸಿವೆ.

ಐಪಿಎಲ್ -2021 ಮುಂದೂಡಲಾಗಿದೆ
ಪ್ರಸಕ್ತ ಐಪಿಎಲ್ ಋತುವಿನಲ್ಲಿ, ಕೋಲ್ಕತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರ ಹೊರತಾಗಿ, ಚೆನ್ನೈ ಸೂಪರ್ ಕಿಂಗ್ಸ್‌ನ ಮೂವರು ಸಹಾಯಕ ಸಿಬ್ಬಂದಿ ಮತ್ತು ಐವರು ಡಿಡಿಸಿಎ ಗ್ರೌಂಡ್‌ಮೆನ್‌ಗಳು ಸೋಮವಾರ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮಂಗಳವಾರ, ಸನ್‌ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಹಾ ಮತ್ತು ದೆಹಲಿ ತಂಡದ ಅಮಿತ್ ಮಿಶ್ರಾ ಕೂಡ ಕೋವಿಡ್ ಪಾಸಿಟಿವ್​ ಆಗಿದ್ದಾರೆ. ಇದರಿಂದಾಗಿ ಐಪಿಸಿಎಲ್ -14 ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಮಂಗಳವಾರ ನಿರ್ಧರಿಸಿದೆ.

Published On - 3:39 pm, Fri, 7 May 21