ಧೋನಿ ಮನೆಗೆ ಬಂದ ಹೊಸ ಅತಿಥಿ; ಈ ಕಪ್ಪು ಸುಂದರನಿಗೆ ಸಾಕ್ಷಿ ಧೋನಿ ಇಟ್ಟ ಹೆಸರೇನು ಗೊತ್ತಾ?

|

Updated on: May 09, 2021 | 5:52 PM

ನಮ್ಮ ಮನೆಗೆ ಬಂದಿರುವ ಚೇತಕ್​ಗೆ ಸ್ವಾಗತ. ನೀನು ಲಿಲ್ಲಿಯನ್ನ ಭೇಟಿಯಾದ ನಿಜವಾದ ಜಂಟಲ್ಮೆನ್ ಎಸ್ಪಿ. ನಮ್ಮ ಕುಟುಂಬದಲ್ಲಿ ನಿಮ್ಮನ್ನ ಸಂತೋಷದಿಂದ ಸ್ವೀಕರಿಸಲಾಗಿದೆ.

ಧೋನಿ ಮನೆಗೆ ಬಂದ ಹೊಸ ಅತಿಥಿ; ಈ ಕಪ್ಪು ಸುಂದರನಿಗೆ ಸಾಕ್ಷಿ ಧೋನಿ ಇಟ್ಟ ಹೆಸರೇನು ಗೊತ್ತಾ?
ಧೋನಿ ಮನೆಗೆ ಬಂದ ಹೊಸ ಅತಿಥಿ
Follow us on

ಕೊರೊನಾ ಅಟ್ಟಹಾಸಕ್ಕೆ ಐಪಿಎಲ್ ಮುಂದೂಡಿಕೆಯಾಗಿರೋದ್ರಿಂದ, ಆಟಗಾರರೆಲ್ಲಾ ತಮ್ಮ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಆದ್ರೀಗ ಧೋನಿ ಫಾರ್ಮ್ಹೌಸ್ಗೆ ಹೊಸ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಮಾಜಿ ನಾಯಕ, ಸಿಎಸ್ಕೆ ತಂಡದ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ಪ್ರಾಣಿ ಪ್ರಿಯ ಅನ್ನೋದು ನಿಮಗೆ ಗೊತ್ತಿರೋ ಸಂಗತಿ. ಅದ್ರಲ್ಲೂ ಶ್ವಾನಗಳೆಂದ್ರೆ ಧೋನಿಗೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ಧೋನಿ ಫಾರ್ಮ್ ಹೌಸ್ನಲ್ಲಿ ಸ್ಯಾಮ್, ಲಿಲ್ಲಿ, ಗಬ್ಬರ್ ಹಾಗೂ ಜೋಯಾ ಎನ್ನುವ ನಾಯಿಗಳನ್ನ ಸಾಕಿದ್ದಾರೆ.

ಈ ಕಪ್ಪು ಸುಂದರನಿಗೆ ಚೇತಕ್ ಎಂದು ಹೆಸರನ್ನಿಟ್ಟಿದ್ದಾರೆ
ತಮ್ಮ ಮುದ್ದಿನ ನಾಯಿಗಳಿಗೆ ಸ್ವತಃ ಧೋನಿಯೇ ಪೊಲೀಸ್ ಡಾಗ್​ಗಳಿಗೆ ನೀಡುವ ಟ್ರೈನಿಂಗ್ ನೀಡ್ತಾರೆ. ಆದ್ರೀಗ ಐಪಿಎಲ್ ಮುಗಿಸಿ ರಾಂಚಿಗೆ ಬಂದಿರುವ ಧೋನಿ ಮನೆಗೆ, ಹೊಸ ಅತಿಥಿಯೊಂದು ಆಗಮಿಸಿದೆ. ಹಾಗಂತ ಧೋನಿ ಹೊಸ ತಳಿಯ ನಾಯಿಯೊಂದನ್ನ ಖರೀದಿಸಿದ್ದಾರೆ ಅಂದ್ಕೋಬೇಡಿ.. ಮಹೇಂದ್ರನ ಫಾರ್ಮ್ ಹೌಸ್ಗೆ ಬಂದಿರುವ ಹೊಸ ಅತಿಥಿ ಎಂದರೆ ಅದುವೆ ಕಪ್ಪು ಕುದುರೆ. ಈಗಾಗಲೇ ಧೋನಿಯ ಮುದ್ದಿನ ಮಡದಿ ಸಾಕ್ಷಿ ಈ ಕಪ್ಪು ಸುಂದರನಿಗೆ ಚೇತಕ್ ಎಂದು ಹೆಸರನ್ನಿಟ್ಟಿದ್ದಾರೆ. ಈ ಕುದುರೆಯನ್ನ ನೋಡಿ ಧೋನಿ ಮುದ್ದಿನ ನಾಯಿಗಳು, ಮೊದಲ ದಿನ ಆಶ್ಚರ್ಯದ ಕಣ್ಣಿನಿಂದ ನೋಡಿವೆ. ಆದ್ರೆ ಲಿಲ್ಲಿ ಎನ್ನುವ ಬಿಳಿ ನಾಯಿಯೊಂದು ಈ ಕಪ್ಪು ಸುಂದರನ ಸ್ನೇಹವನ್ನ ಸಂಪಾದಿಸಿದೆ.

ಚೇತಕ್​ಗೆ ಸ್ವಾಗತ
ನಮ್ಮ ಮನೆಗೆ ಬಂದಿರುವ ಚೇತಕ್​ಗೆ ಸ್ವಾಗತ. ನೀನು ಲಿಲ್ಲಿಯನ್ನ ಭೇಟಿಯಾದ ನಿಜವಾದ ಜಂಟಲ್ಮೆನ್ ಎಸ್ಪಿ. ನಮ್ಮ ಕುಟುಂಬದಲ್ಲಿ ನಿಮ್ಮನ್ನ ಸಂತೋಷದಿಂದ ಸ್ವೀಕರಿಸಲಾಗಿದೆ.
ಸಾಕ್ಷಿ ಧೋನಿ, ಧೋನಿ ಪತ್ನಿ

ಇಷ್ಟು ದಿನ ಶ್ವಾನ ಪ್ರಿಯನಾಗಿ ಗುರುತಿಸಿಕೊಂಡಿದ್ದ ಧೋನಿ, ಈಗ ಅಶ್ವ ಪ್ರಿಯನೂ ಆಗಿದ್ದಾರೆ. ಹೀಗಾಗಿ ಧೋನಿ ಅಭಿಮಾನಿಗಳು, ಧೊನಿ ಕುದುರೆ ಸವಾರಿ ಮಾಡೋದನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.