ಜನ ಆತನ ನಿಜವಾದ ಹೆಸರನ್ನು ಮರೆಯಬಹುದು.. ಆದರೆ ಮಿಸ್ಟರ್ 360 ಡಿಗ್ರಿ ಎಂಬ ಹೆಸರನ್ನು ಎಂದಿಗೂ ಮರೆಯುವುದಿಲ್ಲ: ಸೆಹ್ವಾಗ್

ಐಲಿಎಲ್​ನಲ್ಲಿ ಎಬಿಡಿ ಆಟ ಗಮನಿಸಿದ್ದ ಸೆಹ್ವಾಗ್ ಹೇಳಿದ್ದು ಹೀಗೆ, ಜನ ಆತನ ನಿಜ ಹೆಸರನ್ನು ಮರೆಯಬಹುದು. ಆದರೆ ಮಿಸ್ಟರ್ 360 ಡಿಗ್ರಿ ಎಂಬ ಹೆಸರನ್ನು ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.

ಜನ ಆತನ ನಿಜವಾದ ಹೆಸರನ್ನು ಮರೆಯಬಹುದು.. ಆದರೆ ಮಿಸ್ಟರ್ 360 ಡಿಗ್ರಿ ಎಂಬ ಹೆಸರನ್ನು ಎಂದಿಗೂ ಮರೆಯುವುದಿಲ್ಲ: ಸೆಹ್ವಾಗ್
ವಿರೇಂದ್ರ ಸೆಹ್ವಾಗ್, ಎಬಿ ಡಿವಿಲಿಯರ್ಸ್​
Follow us
ಪೃಥ್ವಿಶಂಕರ
|

Updated on: May 09, 2021 | 8:07 PM

ಟೀಂ ಇಂಡಿಯಾದ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಆರ್ಸಿಬಿ ತಂಡದ ಆಪತ್ಭಾಂದವ ಎಬಿ ಡಿವಿಲಿಯರ್ಸ್​ ಬಗ್ಗೆ ಬಾರಿ ಮೆಚ್ಚುಗೆಯ ಮಾತಾನಾಡಿದ್ದಾರೆ. ಆತನ ನಿಜವಾದ ಹೆಸರನ್ನು ಜನ ಮರೆತು ಬಿಡಬಹುದು, ಆದರೆ ಐಪಿಎಲ್ ಅಭಿಮಾನಿಗಳು ನೀಡಿರುವ ಈ ಹೆಸರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ವಿಶ್ವದಾದ್ಯಂತ ಟಿ 20 ಲೀಗ್‌ಗಳಲ್ಲಿ ಅಬ್ಬರಿಸುತ್ತಿದ್ದಾರೆ.

ಏಪ್ರಿಲ್ 9 ರಂದು ಪ್ರಾರಂಭವಾದ ಐಪಿಎಲ್‌ನಲ್ಲಿ ಎಬಿ ಡಿವಿಲಿಯರ್ಸ್ ಆರ್ಸಿಬಿ ಪರ ಮಿಂಚಿನ ಆಟ ಪ್ರದರ್ಶಿಸಿದ್ದರು. ಬೆಂಗಳೂರು ತಂಡವನ್ನು ಎಂತಹದೆ ಕಷ್ಟದ ಸ್ಥಿತಿಯಿಂದ ಮೇಲೆತ್ತುವ ತಾಕತ್ತು ಎಬಿಡಿಗಿದೆ. ಹಾಗಾಗಿಯೇ ಅವರನ್ನು ಆರ್ಸಿಬಿಯ ಆಪತ್ಬಾಂದವ ಅಂತಲೂ ಅಭಿಮಾನಿಗಳು ಕರೆಯುತ್ತಾರೆ. ಜೊತೆಗೆ ಎಬಿಡಿ ಆಟವನ್ನು ಗಮನಿಸಿದ್ದವರು ಅವರಿಗೆ ಮಿ. 360 ಡಿಗ್ರಿ ಅಂತಲೂ ಕರೆಯುತ್ತಾರೆ. ಇದಕ್ಕೆ ಕಾರಣವೂ ಇದೆ. ಎಬಿಡಿ ಅಬ್ಬರಿಸುಲು ನಿಂತರೇ ಅವರು ಚೆಂಡನ್ನು ಮೈದಾನದ ಪ್ರತಿ ದಿಕ್ಕಿಗೂ ಅಟ್ಟುತ್ತಾರೆ ಹಾಗಾಗಿ ಅವರಿಗೆ ಈ ಹೆಸರು ಬಂದಿದೆ.

