ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ. ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ […]

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!

Updated on: Apr 21, 2020 | 3:35 PM

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ.

ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ ಮನೆಯಲ್ಲಿ ರೌಂಡ್ಸ್ ಮೇಲೆ ರೌಂಡ್ಸ್ ಹೊಡೀತಿದ್ದಾರೆ. ಅದಕ್ಕೆ ಯಾರೂ ಬ್ರೇಕ್ ಹಾಕೋವ್ರೂ ಇಲ್ಲ!

ಇದಕ್ಕೆಲ್ಲ ಸಾಕ್ಷಿಯಾಗಿರುವ ಧೋನಿ ಪತ್ನಿ ಸಾಕ್ಷಿ, ನನಗೀಗ ಇಬ್ಬರು ಮಕ್ಕಳು. ಎರಡೂ ರೌಂಡ್ಸ್ ಹೊಡೀತಿವೆ ನೋಡಿ ಎಂದು ಬೀಗುತ್ತಿದ್ದಾರೆ. ಹೀಗೇ ತಣ್ಣಗಿರಲಿ ಧೋನಿ ನಿವೃತ್ತಿನಂತರದ ಬದುಕು!

Published On - 3:33 pm, Tue, 21 April 20