22 ವರ್ಷ, 130 ಕೆಜಿ ತೂಕ, ಸಿಕ್ಸರ್ ಹೊಡೆಯುವುದರಲ್ಲಿ ಪಂಟರ್; ಪಾಕ್ ತಂಡದಲ್ಲಿ ಸ್ಥಾನ ಪಡೆದ ಅಜಮ್ ಖಾನ್

|

Updated on: Jun 05, 2021 | 7:54 PM

ಅಜಮ್ ಪಾಕಿಸ್ತಾನದ ಆಟಗಾರರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್. ಟಿ 20 ಕ್ರಿಕೆಟ್‌ನಲ್ಲಿ ಇದುವರೆಗೆ 157 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

22 ವರ್ಷ, 130 ಕೆಜಿ ತೂಕ, ಸಿಕ್ಸರ್ ಹೊಡೆಯುವುದರಲ್ಲಿ ಪಂಟರ್; ಪಾಕ್ ತಂಡದಲ್ಲಿ ಸ್ಥಾನ ಪಡೆದ ಅಜಮ್ ಖಾನ್
ಮೊಯಿನ್ ಅಲಿ ಅವರ ಪುತ್ರ ಅಜಮ್ ಖಾನ್
Follow us on

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳಿಗೆ ಪಾಕಿಸ್ತಾನ ಪ್ರವಾಸ ಘೋಷಿಸಲಾಗಿದೆ. ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಅಲಿ ಅವರ ಪುತ್ರ ಅಜಮ್ ಖಾನ್ ಈ ಪ್ರವಾಸಕ್ಕಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಜಮ್‌ಗೆ ಟಿ 20 ಸರಣಿಗೆ ಅವಕಾಶ ನೀಡಲಾಗಿದೆ. ಅಜಮ್ ಅವರನ್ನು ಟಿ 20 ಗೆ ತಕ್ಕನಾದ ಆಟಗಾರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವರು ಇಲ್ಲಿಯವರೆಗೆ ಕೇವಲ ಒಂದು ಪ್ರಥಮ ದರ್ಜೆ ಪಂದ್ಯವನ್ನು ಮಾತ್ರ ಆಡಿದ್ದಾರೆ. ಆದರೆ ಚುಟುಕು ಸಮರದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ.

ತಂಡದಲ್ಲಿ ಪ್ರವೇಶಕ್ಕಾಗಿ 30 ಕೆಜಿ ತೂಕ ಇಳಿಕೆ
ಈವರೆಗೆ 36 ಟಿ 20 ಪಂದ್ಯಗಳನ್ನು ಆಡಿರುವ ಅಜಮ್ ಅವರನ್ನು ಸ್ಫೋಟಕ ಬ್ಯಾಟ್ಸ್‌ಮನ್ ಎಂದು ಕರೆಯಲಾಗುತ್ತದೆ. ಮೈದಾನದಲ್ಲಿ ಸಿಕ್ಸರ್‌ಗಳನ್ನು ಹೊಡೆಯುವುದರಲ್ಲಿ ಅಜಮ್​ ಪಂಟರ್​ ಎಂದು ಪರಿಗಣಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಮತ್ತು ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅವರು ತಮ್ಮ ಬ್ಯಾಟ್‌ನಿಂದ ಮ್ಯಾಜಿಕ್ ತೋರಿಸಿದ್ದಾರೆ. ಪಾಕಿಸ್ತಾನ ತಂಡಕ್ಕೆ ಪ್ರವೇಶಿಸಲು ಅವರು ಸುಮಾರು 30 ಕೆಜಿ ಕಳೆದುಕೊಂಡಿದ್ದಾರೆ ಎಂಬುದು ಈಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

