AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಮನೆಗೆ ಬಂದ ಹೊಸ ಅತಿಥಿ; ಈ ಕಪ್ಪು ಸುಂದರನಿಗೆ ಸಾಕ್ಷಿ ಧೋನಿ ಇಟ್ಟ ಹೆಸರೇನು ಗೊತ್ತಾ?

ನಮ್ಮ ಮನೆಗೆ ಬಂದಿರುವ ಚೇತಕ್​ಗೆ ಸ್ವಾಗತ. ನೀನು ಲಿಲ್ಲಿಯನ್ನ ಭೇಟಿಯಾದ ನಿಜವಾದ ಜಂಟಲ್ಮೆನ್ ಎಸ್ಪಿ. ನಮ್ಮ ಕುಟುಂಬದಲ್ಲಿ ನಿಮ್ಮನ್ನ ಸಂತೋಷದಿಂದ ಸ್ವೀಕರಿಸಲಾಗಿದೆ.

ಧೋನಿ ಮನೆಗೆ ಬಂದ ಹೊಸ ಅತಿಥಿ; ಈ ಕಪ್ಪು ಸುಂದರನಿಗೆ ಸಾಕ್ಷಿ ಧೋನಿ ಇಟ್ಟ ಹೆಸರೇನು ಗೊತ್ತಾ?
ಧೋನಿ ಮನೆಗೆ ಬಂದ ಹೊಸ ಅತಿಥಿ
ಪೃಥ್ವಿಶಂಕರ
|

Updated on: May 09, 2021 | 5:52 PM

Share

ಕೊರೊನಾ ಅಟ್ಟಹಾಸಕ್ಕೆ ಐಪಿಎಲ್ ಮುಂದೂಡಿಕೆಯಾಗಿರೋದ್ರಿಂದ, ಆಟಗಾರರೆಲ್ಲಾ ತಮ್ಮ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಆದ್ರೀಗ ಧೋನಿ ಫಾರ್ಮ್ಹೌಸ್ಗೆ ಹೊಸ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಮಾಜಿ ನಾಯಕ, ಸಿಎಸ್ಕೆ ತಂಡದ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ಪ್ರಾಣಿ ಪ್ರಿಯ ಅನ್ನೋದು ನಿಮಗೆ ಗೊತ್ತಿರೋ ಸಂಗತಿ. ಅದ್ರಲ್ಲೂ ಶ್ವಾನಗಳೆಂದ್ರೆ ಧೋನಿಗೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ಧೋನಿ ಫಾರ್ಮ್ ಹೌಸ್ನಲ್ಲಿ ಸ್ಯಾಮ್, ಲಿಲ್ಲಿ, ಗಬ್ಬರ್ ಹಾಗೂ ಜೋಯಾ ಎನ್ನುವ ನಾಯಿಗಳನ್ನ ಸಾಕಿದ್ದಾರೆ.

ಈ ಕಪ್ಪು ಸುಂದರನಿಗೆ ಚೇತಕ್ ಎಂದು ಹೆಸರನ್ನಿಟ್ಟಿದ್ದಾರೆ ತಮ್ಮ ಮುದ್ದಿನ ನಾಯಿಗಳಿಗೆ ಸ್ವತಃ ಧೋನಿಯೇ ಪೊಲೀಸ್ ಡಾಗ್​ಗಳಿಗೆ ನೀಡುವ ಟ್ರೈನಿಂಗ್ ನೀಡ್ತಾರೆ. ಆದ್ರೀಗ ಐಪಿಎಲ್ ಮುಗಿಸಿ ರಾಂಚಿಗೆ ಬಂದಿರುವ ಧೋನಿ ಮನೆಗೆ, ಹೊಸ ಅತಿಥಿಯೊಂದು ಆಗಮಿಸಿದೆ. ಹಾಗಂತ ಧೋನಿ ಹೊಸ ತಳಿಯ ನಾಯಿಯೊಂದನ್ನ ಖರೀದಿಸಿದ್ದಾರೆ ಅಂದ್ಕೋಬೇಡಿ.. ಮಹೇಂದ್ರನ ಫಾರ್ಮ್ ಹೌಸ್ಗೆ ಬಂದಿರುವ ಹೊಸ ಅತಿಥಿ ಎಂದರೆ ಅದುವೆ ಕಪ್ಪು ಕುದುರೆ. ಈಗಾಗಲೇ ಧೋನಿಯ ಮುದ್ದಿನ ಮಡದಿ ಸಾಕ್ಷಿ ಈ ಕಪ್ಪು ಸುಂದರನಿಗೆ ಚೇತಕ್ ಎಂದು ಹೆಸರನ್ನಿಟ್ಟಿದ್ದಾರೆ. ಈ ಕುದುರೆಯನ್ನ ನೋಡಿ ಧೋನಿ ಮುದ್ದಿನ ನಾಯಿಗಳು, ಮೊದಲ ದಿನ ಆಶ್ಚರ್ಯದ ಕಣ್ಣಿನಿಂದ ನೋಡಿವೆ. ಆದ್ರೆ ಲಿಲ್ಲಿ ಎನ್ನುವ ಬಿಳಿ ನಾಯಿಯೊಂದು ಈ ಕಪ್ಪು ಸುಂದರನ ಸ್ನೇಹವನ್ನ ಸಂಪಾದಿಸಿದೆ.

ಚೇತಕ್​ಗೆ ಸ್ವಾಗತ ನಮ್ಮ ಮನೆಗೆ ಬಂದಿರುವ ಚೇತಕ್​ಗೆ ಸ್ವಾಗತ. ನೀನು ಲಿಲ್ಲಿಯನ್ನ ಭೇಟಿಯಾದ ನಿಜವಾದ ಜಂಟಲ್ಮೆನ್ ಎಸ್ಪಿ. ನಮ್ಮ ಕುಟುಂಬದಲ್ಲಿ ನಿಮ್ಮನ್ನ ಸಂತೋಷದಿಂದ ಸ್ವೀಕರಿಸಲಾಗಿದೆ. ಸಾಕ್ಷಿ ಧೋನಿ, ಧೋನಿ ಪತ್ನಿ

ಇಷ್ಟು ದಿನ ಶ್ವಾನ ಪ್ರಿಯನಾಗಿ ಗುರುತಿಸಿಕೊಂಡಿದ್ದ ಧೋನಿ, ಈಗ ಅಶ್ವ ಪ್ರಿಯನೂ ಆಗಿದ್ದಾರೆ. ಹೀಗಾಗಿ ಧೋನಿ ಅಭಿಮಾನಿಗಳು, ಧೊನಿ ಕುದುರೆ ಸವಾರಿ ಮಾಡೋದನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