ಆತನ ನಿಜ ಹೆಸರನ್ನು ಮರೆಯಬಹುದು ಐಲಿಎಲ್​ನಲ್ಲಿ ಎಬಿಡಿ ಆಟ ಗಮನಿಸಿದ್ದ ಸೆಹ್ವಾಗ್ ಹೇಳಿದ್ದು ಹೀಗೆ, ಜನ ಆತನ ನಿಜ ಹೆಸರನ್ನು ಮರೆಯಬಹುದು. ಆದರೆ ಮಿಸ್ಟರ್ 360 ಡಿಗ್ರಿ ಎಂಬ ಹೆಸರನ್ನು ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಆತನಿಗೆ ಬೇರೆ ಹೆಸರನ್ನು ನೀಡಬೇಕು ಎಂದು ನನಗೆ ಅನಿಸುವುದಿಲ್ಲ ಯಾಕೆಂದರೆ ಈ ಹೆಸರಿಗೆ ಅದು ಸನಿಹವೂ ಸುಳಿಯಲಾರದು. 360 ಡಿಗ್ರಿ ಹೆಸರು ಅತ್ಯುತ್ತಮವಾಗಿದೆ ಎಂದು ಸೆಹ್ವಾಗ್ ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಡೆಲ್ಲಿ ವಿರುದ್ಧದ ಪ್ರದರ್ಶನಕ್ಕೆ ಸೆಹ್ವಾಗ್ ಮೆಚ್ಚುಗೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎಬಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವೀರೂ, ಹೈವೋಲ್ಟೇಜ್​ ಪಂದ್ಯದಲ್ಲಿ ಆರಂಭದಲ್ಲೇ ಪ್ರಮುಖ ವಿಕೆಟ್​ಗಳು ಉರುಳಿದ್ದಾಗ ಎಬಿ ಬ್ಯಾಟಿಂಗ್‌ಗೆ ಇಳಿದು 42 ಎಸೆತಗಳಲ್ಲಿ 75 ರನ್‌ ಬಾರಿಸಿದ್ದು ಅದ್ಭುತವಾಗಿತ್ತು ಎಂದ್ದರು. ಎಬಿ ಹೊರತುಪಡಿಸಿ ಬೇರೆ ಯಾವುದೇ ಆಟಗಾರನಾಗಿದ್ದರೂ ಅಂದಿನ ಪಂದ್ಯದಲ್ಲಿ ಎದುರಾಳಿ ಬೌಲರ್‌ಗಳು ಎಸೆಯುತ್ತಿದ್ದ ಶಾರ್ಟ್ ಎಸೆತಗಳಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸುತ್ತಿದ್ದರು. ಆದರೆ ಎಬಿ ಡಿವಿಲಿಯರ್ಸ್ ಮಾತ್ರವೇ ಚೆಂಡನ್ನು ಸರಿಯಾಗಿ ದಂಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.

ಕಳೆದ ಆವೃತ್ತಿಯಂತೆ, ಈ ಬಾರಿಯೂ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಉತ್ತಮ ಆರಂಭ ಮಾಡಿದ್ದರು. ಲೀಗ್‌ನ ಮೊದಲ ಪಂದ್ಯದಲ್ಲಿ ಅವರು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 27 ಎಸೆತಗಳಲ್ಲಿ 48 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು, ಈ ಪಂದ್ಯವನ್ನು ಆರ್‌ಸಿಬಿ 2 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದರೆ, ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ ಮತ್ತು 1 ರನ್ ಗಳಿಸುವ ಮೂಲಕ ಔಟಾದರು.

ಎಬಿ ಡಿವಿಲಿಯರ್ಸ್ ಹಿಂದಿರುಗುವ ಸೂಚನೆ ನೀಡಿದರು 2018 ರಲ್ಲಿ 15 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್ ಆಡಿದ ನಂತರ ನಿವೃತ್ತರಾದ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಅಂತರರಾಷ್ಟ್ರೀಯ ಪಿಚ್‌ಗೆ ಇಳಿಯಬಹುದು. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ದೇಶಕ ಗ್ರೇಮ್ ಸ್ಮಿತ್ ನೀಡಿದ್ದಾರೆ. ಆದರೆ, ಈ ಸೂಚನೆಯನ್ನು ಕಳೆದ ತಿಂಗಳು ಹೆಡ್ ಕೋಚ್ ಮಾರ್ಕ್ ಬೌಚರ್ ಕೂಡ ನೀಡಿದ್ದರು. ಟಿ 20 ವಿಶ್ವಕಪ್‌ಗೆ ಎಬಿ ಡಿವಿಲಿಯರ್ಸ್ ಹಿಂದಿರುಗುವ ಸೂಚನೆ ನೀಡಿದರು. 37 ವರ್ಷದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸ್ವತಃ ಐಪಿಎಲ್ 2021 ರ ಪೋಸ್ಟ್‌ಮ್ಯಾಚ್ ಪ್ರಸ್ತುತಿಯಲ್ಲಿ, ದಕ್ಷಿಣ ಆಫ್ರಿಕಾ ಪರ ಮತ್ತೊಮ್ಮೆ ಆಡುವುದು ಒಳ್ಳೆಯದು ಎಂದು ಹೇಳಿದರು. ಕಳೆದ ವರ್ಷ ನಾನು ಮಾರ್ಕ್ ಬೌಚರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದಲ್ಲದೆ ದೇಶದ ಪರ ಕ್ರಿಕೆಟ್​ ಆಡುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದರು.