ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಮ್ಯಾನೇಜರ್ ಹೇಳಿದ್ದೇನು?

| Updated By:

Updated on: Jul 10, 2020 | 6:03 PM

ಟೀಮ್ ಇಂಡಿಯಾ ಮಾಜಿ ನಾಯಕ ಚಾಂಪಿಯ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಷ್ಟು ದಿನ ಏನಾಗುತ್ತೋ ಅಂತಾ ಚಿಂತೆಯಲ್ಲಿದ್ದ ಧೋನಿ ಅಭಿಮಾನಿಗಳು ಕಡೆಗೂ ಆ ಸಿಹಿ ಸುದ್ದಿ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿಗೆ ಧೋನಿ ಕ್ರಿಕೆಟ್ ಬದುಕು ಅಂತ್ಯವಾಯ್ತು ಅಂತಾ ಚರ್ಚೆ ಶುರುವಾಗಿತ್ತು. ಆದ್ರೆ ಐಪಿಎಲ್​ಗಾಗಿ ಮತ್ತೆ ಪ್ಯಾಡ್ ಕಟ್ಟಿದ ಮಹೇಂದ್ರ ಸಿಂಗ್ ಧೋನಿ, ಗ್ರೇಟ್ […]

ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಮ್ಯಾನೇಜರ್ ಹೇಳಿದ್ದೇನು?
Follow us on

ಟೀಮ್ ಇಂಡಿಯಾ ಮಾಜಿ ನಾಯಕ ಚಾಂಪಿಯ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಷ್ಟು ದಿನ ಏನಾಗುತ್ತೋ ಅಂತಾ ಚಿಂತೆಯಲ್ಲಿದ್ದ ಧೋನಿ ಅಭಿಮಾನಿಗಳು ಕಡೆಗೂ ಆ ಸಿಹಿ ಸುದ್ದಿ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿಗೆ ಧೋನಿ ಕ್ರಿಕೆಟ್ ಬದುಕು ಅಂತ್ಯವಾಯ್ತು ಅಂತಾ ಚರ್ಚೆ ಶುರುವಾಗಿತ್ತು. ಆದ್ರೆ ಐಪಿಎಲ್​ಗಾಗಿ ಮತ್ತೆ ಪ್ಯಾಡ್ ಕಟ್ಟಿದ ಮಹೇಂದ್ರ ಸಿಂಗ್ ಧೋನಿ, ಗ್ರೇಟ್ ಕಮ್​ಬ್ಯಾಕ್ ಮಾಡೋ ಸೂಚನೆ ನೀಡಿದ್ರು. ಆದ್ರೆ ಕೊರೊನಾದಿಂದಾಗಿ ಐಪಿಎಲ್​ಗೆ ಅನಿಶ್ಚಿತತೆಯ ಕಾರ್ಮೋಡ ಕವಿದ ಮೇಲೆ, ಧೋನಿ ಕ್ರಿಕೆಟ್ ಬದುಕೇ ಅಂತ್ಯವಾಗಿ ಹೋಯ್ತು ಅನ್ನುವಷ್ಟರ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಯ್ತು.

ಮತ್ತೊಂದೆಡೆ ಧೋನಿಯೂ ತಮ್ಮ ಫಾರ್ಮ್​ಹೌಸ್​ನಲ್ಲಿ ಕೃಷಿ ಚಟುವಟಿಕೆಯಲ್ಲಿ ಬ್ಯುಸಿಯಾಗೋ ಮೂಲಕ, ನಿವೃತ್ತಿಯಾಗ್ತಿದ್ದೀನಿ ಅನ್ನೋ ಚರ್ಚೆಗೆ ಪುಷ್ಟಿ ನೀಡಿದ್ರು. ಆದ್ರೀಗ ಧೋನಿ ಸದ್ಯ ಕ್ರಿಕೆಟ್​ನಿಂದ ನಿವೃತ್ತಿಯಾಗೋದಿಲ್ಲ ಅನ್ನೋ ಸಿಹಿ ಸುದ್ದಿ ಹೊರಬಿದ್ದಿದೆ. ಸ್ವತಃ ಮಹೇಂದ್ರ ಸಿಂಗ್ ಧೋನಿ ಮ್ಯಾನೇಜರ್ ಮಿಹಿರ್ ದಿವಾಕರ್ ಈ ಸಂತಸದ ಸುದ್ದಿಯನ್ನ ಬಾಯ್ಬಿಟ್ಟಿದ್ದಾರೆ.