ಪಾಕಿಸ್ತಾನದ ಅತ್ಯಧಿಕ ಸ್ಟ್ರೈಕ್ ರೇಟ್ ಬ್ಯಾಟ್ಸ್‌ಮನ್
22 ವರ್ಷದ ಅಜಮ್ ಖಾನ್ ಕಳೆದ ವರ್ಷದಿಂದ ತಮ್ಮ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕ್ರಿಕೆಟ್​ನಲ್ಲಿ ಛಾಪೂ ಮೂಡಿಸಿದ್ದರು. ಆದರೆ ತೂಕ ಇಳಿಸಿಕೊಳ್ಳಲು ಆಯ್ಕೆ ಸಮಿತಿಯ ಸದಸ್ಯರು ಸೂಚಿಸಿದ್ದರು. ಆ ಸಮಯದಲ್ಲಿ ಅವರ ತೂಕ ಸುಮಾರು 130 ಕೆ.ಜಿ. ಇತ್ತು. ಕ್ರಿಕೆಟ್ ಆಡಬೇಕೆಂಬ ಹೆಬ್ಬಯಕೆ ಹೊಂದಿದ್ದ ಅಜಮ್ ಮಂಡಳಿಯ ಸೂಚನೆಯಂತೆ ತೂಕ ಇಳಿಸಕೊಂಡಿದ್ದಾರೆ. ಪ್ರಸ್ತುತ ಅವರು ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಲ್ಲದೆ ಅಜಮ್ ಪಾಕಿಸ್ತಾನದ ಆಟಗಾರರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್. ಟಿ 20 ಕ್ರಿಕೆಟ್‌ನಲ್ಲಿ ಇದುವರೆಗೆ 157 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ನನ್ನ ಕಠಿಣ ಪರಿಶ್ರಮ ಫಲ ​​ನೀಡಿತು!
ಪಾಕಿಸ್ತಾನ ತಂಡಕ್ಕೆ ಆಯ್ಕೆಯಾದ ನಂತರ ಅಜಮ್ ತುಂಬಾ ಭಾವುಕರಾದರು. ನಾನು ಉಪಾಹಾರ ಸೇವಿಸುತ್ತಿದ್ದಾಗ, ನನ್ನನ್ನು ಟಿ 20 ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಬಿಲ್ ಭಾಯ್ (ಕ್ವೆಟ್ಟಾ ಗ್ಲಾಡಿಯೇಟರ್ಸ್‌ನ ಮಾಧ್ಯಮ ವ್ಯವಸ್ಥಾಪಕ) ಹೇಳಿದ್ದರು. ನಂತರ ನಾನು ಉಪಾಹಾರವನ್ನು ಪಕ್ಕಕ್ಕೆ ಇರಿಸಿ ನೇರವಾಗಿ ಅಪ್ಪನ (ಅಬ್ಬು) ಬಳಿ ಹೋದೆ. ಅದು ಭಾವನಾತ್ಮಕ ಸನ್ನಿವೇಶವಾಗಿತ್ತು. ಇಷ್ಟು ದೊಡ್ಡ ಅವಕಾಶ ಇಷ್ಟು ಬೇಗ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನನಗೆ ತುಂಬಾ ಸಂತೋಷವಾಗಿದೆ. ಏಕೆಂದರೆ ಕಳೆದ ವರ್ಷದಿಂದ ನನ್ನ ಕಠಿಣ ಪರಿಶ್ರಮದ ಪ್ರತಿಫಲವನ್ನು ನಾನು ಪಡೆದುಕೊಂಡಿದ್ದೇನೆ ಎಂದು ಅಜಮ್ ಹೇಳಿದರು.

ಟಿ 20 ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅರ್ಷದ್ ಇಕ್ಬಾಲ್, ಫಹೀಮ್ ಅಶ್ರಫ್, ಫಖರ್ ಜಮಾ, ಹೈದರ್ ಅಲಿ, ಹರಿಸ್ ರವೂಫ್, ಹಸನ್ ಅಲಿ, ಇಮದ್ ವಾಸಿಮ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಶಾಹೀನ್ ಶಾ ಅಫ್ರಿದಿ, ಶಾರ್ಜೀಲ್ ಖಾನ್, ಉಸ್ಮಾನ್ ಖಾದಿರ್.