ಕ್ರಿಕೆಟ್​ನಿಂದ ನಿವೃತ್ತಿಯಾಗುವ ಬಗ್ಗೆ ಯಾವುದೇ ಯೋಚನೆ ಇಲ್ಲ:
‘ನಾವು ಸ್ನೇಹಿತರಾಗಿ ಯಾವತ್ತೂ ಕ್ರಿಕೆಟ್ ಬಗ್ಗೆ ಮಾತನಾಡಲ್ಲ. ಆದ್ರೆ ಧೋನಿಗೆ ಸದ್ಯಕ್ಕೆ ಕ್ರಿಕೆಟ್​ನಿಂದ ನಿವೃತ್ತಿಯಾಗುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಈ ವರ್ಷ ಐಪಿಎಲ್ ಆಡಲು ಧೋನಿ ತುಂಬಾನೇ ಉತ್ಸುಕರಾಗಿದ್ರು. ಐಪಿಎಲ್​ನಲ್ಲಿ ಮಿಂಚೋದಕ್ಕೆ, ತಿಂಗಳಿಗೂ ಮೊದಲೇ ಚೆನ್ನೈಗೆ ತೆರಳಿ, ಪ್ರಾಕ್ಟಿಸ್​ನಲ್ಲಿ ತೊಡಗಿದ್ದರು.’
– ಮಿಹಿರ್ ದಿವಾಕರ್, ಧೋನಿ ಮ್ಯಾನೇಜರ್

ಸದ್ಯ ಮಹೇಂದ್ರ ಸಿಂಗ್ ಧೋನಿ ತಮ್ಮ ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ರೂ ಧೋನಿ ತಮ್ಮ ಫಿಟ್ನೆಸ್​ನ ಅದ್ಭುತವಾಗಿ ಕಾಯ್ದುಕೊಳ್ತಿದ್ದಾರೆ. ಧೋನಿ ಫೀಟ್ನೆಸ್ ಹೇಗಿದೆ ಅನ್ನೋದ್ರ ಬಗ್ಗೆಯೂ ಮ್ಯಾನೇಜರ್ ದಿವಾಕರ್ ಬಾಯ್ಬಿಟ್ಟಿದ್ದಾರೆ.

‘ಧೋನಿ ತೋಟದ ಮನೆಯಲ್ಲಿದ್ರೂ ತಮ್ಮ ಫಿಟ್ನೆಸ್ ಕಾಪಾಡಿಕೊಳ್ತಿದ್ದಾರೆ. ಹಾಗೇ ಲಾಕ್​ಡೌನ್ ಮುಗಿದ ಬಳಿಕ ಅಭ್ಯಾಸವನ್ನ ಪ್ರಾರಂಭಿಸುತ್ತಾರೆ. ಎಲ್ಲವೂ ಪರಿಸ್ಥಿತಿ ಎಷ್ಟು ಬೇಗ ಸಹಜ ಸ್ಥಿತಿಗೆ ಮರಳುತ್ತೆ ಅನ್ನೊದ್ರ ಮೇಲೆ ನಿಂತಿದೆ.
– ಮಿಹಿರ್ ದಿವಾಕರ್, ಧೋನಿ ಮ್ಯಾನೇಜರ್

ಒಟ್ನಲ್ಲಿ ಮ್ಯಾನೇಜರ್ ಮಿಹಿರ್ ದಿವಾಕರ್ ಆಡಿದ ಮಾತುಗಳು, ಧೋನಿ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ನೀಡಿದೆ. ಮತ್ತೊಮ್ಮೆ ಮಹೇಂದ್ರನ ಆಟವನ್ನ ಕಣ್ತುಂಬಿಸಿಕೊಳ್ಳಬೇಕು ಅಂತಾ ಕಾದು ಕುಳಿತಿದ್ದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Published On - 3:39 pm, Fri, 10 July 20